- Advertisement -
www.karnatakatv.net : ಯಶ್: ಕೆಜಿಎಫ್: ಇಡೀ ದೇಶವೇ ಕೊರೊನಾ ಅಟ್ಟಹಾಸಕ್ಕೆ ನಲುಗಿದೆ. ವ್ಯಾಪಾರ ವಹಿವಾಟುಗಳು ನಿಂತು ಆರ್ಥಿಕ ಸಂಕಷ್ಟ ಎದುರಾಗಿದೆ. ಕನ್ನಡ ಚಿತ್ರರಂಗ ಇದಕ್ಕೆ ಹೊರತಾಗಿಲ್ಲ. ಕನ್ನಡದಲ್ಲಿ ಸಾಲು ಸಾಲು ಚಿತ್ರಗಳು ಸೆಟ್ಟೇರುತ್ತಿವೆ. ಬಹು ಕೋಟಿ ವೆಚ್ಚದ ಬಹು ನಿರೀಕ್ಷಿತ ಚಿತ್ರ ಕೆಜಿ ಎಫ್ ಸೇರಿದಂತೆ ಹಲವು ಬಿಗ್ ಬಜೆಟ್ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಲಾಕ್ ಡೌನ್ ಸಡಿಲಿಕೆಯಾಗಿ ಅನ್ಲಾಕ್ 3.0 ಜಾರಿಯಾದಾಗಲೂ ಥಿಯೇಟರ್ಗಳಿಗೆ ಅವಕಾಶ ನೀಡಿಲ್ಲ. ಇನ್ನಾದರೂ ಸರ್ಕಾರ ಚಿತ್ರಮಂದಿರಗಳಿಗೆ ಸಂಪೂರ್ಣ ಅವಕಾಶ ನೀಡುವುದೇ ಎಂದು ಕಾದು ನೋಡಬೇಕಿದೆ.
- Advertisement -