Film News : ಯಶ್ ಕಾಣೆಯಾಗಿದ್ದಾರೆ ಹುಡುಕಿ ಕೊಡಿ ಇದು ಅಭಿಮಾನಿಗಳ ಕೂಗು…ಹಾಗಿದ್ರೆ ಯಶ್ ಫ್ಯಾನ್ಸ್ ಹೇಳಲು ಕಾರಣವೇನು ? ! ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಎಲ್ಲಿ ಹೋದ್ರು…? ಏನಿದು ಯಶ್ ಫ್ಯಾನ್ಸ್ ಗೋಳು..! ಹೇಳ್ತೀವಿ ಈ ಸ್ಟೋರಿಯಲ್ಲಿ.
ಕೆಜಿಎಫ್ ಚಾಪ್ಟರ್ 2 ಬಹುವಾಗಿಯೇ ಸದ್ದು ಮಾಡಿ ಯಶ್ ಗೆ ಇನ್ನಷ್ಟು ಖ್ಯಾತಿ ತಂದುಕೊಟ್ಟಿತ್ತು. ಆದರೆ ತದನಂತರದ ಯಾವುದೇ ಅಪ್ ಡೇಟ್ ಕೂಡಾ ಯಶ್ ಅಧಿಕೃತವಾಗಿ ಹಂಚಿಕೊಂಡಿಲ್ಲ. ಯಾವ ಚಿತ್ರದಲ್ಲಿ ಯಶ್ ನಟಿಸಲಿದ್ದಾರೆ ಎಂಬ ಕುತೂಹಲ ಹಲವು ದಿನಗಳಿಂದ ಸತತವಾಗಿ ಎಲ್ಲರನ್ನೂ ಕಾಡುತ್ತಿದೆ.
ಹೌದು, ಕೆಜಿಎಫ್ ಚಾಪ್ಟರ್ 2 ಚಿತ್ರ ಬಿಡುಗಡೆಗೊಂಡ ಬಳಿಕ ಯಶ್ ಯಾವ ನಿರ್ದೇಶಕರ ಜತೆ ಚಿತ್ರ ಮಾಡಲಿದ್ದಾರೆ ಎಂಬ ಕುತೂಹಲ ಮೂಡಿದ್ದು, ಒಂದೂವರೆ ವರ್ಷ ಸಮೀಪಿಸುತ್ತಿದ್ದರೂ ಸಹ ತಮ್ಮ ಮುಂದಿನ ಚಿತ್ರದ ಬಗೆಗಿನ ಯಾವುದೇ ಸುಳಿವನ್ನೂ ಸಹ ಯಶ್ ಬಿಟ್ಟುಕೊಟ್ಟಿಲ್ಲ.
ಅಭಿಮಾನಿಗಳಲ್ಲಿ ಇದ್ದ ಕುತೂಹಲ ಹಾಗೂ ಪ್ರಶ್ನೆಗಳು ಬೇಸರ ಹಾಗೂ ಹತಾಶೆಯಾಗಿ ಪರಿವರ್ತನೆಗೊಳ್ಳುತ್ತಿದ್ದು, ತಾಳ್ಮೆ ಕಳೆದುಕೊಂಡ ಯಶ್ ಅಭಿಮಾನಿಗಳು ಪದೇಪದೆ ಯಶ್ ಮುಂದಿನ ಚಿತ್ರದ ಕುರಿತು ಪ್ರಶ್ನೆಗಳನ್ನು ಕೇಳುತ್ತಲೇ ಇದ್ದಾರೆ. ಹಲವಾರು ಬಾರಿ ಈ ಕುರಿತು ಪ್ರಶ್ನೆಗಳನ್ನು ಹಾಕಿ ಉತ್ತರ ಸಿಗದೇ ಬೇಸರಕ್ಕೊಳಗಾಗಿದ್ದ ಯಶ್ ಫ್ಯಾನ್ಸ್ ಇದೀಗ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಮುಂದಿನ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಳ್ಳುವಂತೆ ಪ್ರಶ್ನೆ ಇಟ್ಟಿದ್ದಾರೆ.
ಇಷ್ಟು ದಿನಗಳು ನೇರವಾಗಿ ಯಶ್ 19 ಬಗ್ಗೆ ಮಾಹಿತಿಯನ್ನು ಕೊಡಿ ಎಂದು ಹೇಳುತ್ತಿದ್ದ ಯಶ್ ಫ್ಯಾನ್ಸ್ ಈ ಬಾರಿ ಯಶ್ ಕಾಣೆಯಾಗಿದ್ದಾರೆ ಎಂದು ವಿಭಿನ್ನವಾಗಿ ಪ್ರಕಟಣೆಯೊಂದನ್ನು ಪೋಸ್ಟ್ ಮಾಡುವುದರ ಮೂಲಕ ಯಶ್ 19 ಚಿತ್ರವನ್ನು ಬೇಗ ಘೋಷಿಸುವಂತೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ. ಕಾಣೆಯಾಗಿರುವವರ ಬಗ್ಗೆ ಹಾಕಲಾಗುವ ಪ್ರಕಟಣೆ ಎಡಿಟ್ ಮಾಡಿರುವ ಯಶ್ ಫ್ಯಾನ್ಸ್ ತಮ್ಮ ನೆಚ್ಚಿನ ನಟನ ಫೋಟೊವನ್ನು ಬಳಸಿ “ಕಾಣೆಯಾಗಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ನಮ್ಮ ಕನ್ನಡ ಚಿತ್ರರಂಗದ ಹೆಮ್ಮಯ ನಟ. ಕೆಜಿಎಫ್ ಬಾರಿ ಸಕ್ಸಸ್‌ನಿಂದ ತನ್ನ ಮುಂದಿನ ಚಿತ್ರದ ಘೋಷಣೆ ಮಾಡುತ್ತೇನೆ ಎಂದು ಹೇಳಿ ಅಭಿಮಾನಿಗಳಲ್ಲಿ ನಿರಾಸೆ ಉಂಟು ಮಾಡಿದ್ದಾರೆ.
ಕೂಡಲೇ ಯಾರಾದರೂ ಅವರನ್ನು ಸಂಪರ್ಕಿಸಿ. ಕೇವಲ ಘೋಷಣೆ ಮಾಡೋಕೆ ಎರಡು ವರ್ಷ ತಗೊಂಡ್ರೆ ಹೇಗೆ? ಅಭಿಮಾನಿಗಳ ಎಮೋಷನ್ಸ್ ಜತೆ ಆಟ ಆಡ್ತಾ ಇದ್ದೀರಾ. ಎಲ್ಲರೂ ಅವರಿವರ ನಟರ ಚಿತ್ರಗಳ ಅಪ್‌ಡೇಟ್ ತಗೊಂಡು ಎಂಜಾಯ್ ಮಾಡ್ತಾ ಇದ್ದಾರೆ. ನೀವು ಮಾತ್ರ ಇನ್ನೂ ಘೋಷಣೆಯನ್ನೇ ಮಾಡಿಲ್ಲ. ಯಾವುದೇ ಸುಳಿವನ್ನೂ ಸಹ ಕೊಟ್ಟಿಲ್ಲ. ತುಂಬಾ ಬೇಜಾರಾಗುತ್ತೆ ಬಾಸ್. ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ” ಎಂದು ಬರೆಯಲಾಗಿದೆ.
Rashmika mandanna-ವಿಜಯ್ ದೇವರಕೊಂಡ ಹಾಕಿರುವ ಅಂಗಿ ತರಾ ಇದೆ ಅಲ್ವಾ ..?
Upendra: ಸೆಪ್ಟೆಂಬರ್ 15 ಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ “ಬುದ್ದಿವಂತ- 2” ಚಿತ್ರ ಬಿಡುಗಡೆ