ಸಿದ್ದರಾಮಯ್ಯ ಉತ್ತರಾಧಿಕಾರಿಯ ಯತೀಂದ್ರ ಹೇಳಿಕೆಗೆ ಕುಣಿಗಲ್ ಶಾಸಕ ರಂಗನಾಥ್ ಟಾಂಗ್ ಕೊಟ್ಟಿದ್ದಾರೆ. ಇಂಥಾ ಹೇಳಿಕೆಗಳಿಂದ ಯಾವುದೇ ಗೊಂದಲ ಆಗುವುದಿಲ್ಲ. ಹೈಕಮಾಂಡ್ ತೆಗೆದುಕೊಂಡಿರುವ ನಿರ್ಧಾರ ಅನ್ನೋದು ಎಲ್ಲರಿಗೂ ಗೊತ್ತು. ನೀವು ಚಿಂತೆ ಮಾಡ್ಬೇಡಿ ಕಾಂಗ್ರೆಸ್ ಪಕ್ಷ ಚೆನ್ನಾಗಿದೆ. ಹೀಗಂತ ಕುಣಿಗಲ್ ಶಾಸಕ ರಂಗನಾಥ್ ತಿರುಗೇಟು ಕೊಟ್ಟಿದ್ದಾರೆ.
ಮೊದಲು ಗ್ಯಾರಂಟಿ ಸ್ಕೀಮ್ ತಲುಪಿದೆಯಾ ಇಲ್ವಾ ಅನ್ನೋದನ್ನ ತಿಳಿದುಕೊಳ್ಳಬೇಕಿದೆ. ನೆರೆ ಹಾನಿ ಪರಿಹಾರವನ್ನು ಯಾವ ರೀತಿ ಸಂತ್ರಸ್ತರಿಗೆ ತಲುಪಿಸಬೇಕು. ರಾಗಿ ಖರೀದಿ ಕೇಂದ್ರ ಶುರು ಮಾಡಿದ್ದೇವೆ. ಮನೆಗಳು, ಡಾಂಬರೀಕರಣ ಮಾಡಬೇಕಿದೆ. ನವೆಂಬರ್‌ನಲ್ಲಿ ಈ ಎಲ್ಲದರ ಬಗ್ಗೆಯೂ ಕ್ರಾಂತಿ ಆಗಲಿದೆ. ಡಿಸೆಂಬರ್‌ನಲ್ಲೂ ದೊಡ್ಡ ಕ್ರಾಂತಿಯ ಚರ್ಚೆ ಮಾಡ್ಕೊಂಡು, ಕಾಂಗ್ರೆಸ್ ಪಕ್ಷ ಅಭಿವೃದ್ಧಿಯತ್ತ ಹೋಗುತ್ತದೆ.
ಸಚಿವ ಸಂಪುಟ ಪುನಾರಚನೆ ಮುಖ್ಯಮಂತ್ರಿ ಅವರಿಗೆ ಬಿಟ್ಟದ್ದು. ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ. ನಾನು 2ನೇ ಬಾರಿ ಶಾಸಕನಾಗಿ ಇನ್ನೂ ಬಹಳಷ್ಟು ಜವಾಬ್ದಾರಿಗಳಿವೆ. ಪಕ್ಷದಲ್ಲಿ ನಾನೊಬ್ಬ ಕೆಳಹಂತದ ಕಾರ್ಯಕರ್ತ. ಈ ವಿಚಾರದಲ್ಲಿ ನನ್ನಿಂದ ಹೇಳಿಕೆ ತೆಗೆದುಕೊಂಡು, ಬುದ್ಧಿವಾದ ಹೇಳುವಂತದ್ದು ಏನಿಲ್ಲ. ನಮ್ಮ ದೃಷ್ಟಿಯಲ್ಲಿ ಕಾಂಗ್ರೆಸ್ ಪಕ್ಷ ಒಂದು ಕುಟುಂಬ ಇದ್ದಂತೆ. ಯಾವುದೇ ಕಾರಣಕ್ಕೂ ವಿರೋಧ ಪಕ್ಷಕ್ಕೆ ಆಹಾರವಾಗದಂತೆ ನಾವು ಹೇಳಿಕೆ ಕೊಡಬೇಕು ಅನ್ನೋದನ್ನಷ್ಟೇ ಹೇಳಬಲ್ಲೆ ಅಂತಾ, ಶಾಸಕ ರಂಗನಾಥ್ ಹೇಳಿದ್ರು.
ಇನ್ನು, ಯತೀಂದ್ರ ಹೇಳಿಕೆ ವಿರುದ್ಧ ನಿನ್ನೆಯಷ್ಟೇ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಕಿಡಿಕಾರಿದ್ದಾರೆ. ಇದೊಂದು ರೀತಿಯ ಎಳಸು ಸ್ಟೇಟ್‌ಮೆಂಟ್. ನಿಮ್ಮ ಮಾತು ಇನ್ನೂ ಬಲಿತಿಲ್ಲ. ನಿಮ್ಮ ಮಾತಲ್ಲಿನ್ನೂ ಶಕ್ತಿ ಇಲ್ಲ. ಯಾವುದೇ ರೀತಿ ಗೊಂದಲ ಸೃಷ್ಟಿಬಾರದು ಎಂದು ಗುಡುಗಿದ್ರು.

