www.karnatakatv.net :ಬೆಂಗಳೂರು : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಶ್ವ ಆರೋಗ್ಯ ದಿನದ ಅಂಗವಾಗಿ ಇಂದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಈ ಸಂಧರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಜ್ಞೆಯನ್ನು ಮಾಡಿದ್ದಾರೆ.
“ಹೃದಯದ ಆರೋಗ್ಯ ರಕ್ಷಣೆಗಾಗಿ ಇನ್ನು ಮುಂದೆ ದಿನನಿತ್ಯ ಅರ್ಧ ತಾಸು ಬಿರುಸಿನ ನಡಿಗೆ ಮಾಡುತ್ತೇನೆ” ಎಂದು ಪ್ರತಿಜ್ಞೆಯನ್ನು ಮಾಡಿ, ನಂತರ ವಿಧಾನಸೌಧದಿಂದ ಕಬ್ಬನ್ ಉದ್ಯಾನವನ ಮಾರ್ಗವಾಗಿ ಕಂಠೀರವ ಕ್ರೀಡಾಂಗಣದವರೆಗೂ ಬಿರುಸಿನ ನಡಿಗೆ ನಡೆದರು. ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮತ್ತು ಸಂಸದ ಪಿ.ಸಿ. ಮೋಹನ್ ಸಾಥ್ ನೀಡಿದರು.
ಬಸವರಾಜ ಬೊಮ್ಮಾಯಿ ಈ ಕಾರ್ಯಕ್ರಮದಲ್ಲಿ ಮಾತನಾಡಿ, ಹೃದಯದ ಆರೋಗ್ಯಕ್ಕೆ ನಡಿಗೆ ತುಂಬಾ ಅವಶ್ಯಕ ಎಂಬುದನ್ನು ವೈದ್ಯರು ಹೇಳುತ್ತಾರೆ. ಆದಕಾರಣ ಎಲ್ಲರೂ ನಿತ್ಯ ನಡಿಗೆ ಮಾಡುವುದನ್ನು ರೂಢಿಸಿಕೊಳ್ಳಬೇಕು. ನಾನೂ ಯಾವಾಗಲಾದರೂ ಒಮ್ಮೆ ವಾಕಿಂಗ್ ಮಾಡುತ್ತಿದ್ದೆ ಆದರೆ ಈಗಿನಿಂದ ನಿಯಮಿತವಾಗಿ ನಾನು ವಾಕಿಂಗ್ ಮಾಡುತ್ತಿನಿ. ಹೊರಗಡೆ ಬಂದು ವಾಕಿಂಗ್ ಮಾಡುವುದು ಸಾಧ್ಯ ಆಗದಿದ್ದಾಗ ಮನೆಯಲ್ಲಿಯೇ ವಾಕರ್‌ನಲ್ಲಿ ಕನಿಷ್ಟ ಅರ್ಧತಾಸು ನಡೆಯುವಂತಹ ಪ್ರತಿಜ್ಞೆ ಮಾಡಿದ್ದೇನೆ ಎಂದು ಹೇಳಿದರು.
ಕರ್ನಾಟಕ ಟಿವಿ- ಬೆಂಗಳೂರು