ವಿಶ್ವ ದಾಖಲೆ ಬರೆದ ನಾಯಕ ಜಸ್ಪ್ರೀತ್ ಬುಮ್ರಾ 

ಬರ್ಮಿಂಗ್‍ಹ್ಯಾಮ್: ಟೆಸ್ಟ್ ನಾಯಕ ಜಸ್ಪ್ರೀತ್ ಬುಮ್ರಾ ವಿಶ್ವ ದಾಖಲೆ ಬರೆದಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಎರಡನೆ ದಿನದಾಟದ ಪಂದ್ಯದಲ್ಲಿ  ವೇಗಿ ಸ್ಟುವರ್ಟ್ ಬ್ರಾಡ್ ಅವರ ಒಂದೆ ಓವರ್‍ನಲ್ಲಿ ಬರೋಬ್ಬರಿ 35 ರನ್ ಚಚ್ಚಿ ವಿಶ್ವ ದಾಖಲೆ ಬರೆದಿದ್ದಾರೆ.

ಕ್ರಿಕೆಟ್ ದಂತ ಕತೆ ಬ್ರಿಯಾನ್ ಲಾರಾ ಅವರ ವಿಶ್ವದಾಖಲೆಯನ್ನು ಅಳಿಸಿ ಹಾಕಿದರು.

10ನೇ ಕ್ರಮಾಂಕದಲ್ಲಿ ಬಂದ ನಾಯಕ ಬುಮ್ರಾ ಪರಾಕ್ರಮ ಮೆರೆದರು. ವೇಗಿ ಸ್ಟುವರ್ಟ್ ಬ್ರಾಡ್ 84ನೇ ಓವರ್‍ನಲ್ಲಿ  ದಾಳಿಗಿಳಿದರು. ಮೊದಲ ಎಸೆತವನ್ನು ಬುಮ್ರಾ ಬೌಂಡರಿಗೆ ಅಟ್ಟಿದರು.

ತಾಳ್ಮೆ ಕಳೆದುಕೊಂಡಿದ್ದ ಬ್ರಾಡ್ ಎರಡನೆ ಎಸೆತವನ್ನು ಬೌನ್ಸರ್ ಹಾಕಿದರು.ಅದು ವೈಡ್ ಆಗಿದ್ದರಿಂದ ಚೆಂಡು ಬೌಂಡರಿ ಗೆರೆ ದಾಟಿತು. ಮೂರನೆ ಎಸೆತ ಕೂಡ ನೋ ಬಾಲ್ ಆಗಿತ್ತುಘಿ. ಬುಮ್ರಾ ಸಿಕ್ಸರ್ ಬಾರಿಸಿದರು. ನಂತರದ ಎಸೆತಗಳನ್ನು ಮಿಡ್ ಆನ್, ಫೈನ್‍ಲೆಗ್ ಹಾಗೂ ಮಿಡ್ ವಿಕೆಟ್‍ನತ್ತ ಮೂರು ಬೌಂಡರಿಗಳನ್ನು ಹೊಡೆದರು.

ನಿನ್ನೆ ಬುಮ್ರಾ ಅವರ ಬ್ಯಾಟಿಂಗ್ ಶೈಲಿ 15 ವರ್ಷಗಳ ಹಿಂದೆ 2007 ಚೊಚ್ಚಲ ಟಿ20 ವಿಶ್ವಕಪ್‍ನಲ್ಲಿ  ಇದೆ ಸ್ಟುವಾರ್ಟ್ ಬ್ರಾಡ್ ಓವರ್‍ನಲ್ಲಿ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ 6 ಎಸೆತದಲ್ಲಿ 6 ಸಿಕ್ಸರ್ ಹೊಡೆದಿದ್ದನ್ನು ನೆನೆಪಿಸಿತು.

ಇದೀಗ ಟೆಸ್ಟ್ ಇತಿಹಾಸದಲ್ಲೇ ಬ್ರಾಡ್ ದುಬಾರಿ ಬೌಲರ್ ಎನಿಸಿದ್ದಾರೆ.

ಬುಮ್ರಾ ಕ್ರಿಕೆಟ್ ದಂತಕತೆ ಬ್ರಿಯಾನ್ ಲಾರಾ ಅವರ ದಾಖಲೆಯನ್ನು ಅಳಿಸಿ ಹಾಕಿದರು.

18 ವರ್ಷಗಳ ಹಿಂದೆ ಲಾರಾ ದ.ಆಫ್ರಿಕಾದ  ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಸ್ಪಿನ್ನರ್ ರಾಬಿನ್ ಪೀಟರ್ಸನ್ ಓವರ್‍ನಲ್ಲಿ  4 ಬೌಂಡರಿ 2 ಸಿಕ್ಸರ್ ಸಿಡಿಸಿ ಒಟ್ಟು 28 ರನ್ ಹೊಡೆದಿದ್ದರು. ಮಾಜಿ ಆಸ್ಟ್ರೇಲಿಯಾ ಆಟಗಾರ ಜಾರ್ಜ್ ಬೈಲಿ ಕೂಡ ಒಂದೇ ಓವರ್‍ನಲ್ಲಿ 28 ರನ್ ಹೊಡೆದಿದ್ದರು.

 

 

 

 

About The Author