ಹೈಫೈ ಬಸ್ ಅಂದಾಕ್ಷಣ, ಫಾರಿನ್ಗಳಲ್ಲಿ ಸಂಚರಿಸೋ ವೋಲ್ವೋ, ಬೆನ್ಜ್ ಬಸ್ಗಳಷ್ಟೇ ಕಣ್ಮುಂದೆ ಬರುತ್ತೆ. ಆದ್ರೆ ಬೆಂಗಳೂರಲ್ಲೇ ಎಲ್ಲ ಬ್ರಾಂಡೆಂಡ್ ವಾಹನಗಳನ್ನೂ ಮೀರಿಸೋ ಒಂದು ವಾಹನ ತಯಾರಿಕಾ ಸಂಸ್ಥೆ ಇದೆ. ಇದರ ಹೆಸರು ವೀರ ವಾಹನ. ಅಪ್ಪಟ ಕನ್ನಡದ ಹೆಸರನ್ನೇ ಇಟ್ಟಿರೋ ಈ ವೀರ ವಾಹನ ಕಂಪನಿ ಇದೀಗ ಇಡೀ ವಿಶ್ವದಲ್ಲೇ ಅತಿ ಫಾಸ್ಟ್ ಆಗಿ ಚಾರ್ಜ್ ಆಗೋ ಬಸ್ ಒಂದನ್ನು ರೆಡಿ ಮಾಡಿದೆ. ಇದರ ಚಾರ್ಜಿಂಗ್ ಎಷ್ಟು ಫಾಸ್ಟ್ ಅಂದ್ರೆ ಕಾಫಿ ಕುಡಿಯೋ ಟೈಮಲ್ಲಿ ಬಸ್ ಕಂಪ್ಲೀಟ್ ಚಾರ್ಜಿಂಗ್ ಆಗಲಿದೆ.
ಇತ್ತೀಚಿನ ದಿನದಲ್ಲಿ ಎಲೆಕ್ಟ್ರಿಕ್ ವಾಹನಗಳು ರಸ್ತೆಗೆ ಹೆಚ್ಚೆಚ್ಚು ಇಳೀತಿದೆ. ಸದ್ಯಕ್ಕೆ ಸರ್ಕಾರದ ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ಗಳು ಹೆಚ್ಚು ಎಲೆಕ್ಟ್ರಿಕ್ ಬಸ್ಗಳನ್ನ ರಸ್ತೆಗೆ ಇಳಿಸಿದೆ. ಈಗ ಬೆಂಗಳೂರಿನ ವೀರ ವಾಹನ ಹೊಸ ಹೈಫೈ ಬಸ್ ಅನ್ನು ಪರಿಚಯಿಸಿದೆ.. ಈ ಬಸ್ಗೆ ವೀರ ಮಹಾ ಸಾಮ್ರಾಟ್ ಅಂತಲೂ ಹೆಸರಿಡಲಾಗಿದೆ.. ಈ ಬಸ್ ಕೇವಲ 15 ನಿಮಿಷದಲ್ಲಿ ಫುಲ್ ಚಾರ್ಜ್ ಆಗಲಿದೆ. ವೀರ ಮಹಾ ಸಾಮ್ರಾಟ್ ಬಸ್ 13 ಮೀಟರ್ ಉದ್ದದ್ದಾಗಿದೆ. 320 ಕಿಲೋ ವ್ಯಾಟ್ ಸಾಮರ್ಥ್ಯದ ಬ್ಯಾಟರಿ ಇದೆ. 1 ಮೆಗಾ ವ್ಯಾಟ್ ರ್ಯಾಪಿಡ್ ಚಾರ್ಜಿಂಗ್ ವ್ಯವಸ್ಥೆ ಇರೋದ್ರಿಂದ 15 ನಿಮಿಷದಲ್ಲಿ ಫುಲ್ ಚಾರ್ಜ್ ಆಗುತ್ತೆ.
ಬೇರೆಲ್ಲಾ ಎಲೆಕ್ಟ್ರಿಕ್ ಬಸ್ಗಿಂತಲೂ ಈ ಬಸ್ ನಿರ್ವಹಣಾ ವೆಚ್ಚ ಶೇ.30ರಷ್ಟು ಕಡಿಮೆ ಇದೆ.. ಒಟ್ಟಾರೆ ಬ್ಯಾಟರಿ ವಾರಂಟಿ 6 ಲಕ್ಷ ಕಿಲೋಮೀಟರ್ಗೆ ಕೊಟ್ಟಿದ್ದಾರೆ., ಈ ವೀರ ಮಹಾಸಾಮ್ರಾಟ್ ಬಸ್ ಮೊದಲ ಬಾರಿಗೆ ಬೆಂಗಳೂರು ಹಾಗೂ ಹೈದ್ರಾಬಾದ್ ನಡುವೆ ಸಂಚರಿಸಲಿದೆ. ಇಡೀ ವಿಶ್ವದಲ್ಲೇ ಫಾಸ್ಟ್ ಆಗಿ ಚಾರ್ಜ್ ಆಗೋ ಎಲೆಕ್ಟ್ರಿಕ್ ಬಸ್ ನಮ್ಮ ಬೆಂಗಳೂರಿನ ರಸ್ತೆಗೆ ಇಳಿತಿರೋದು ಖುಷಿಯ ವಿಚಾರ.