Friday, November 14, 2025

Latest Posts

ಯಶ್ ತಾಯಿ ಪುಷ್ಪಾಗೆ ದೀಪಿಕಾ ದಾಸ್ ಖಡಕ್ ವಾರ್ನ್ – ಯಶ್ ತಾಯಿ ಪುಷ್ಪಾ vs ದೀಪಿಕಾ ದಾಸ್!

- Advertisement -

ಸ್ಯಾಂಡಲ್‌ವುಡ್‌ನಲ್ಲಿ ಈಗ ಮತ್ತೊಂದು ಫ್ಯಾಮಿಲಿ ಫೈಟ್ ತೀವ್ರ ಚರ್ಚೆಗೆ ಕಾರಣವಾಗಿದೆ. ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ ಮತ್ತು ನಟಿ ದೀಪಿಕಾ ದಾಸ್ ನಡುವೆ ವಾಕ್ ಸಮರ ನಡೆದಿದೆ. ಇತ್ತೀಚೆಗಷ್ಟೇ ಪುಷ್ಪಾ ಅವರು ದೀಪಿಕಾ ದಾಸ್ ವಿರುದ್ಧ ನೀಡಿದ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ವಿವಾದಕ್ಕೆ ಹೊಸ ತಿರುವು ನೀಡಿದ್ದಾರೆ.

ಈಗ ಯಶ್ ತಾಯಿ ಪುಷ್ಪಾ vs ದೀಪಿಕಾ ದಾಸ್ ಎಂಬಂತಾಗಿದೆ. ಯೂಟ್ಯೂಬ್ ಚಾನೆಲ್‌ಗಳಿಗೆ ನೀಡಿದ ಸಂದರ್ಶನದಲ್ಲಿ ಪುಷ್ಪಾ ಅವರು ದೀಪಿಕಾ ಇನ್ನೂ ಚಿಕ್ಕವಳು. ಈ ವಿಷಯಗಳ ಬಗ್ಗೆ ನಾನು ಈಗಲೇ ಹೆಚ್ಚು ಮಾತನಾಡಲು ಇಚ್ಛಿಸುವುದಿಲ್ಲ ಅಂತ ಹೇಳಿದ್ದರು.

ಇದಕ್ಕೂ ಮುನ್ನ, ಪುಷ್ಪಾ ಅವರು ದೀಪಿಕಾ ದಾಸ್ ಏನನ್ನೂ ಸಾಧಿಸಿಲ್ಲ ಅಂತ ಅಣುಕಿಸಿದ್ರು. ಜೊತೆಗೆ, ದೀಪಿಕಾಗೆ ನನ್ನನ್ನು ಕಂಡರೆ ಭಯ ಇದೆ ಎಂಬ ಮಾತುಗಳು ಈಗ ಬಿರುಗಾಳಿ ಎಬ್ಬಿಸಿವೆ. ಈ ಹೇಳಿಕೆಗಳಿಗೆ ತಿರುಗೇಟು ನೀಡಿದ ದೀಪಿಕಾ, ಸಾಮಾಜಿಕ ಜಾಲತಾಣಗಳಲ್ಲಿ ಬರೆದು, ನನ್ನ ಯೋಗ್ಯತೆ ಬಗ್ಗೆ ಮಾತನಾಡುವ ಹಕ್ಕು ಯಾರಿಗೂ ಇಲ್ಲ. ಕಲಾವಿದರು ಪರಸ್ಪರ ಗೌರವದಿಂದ ವರ್ತಿಸಬೇಕು ಎಂದು ಸ್ಪಷ್ಟವಾಗಿ ಎಚ್ಚರಿಸಿದ್ದಾರೆ.

ದೀಪಿಕಾ ದಾಸ್, ಪುಷ್ಪಾ ಅವರ ವಿರುದ್ಧ ಪ್ರತಿಕ್ರಿಯೆ ನೀಡಿ, ಇಲ್ಲಿವರೆಗೂ ಯಾರ ಹೆಸರನ್ನು ಹೇಳಿಕೊಂಡು ಬಂದಿಲ್ಲ. ಮುಂದೇನು ಬರಲ್ಲ. ಅಮ್ಮ ಆದರೂ ಸರಿ, ದೊಡ್ಡಮ್ಮ ಆದರೂ ಸರಿ, ಪುಷ್ಪಮ್ಮ ಆದರೂ ಸರಿ, ನನ್ನ ಬಗ್ಗೆ ಹೀನಾಯವಾಗಿ ಮಾತನಾಡೋ ಯೋಗ್ಯತೆ ಯಾರಿಗೂ ಇಲ್ಲ. With due respect to the stars of our industry ಎಂದು ಹೇಳಿದ್ದಾರೆ.

ಇದು ಕೆಲ ಕುಟುಂಬದ ಗೊಂದಲದಂತೆ ತೋರುತ್ತಿದ್ದರೂ, ಇಬ್ಬರೂ ಬಹಿರಂಗವಾಗಿ ಪರಸ್ಪರ ವಿರೋಧಿಸುವ ಈ ಬೆಳವಣಿಗೆ, ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

- Advertisement -

Latest Posts

Don't Miss