Friday, August 29, 2025

Latest Posts

ಯತ್ನಾಳ್ 5 ಲಕ್ಷ ಕೊಟ್ಟ್ರೆ , ನಾವು ಮದುವೆ ಮಾಡಿಸಿ, ಕೆಲಸ ಕೊಡುತ್ತೀವಿ: ಪ್ರಮೋದ್ ಮುತಾಲಿಕ್

- Advertisement -

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಾಲಿಕ್ ಮಾತನಾಡಿದ್ದು, ಗಣೇಶ ಚತುರ್ಥಿಗೆ ಧರ್ಮ ಕೇಳಿ ವ್ಯಾಪಾರ ವಹಿವಾಟು ಮಾಡಿ ಎಂದಿದ್ದಾರೆ.

ಹುಬ್ಬಳ್ಳಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಮುತಾಲಿಕ್, ಧರ್ಮ ಕೇಳಿ ಪಹಲ್ಗಾಮ್‌ನಲ್ಲಿ ನಮ್ಮವರನ್ನ ಭೀಕರ ಕೊಲೆ ಮಾಡಲಾಗಿದೆ. ಹಲಾಲ್ ಇದ್ದ ವಸ್ತುಗಳನ್ನ ಖರೀದಿ ಮಾಡಿದ್ರೆ ಶಾಸ್ತ್ರಕ್ಕೆ ವಿರುದ್ಧ ಆಗುತ್ತದೆ. ಧರ್ಮದ ಆಧಾರದ ಮೇಲೆ ಗಣೇಶ ಹಬ್ಬ ಆಗಬೇಕು. ಚೀನಾ ದೇಶದ ಗಣೇಶ ಮೂರ್ತಿಗಳು ನಮ್ಮ ದೇಶಕ್ಕೆ ಬಂದಿದೆ. ಮಣ್ಣಿನ ಗಣೇಶನ ‌ಮೂರ್ತಿ ಖರೀದಿ ಮಾಡಿ ಎಂದಿದ್ದಾರೆ.

ಅಲ್ಲದೇ, ಧರ್ಮಸ್ಥಳದಲ್ಲಿ ಕೌರ್ಯ ಮೆರೆದವರ ಮೇಲೆ ಕ್ರಮ ಆಗಬೇಕು. ಸೌಜನ್ಯ ಕೊಲೆ ಪ್ರಕರಣದ ಐಓ ವಿಚಾರಣೆ ಮಾಡಬೇಕೆಂದು ಕೋರ್ಟ್ ಆದೇಶ ಮಾಡಿದೆ. ಆದ್ರೆ ಅದು ಇಲ್ಲಿಯವರೆಗೂ ಆಗಿಲ್ಲ. ಈಗ ಎಸ್‌ಐಟಿ ತನಿಖೆ ಅವಶ್ಯಕತೆ ಏನೂ ಇತ್ತು…? ಬುರಡೆ ಇಡಿದುಕೊಂಡ ಬಂದ ಅನಾಮಿಕ ವ್ಯಕ್ತಿಯ ಬ್ರೇನ್ ಮ್ಯಾಪಿಂಗ್ ಆಗಬೇಕಿತ್ತು. ಇದರ ಮಧ್ಯ ಸರ್ಕಾರ ತರಾತುರಿಯಲ್ಲಿ ಎಸ್‌ಐಟಿ ರಚನೆ ಮಾಡಿದೆ.

ಯಾರೋದ್ದೋ ಒತ್ತಡಕ್ಕೆ ಮಣಿದು ಸರ್ಕಾರ ಎಸ್‌ಐಟಿ ರಚನೆ ಮಾಡಿದೆ. ಇಲ್ಲಿಯವರೆಗೂ ಏನೂ ಸಿಕ್ಕಿಲ್ಲ, ಅನಾಮಿಕ ವ್ಯಕ್ತಿಯನ್ನ ಒದ್ದು ಒಳಗಡೆ ಹಾಕಬೇಕು. ಸಿದ್ದರಾಮಯ್ಯನವರು ಹಿಂದು ವಿರೋಧಿಗಳು ಮತ್ತು ನಾಸ್ತಿಕವಾದಿಗಳಾಗಿದ್ದಿರಿ. ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ ಸಿದ್ದರಾಮಯ್ಯನವರಿಗೆ ಕಪಾಳಕ್ಕೆ ಹೊಡೆದ ರೀತಿಯಲ್ಲಿ ಹೇಳಿದ್ದಾರೆ. ವ್ಯವಸ್ಥಿತವಾಗಿ ಇದರಲ್ಲಿ ಎಡಪಂಥಿಗಳು ಹಿಂದು‌ಗಳನ್ನ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಮುಸ್ಲಿಂ ಯುವತಿಯನ್ನ ಪ್ರೀತಿಸಿದ್ದಕ್ಕೆ ಕೊಪ್ಪಳದಲ್ಲಿ ಹಿಂದು ಯುವಕನನ್ನ ಭೀಕರ ಕೊಲೆ ಮಾಡಲಾಗಿದೆ. ಮುಸ್ಲಿಂ ಯುವಕರು ಹಿಂದು ಯುವತಿಯರನ್ನ ಪ್ರೀತಿ ಮಾಡಿದ್ರೆ ನಾವು ಏನ್ ಮಾಡಬೇಕು. ನಾವು ದೇವಸ್ಥಾನದ ಮುಂದೆ ಕೊಲೆ ಮಾಡಬೇಕೇ..? ಮುಸ್ಲಿಂ ಧರ್ಮ ಗುರುಗಳು ಮತ್ತು ಜಮೀರ ಅಹ್ಮದ್ ಅವರೇ ಬಾಯಲ್ಲಿ ಏನೂ ಇಟ್ಟುಕೊಂಡಿದ್ದಿರಿ..? ಹಿಂದು ಯುವಕರ ಕೊಲೆ ಇದೆಲ್ಲವೂ ಕಾಂಗ್ರೆಸ್ ಸರ್ಕಾರ ಕೃಪಾಪೋಷಿತ. ಮುಸ್ಲಿಂ ಯುವತಿಯರನ್ನ ಮದುವೆಯಾದ್ರೆ ಐದು ಲಕ್ಷ ಕೊಡುತ್ತೇನೆಂದ ಯತ್ನಾಳ ಹೇಳಿಕೆ ಸರಿ ಇದೆ. ಯತ್ನಾಳ ಐದು ಲಕ್ಷ ಕೊಟ್ಟ್ರೆ , ನಾವು ಮದುವೆ ಮಾಡಿಸಿ, ಕೆಲಸ ಕೊಡುತ್ತೀವಿ ಎಂದು ಮುತಾಲಿಕ್ ಹೇಳಿದ್ದಾರೆ.

- Advertisement -

Latest Posts

Don't Miss