ಟಾಲಿವುಡ್ ಸಿನಿಮಾ ಇಂಡಸ್ಟ್ರೀಯ ಸ್ಟಾರ್ ಪ್ರೊಡ್ಯೂಸರ್ ದಿಲ್ ರಾಜು ನಿನ್ನೆ 50ನೇ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಈ ಪಾರ್ಟಿಯಲ್ಲಿ ಟಿಟೌನ್ ಸ್ಟಾರ್ಸ್ ಜೊತೆಗೆ ಸ್ಯಾಂಡಲ್ ವುಡ್ ಕಲಾವಿದರ ದಂಡೇ ನೆರೆದಿತ್ತು. ಕಾಮನ್ ಆಗಿ ಸೌತ್ ಸ್ಟಾರ್ಸ್ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುವುದೇ ಅಪರೂಪ. ಆಗೊಂದು ಹೀಗೊಂದು ನಡೆಯುವ ಅವಾರ್ಡ್ ಪ್ರೋಗ್ರಾಂನಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವುದು ಬಿಟ್ರೆ, ಇದೀಗ ದಿಲ್ ರಾಜು ಬರ್ತ್ ಡೇ ಪಾರ್ಟಿಯಲ್ಲಿ ಸೌತ್ ಸ್ಟಾರ್ಸ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ದಿಲ್ ರಾಜು ಹುಟ್ಟುಹಬ್ಬದಲ್ಲಿ ಕೆಜಿಎಫ್ ಟೀಂ
ದಿಲ್ ರಾಜು ಅಂದ್ರೆ ಟಿಟೌನ್ ನಲ್ಲಿ ದೊಡ್ಡ ಹೆಸ್ರಿದೆ. ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಖ್ಯಾತಿ ಅವರಿಗಿದೆ. ಹೀಗಿದ್ಮೇಲೆ ದಿಲ್ ರಾಜು ಬರ್ತ್ ಡೇಗೆ ದೊಡ್ಡ ದೊಡ್ಡ ಸ್ಟಾರ್ಸ್ ಹಾಜರಾಗದೆ ಇರೋದಿಕ್ಕೆ ಆಗುತ್ತಾ. ಖಂಡಿತ ದಿಲ್ ರಾಜು ಹುಟ್ಟುಹಬ್ಬಕ್ಕೆ ಮೆಗಾಸ್ಟಾರ್ ಚಿರಂಜೀವಿ, ಪವನ್ ಕಲ್ಯಾಣ್ ಸೇರಿದಂತೆ ಕೆಜಿಎಫ್ ಟೀಂನ ಯಶ್, ಪ್ರಶಾಂತ್ ನೀಲ್, ವಿಜಯ್ ಕಿರಗಂದೂರು ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು.
ಪ್ರಭಾಸ್, ಸಮಂತ, ರಾಮಚರಣ್ ಸಹ ಭಾಗಿ
ಇವರಷ್ಟೇ ಅಲ್ಲದೇ ಟಿಟೌನ್ ದೊಡ್ಮನೆ ಫ್ಯಾಮಿಲಿಯ ಕ್ಯೂಟ್ ಕಪಲ್ ಸಮಂತಾ-ನಾಗಚೈತನ್ಯ, ಡಾರ್ಲಿಂಗ್ ಪ್ರಭಾಸ್, ರಾಮ್ ಚರಣ್ ತೇಜ್, ವಿಜಯ್ ದೇವರಕೊಂಡ, ಪೂಜಾ ಹೆಗ್ಡೆ, ರಾಶಿ ಖನ್ನಾ ಸೇರಿದಂತೆ ಹಲವು ಸ್ಟಾರ್ಸ್ ಈ ಬರ್ತ್ ಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ. ಎಲ್ಲಾ ಸ್ಟಾರ್ಸ್ ಹೀರೋಗಳನ್ನು ಒಂದೇ ಪ್ರೇಮ್ ನಲ್ಲಿ ಸೆರೆಯಾಗಿದ್ದು, ಅಭಿಮಾನಿಗಳಿಗೆ ಸಖತ್ ಖುಷಿ ನೀಡಿದೆ.
