special story
ಕಾರ್ಖಾನೆಗಳಲ್ಲಿ ಕಾರ್ಮಿಕರ ಕೆಲಸದ ಅವಧಿಯನ್ನು 9 ಗಂಟೆಯಿಂದ 12 ಗಂಟೆಗಳವರೆಗೆ ಹೆಚ್ಚಿಸಲು ಮತ್ತು ಮಹಿಳೆಯರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಕುರಿತು ಕಾರ್ಖಾನೆಗಳ ಕರ್ನಾಟಕ ತಿದ್ದುಪಡಿ ವಿಧೇಯಕ 2023ಕ್ಕೆ ಒಪ್ಪಿಗೆ ನೀಡಿರುವುದಕ್ಕೆ ಹಲವು ಕಾರ್ಮಿಕ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ.
ಗುರುವಾರ ನಡೆದ ವಿಧಾನ ಮಂಡಲ ಅಧಿವೇಶನದಲ್ಲಿ ಕಾರ್ಖಾನೆಗಳ ವಿಧೇಯಕಕ್ಕೆ ತಿದ್ದುಪಡಿ ಮಾಡಿ, ಆಸಕ್ತಿ ಇರುವ ಮಹಿಳೆಯರಿಂದ ಲಿಖಿತ ಒಪ್ಪಿಗೆ ಪಡೆದು, ಸುರಕ್ತತಾ ವ್ಯವಸ್ಥೆಯನ್ನು ಖಾತ್ರಿಪಡಿಸಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿಸಬೇಕು ಎಂದು ಸೂಚಿಸಿದೆ
ಅದಕ್ಕಾಗಿ ಈ ಹಿಂದಿನಂತೆ ಕಾರ್ಖಾನೆಗಳಲ್ಲಿ ಒಂಭತ್ತು ಗಂಟೆ ಮಾತ್ರ ಕೆಲಸ, ಮಹಿಳಾ ಕಾರ್ಮಿಕರನ್ನು ನಿಗದಿತ ಅವಧಿಯವರೆಗೆ ಮಾತ್ರವೇ ಕೆಲಸ ಮಾಡಿಸಲು ಇದ್ದ ಅವಕಾಶವನ್ನು ತೆಗೆದು ಹಾಕಲಾಗಿದೆ. ಆದರೆ, ಸರ್ಕಾರದ ಈ ಹೊಸ ವಿಧೇಯಕಕ್ಕೆ ಕಾರ್ಮಿಕ ವಲಯದಿಂದ ವಿರೋಧಗಳು ವ್ಯಕ್ತವಾಗುತ್ತಿವೆ.
ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್) ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ, 8 ಗಂಟೆ ದುಡಿಮೆ, 8 ಗಂಟೆ ವಿಶ್ರಾಂತಿ, 8 ಗಂಟೆ ವೈಯಕ್ತಿಕ ಸಮಯ ಎಂಬ ಕಾರ್ಮಿಕರ ಅಂತರರಾಷ್ಟ್ರೀಯ ಹಕ್ಕಿಗೆ ಚ್ಯುತಿ ತಂದು ಕಾರ್ಮಿಕ ಮತ್ತು ಮಹಿಳಾ ವಿರೋಧಿ ಮಸೂದೆಯಾಗಿಸಿರುವುದು ವಿಷಾದನೀಯ” ಎಂದಿದ್ದಾರೆ.
ನಟ ಉಪೇಂದ್ರ ಪಕ್ಷಕ್ಕೆ “ಆಟೋ ರಿಕ್ಷಾ” ಅಧಿಕೃತವಾಗಿ ಚಿಹ್ನೆ ನೀಡಿದ ಕೇಂದ್ರ ಚುನಾವಣೆ ಆಯೋಗ