www.karnatakatv.net :ಬೆಂಗಳೂರು: ಸ್ಯಾಂಡಲ್ ವುಡ್ ನ ಮೋಸ್ಟ್ ಪ್ರಾಮಿಸಿಂಗ್ ಆಕ್ಟರ್, ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಚಿತ್ರದಿಂದ ಇಡೀ ದೇಶದ ಗಮನ ಸೆಳೆದಿದ್ದಾರೆ. ಆಕ್ಟಿಂಗ್ ಜೊತೆ ಅಷ್ಟೇ ಡೆಡಿಕೇಟಿಂಗ್ ಆಗಿ ಕೆಲಸ ಮಾಡೋ ಯಶ್ ಹಿಂದೆ ಯಶಸ್ಸು ಅನ್ನೋದು ನೆರಳಿನಂತೆ ಫಾಲೋ ಮಾಡ್ತಿದೆ. ಈ ಮಧ್ಯೆ ಕೆಜಿಎಫ್ 2 ರಿಲೀಸ್ ಆಗೋದಕ್ಕೆ ಅಭಿಮಾನಿಗಳು ಸಿಕ್ಕಾಪಟ್ಟೆ ಕ್ಯೂರಿಯಸ್ ಆಗಿ ಕಾಯ್ತಿದ್ದಾರೆ.
ಆದ್ರೆ ಕೆಜಿಎಫ್ ಸಿನಿಮಾ ಶೂಟಿಂಗ್ ಶುರುವಾಗೋ ಮೊದಲೇ ಯಶ್ ಕಿರಾತಕ 2 ಚಿತ್ರಕ್ಕೆ ಸೈನ್ ಮಾಡಿದ್ರು. ಅಲ್ಲದೆ ನಿರ್ಮಾಪಕ ಜಯಣ್ಣ, ಕಾಲ್ ಶೀಟ್ ಕೊಟ್ಟಿದ್ದ ಯಶ್ ಗೆ ಅಡ್ವಾನ್ಸ್ ಹಣವನ್ನೂ ಕೊಟ್ಟಿದ್ರು. ಇನ್ನು ಚಿತ್ರದ ಶೂಟಿಂಗ್ ಕೂಡ ಶುರುವಾಗಿತ್ತು. ಇದರ ಜೊತೆಗೇ ಕೆಜಿಎಫ್ ಚಿತ್ರದಲ್ಲೂ ಯಶ್ ಬ್ಯುಸಿಯಾಗಿಬಿಟ್ರು. ಒಂದೇ ಸಮಯದಲ್ಲಿ ಎರಡೂ ಚಿತ್ರಗಳನ್ನ ಟೈಮ್ ಇಲ್ಲದ ಕಾರಣ ಯಶ್ ಬ್ಯಾಲೆನ್ಸ್ ಮಾಡಲಾಗಲಿಲ್ಲ. ಹೀಗಾಗಿ ಯಶ್ ಕೆಜಿಎಫ್ ಶೂಟಿಂಗ್ ಮುಂದುವರಿಸಿದ್ರು. ಆದ್ರೆ ಅಲ್ಲಿ ರಾಕಿಂಗ್ ಸ್ಟಾರ್ ನಂಬಿಕೊಂಡು ಪ್ರೊಡ್ಯೂಸರ್ ಜಯಣ್ಣ ಅದಾಗಲೇ ಶೂಟಿಂಗ್ ಗಾಗಿ 3 ಕೋಟಿ ರೂಪಾಯಿ ಖರ್ಚು ಮಾಡಿದ್ರು.
ಕಳೆದ ವರ್ಷ ಕೆಜಿಎಫ್ ರಿಲೀಸ್ ಆಗಿದೆ ಅಲ್ಲದೆ ಕೆಜಿಎಫ್ 2 ಮುಂದಿನ ವರ್ಷ ಏಪ್ರಿಲ್ ನಲ್ಲಿ ತೆರೆಗಪ್ಪಳಿಸೋದಕ್ಕೆ ಸಿದ್ಧವಾಗ್ತಿದೆ. ಈ ಮಧ್ಯೆ ಕಿರಾತಕ 2 ಚಿತ್ರದಲ್ಲಿ ಯಶ್ ಆಕ್ಟ್ ಮಾಡ್ತಾರೆ ಅನ್ನೋ ಸಣ್ಣ ಭರವಸೆ ಇಟ್ಟುಕೊಂಡಿದ್ದ ಪ್ರೊಡ್ಯೂಸರ್ ಜಯಣ್ಣಗೆ ಇದೀಗ ನಿರಾಸೆಯಾಗಿದೆ. ಯಾಕಂದ್ರೆ ಯಶ್ ನಾನು ಈ ಸಿನಿಮಾಕ್ಕೆ ಟೈಂ ಕೊಡೋದಕ್ಕೆ ಸಾಧ್ಯವಾಗ್ತಿಲ್ಲ. ಹೀಗಾಗಿ ನಿಮ್ಮ ಅಡ್ವಾನ್ಸ್ ಹಣ ವಾಪಸ್ ಮಾಡ್ತೀನಿ ಅಂತ ಹೇಳಿ ಯಶ್ ಬಡ್ಡಿ ಸಮೇತ ಹಣ ಕೊಟ್ಟುಬಿಟ್ಟಿದ್ದಾರೆ.
ಒಂದೇ ಟೈಮ್ ನಲ್ಲಿ ಒಪ್ಪಿಕೊಂಡಿದ್ದ ಈ ಚಿತ್ರಗಳಲ್ಲಿ ಯಶ್ ಒಂದೇ ಲುಕ್ ನಲ್ಲಿ ಆಕ್ಟ್ ಮಾಡೋದಕ್ಕೆ ಸಾಧ್ಯವಾಗಲಿಲ್ಲ. ಕೆಜಿಎಫ್ ನಲ್ಲಿ ಗಡ್ಡಧಾರಿ ಡಾನ್ ಆಗಿ ಕಾಣಿಸಿಕೊಳ್ಳಬೇಕಿತ್ತು. ಆದ್ರೆ ಕಿರಾತಕ 2 ಸಿನಿಮಾದಲ್ಲಿ ಕುರುಚಲು ಗಡ್ಡ ಹೊಂದಿದ ಸಾಮಾನ್ಯ ಹಳ್ಳಿ ಹೈದನಾಗಿ ಬಣ್ಣ ಹಚ್ಚಬೇಕು. ಒಂದೇ ಟೈಮ್ ಫ್ರೇಮ್ ನಲ್ಲಿ ಇದು ಸಾಧ್ಯವಾಗೋದಿಲ್ಲ ಅನ್ನೋದನ್ನ ಅರಿತ .ಯಶ್ ತಮ್ಮ ಕಾಲ್ ಶೀಟ್ ಕ್ಯಾನ್ಸಲ್ ಮಾಡಿದ್ದಾರೆ.
ಆದ್ರೆ ಮತ್ತೊಂದು ರೀತಿ ಹೇಳೋದಾದ್ರೆ, ಕೆಜಿಎಫ್ ಚಿತ್ರ ರಿಲೀಸ್ ಆದ ಮೇಲೆ ಯಶ್ ಫೇಸ್ ವ್ಯಾಲ್ಯೂ ಜಾಸ್ತಿಯಾಗಿದೆ. ಇದರಿಂದ ಸಹಜವಾಗಿಯೇ ಯಶ್ ಸಂಭಾವನೆ ಕೂಡ ಹೆಚ್ಚಾಯ್ತು. ಆದ್ರೆ ಇದಕ್ಕೂ ಮೊದಲು ಒಪ್ಪಿಕೊಳ್ಳಲಾಗಿದ್ದ ಕಿರಾತಕ ಚಿತ್ರಕ್ಕೆ ಯಶ್ ಸಂಭಾವನೆ ಕಡಿಮೆಯಾಯ್ತು ಅನ್ನೋ ಕಾರಣಕ್ಕೆ ಯಶ್ ಜಯಣ್ಣ ಕಾಲ್ ಶೀಟ್ ಕ್ಯಾನ್ಸಲ್ ಮಾಡಿದ್ದಾರೆ ಅನ್ನೋ ಸುದ್ದಿ ಕೂಡ ಗಾಂಧಿನಗರದಲ್ಲಿ ಹರಿದಾಡ್ತಿದೆ. ಇಷ್ಟೇ ಅಲ್ಲ, ತಮ್ಮ ಈಗಿನ ಇಮೇಜ್‌ಗೆ ಸೂಟ್ ಆಗುವಂಥಹಾ ಚಿತ್ರಗಳನ್ನಷ್ಟೆ ಒಪ್ಪಿಕೊಳ್ಳಲು ಯಶ್ ಡಿಸೈಡ್ ಮಾಡಿದ್ದಾರಂತೆ.
ಕರ್ನಾಟಕ ಟಿವಿ- ಬೆಂಗಳೂರು