ಹುಬ್ಬಳ್ಳಿಯಲ್ಲಿ ಕಾಂಗ್ರೆಸ್, ಬಿಜೆಪಿ, ಯಡಿಯೂರಪ್ಪ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ ಯತ್ನಾಳ್

Hubli News: ಹುಬ್ಬಳ್ಳಿ: ಹುಬ್ಬಳ್ಳಿಗಿಂದು ಭೇಟಿ ನೀಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಧ್ಯಮದ ಜತೆ ಮಾತನಾಡಿದ್ದು, ಅಖಿಲಭಾರತ ವೀರಶೈವ ಮಹಾಸಭೆ ಎಲ್ಲರಿಗೂ ಆಹ್ವಾನ ಪತ್ರಿಕೆ ಕಳುಹಿಸಿದ್ದಾರೆ.

ಪಂಚಪೀಠಗಳು ಮತ್ತು ಲಿಂಗಾಯತರು ಒಂದೇ. ವೀರಶೈವರು‌ ಶಿವನ ಭಕ್ತರು. ಲಿಂಗಪೂಜೆಯನ್ನು ಮಾಡ್ತಾರೆ. ಉದ್ದೇಶಪೂರ್ವಕವಾಗಿ ತಮ್ಮ ವೈಭವಿಕರಣಕ್ಕಾಗಿ ಕಂದಕ ನಿರ್ಮಾಣ ಮಾಡಿದ್ದಾರೆ. ಕಮ್ಯೂನಿಸ್ಟ್‌ ಮೈಂಡೆಡ್ ಸ್ವಾಮೀಜಿಗಳು ಮಾಡ್ತಿದ್ದಾರೆ. ಅವರಿಗೆ ‌ಲಿಂಗಾಯತ ಧರ್ಮ ಉದ್ದಾರ ಮಾಡೋದು ಬೇಕಾಗಿಲ್ಲಾ ಎಂದು ಯತ್ನಾಳ್ ಕಿಡಿಕಾರಿದ್ದಾರೆ.

ಹಿಂದೂ ಶಬ್ದ ಅಪಮಾನ ಮಾಡೋದೆ ಕೆಲವರ ಉದ್ದೇಶವಾಗಿದೆ. ಬಸವಧರ್ಮ ಹೇಳೋರು ಭಕ್ತರ ಮನೆಯಲ್ಲಿ ಯಾಕೆ ಪಾದಪೂಜೆ ಮಾಡಿಕೊಳ್ತಾರೆ? ಲಿಂಗಾಯತ ಮತ್ತು ವೀರಶೈವ ಒಂದಾದಾಗ ಸಮಾನತೆ ಬರ್ತಾರೆ. ಲಿಂಗಾಯತ, ವೀರಶೈವ ಅಂತ ಧರ್ಮದ ಮಾನ್ಯತೇ ನೀಡಿಲ್ಲಾ. ಧರ್ಮದಲ್ಲಿ ಹಿಂದೂ ಬರೆಸಬೇಕು. ಜಾತಿ ಕಾಲಂ ನಲ್ಲಿ ವೀರಶೈವ, ಲಿಂಗಾಯತ ಅಂತ ಬರೆಸಬೇಕು. ಉಪಜಾತಿ ಕಾಲಂ ನಲ್ಲಿ ತಮ್ಮ ಉಪಜಾತಿ ಬರೆಸಬೇಕು. ಮೀಸಲಾತಿ ಕೇಳ್ತಿರೋದು ಸನಾನತ ಹಿಂದೂ ಧರ್ಮದ ಉಪಜಾತಿಗಳಿಂದ. ಮುಸ್ಲಿಂರಿಗೆ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ಬರಲ್ಲಾ ಎಂದು ಯತ್ನಾಳ್ ಹೇಳಿದ್ದಾರೆ.

ಅದನ್ನು ವೀರಶೈವ ಮಹಾಸಭೆ ಖಂಡಿಸಲಿಲ್ಲಾ. ಪಂಚಮಸಾಲಿ ಗಳು ಮೀಸಲಾತಿ ಕೇಳಲು. ಹೋದ್ರೆ ಅವರ ಮೇಲೆ‌ ಲಾಠಿ ಚಾರ್ಜ್ ಮಾಡಲಾಯಿತು. ಸಮಾಜಕ್ಕೆ ಅಪಮಾನ ಮಾಡಿದಾಗ ಯಡಿಯೂರಪ್ಪ, ಖಂಡ್ರೆ, ಶಾಮನೂರು ಏನು ಮಾಡ್ತಿದ್ದರು..? ಎಂದು ಯತ್ನಾಳ್ ಪ್ರಶ್ನಿಸಿದ್ದಾರೆ.

ಯಡಿಯೂರಪ್ಪ ತಗೆಯಲು ಮುಂದಾದಾಗ ಮಹಾಸಭೆ ಬಳಸಿಕೊಂಡರು. ಯಡಿಯೂರಪ್ಪ ನ ಉದ್ದೇಶ ಲಿಂಗಾಯತ ರಿಗೆ ಓಬಿಸಿ ನೀಡೋದಲ್ಲಾ. ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡರು. ಹಿಂದೂತ್ವ ನೋಡಿ ಬಿಜೆಪಿ ಗೆ ಹಿಂದೂಗಳು ಓಟು ಹಾಕಿದ್ದಾರೆ. ಯಡಿಯೂರಪ್ಪ ಮುಸುಡಿ ನೋಡಿ ಓಟು ಹಾಕಿಲ್ಲಾ. ಶೆಟ್ಟರ, ವಿಜಯೇಂದ್ರ, ಕೋರೆ ಮೇಲೆ ಕ್ರಮ ಕೈಗೊಳ್ಳಬೇಕು. ಲಿಂಗಾಯತ ಹಿಂದೂ ಸನಾತನ ಧರ್ಮದ ಒಂದು ಭಾಗ ಎಂದು ಯತ್ನಾಳ್ ಹೇಳಿದ್ದಾರೆ.

2050 ಕ್ಕೆ ಭಾರತ ಇಸ್ಲಾಂ ರಾಷ್ಟ್ರ ಆಗುತ್ತೆ ಅಂತ ಹೇಳಲಾಗುತ್ತದೆ. ನಾವು ಹಿಂದೂ ಅನ್ನಲು ನಾಚಿಕೆ ಪಡ್ತಿದ್ದರೆ. ಬಿಜೆಪಿ ಯಲ್ಲಿರದೇ ಸ್ವಾಮೀಜಿಗಳು ಬೆನ್ನು ಹತ್ತಿ ಹೋಗಲಿ. ವಿಜಯೇಂದ್ರ ಧರ್ಮ ಬರೆಸೋ‌ ವಿಚಾರ ಸ್ವಾಮಿಗಳಿಗೆ ಬಿಟ್ಟಿದ್ದೇವೆ ಅಂತ ಹೇಳ್ತಿದ್ದಾರೆ. ಹಿಂದೂ ಅಲ್ಲಾ ಅಂದ್ರೆ ಬಿಜೆಪಿ ಯಲ್ಲಿ ಯಾಕೆ ಇರ್ತೀರಿ.

ವೀರಶೈವ ಮಹಾಸಭೆ ಯನ್ನು ಮೂರು ಕುಟುಂಬಗಳು ತಮ್ಮ ಸ್ವತ್ತು ಮಾಡಿಕೊಂಡಿವೆ. ಸಿದ್ದರಾಮಯ್ಯ ಮುಸ್ಲಿಂ ರ ಅಭಿವೃದ್ಧಿ ಬಿಟ್ಟರೆ ಬೇರೆಯವರಿಗೆ ಏನು ಮಾಡಿಲ್ಲಾ. ಹಾಲು ಮತ ಸಮಾಜದಲ್ಲಿ ಹುಟ್ಟಿ ಅದಕ್ಕೆ ಅಪಮಾನ ಮಾಡ್ತಿದ್ದಾರೆ. ಹಿಂದೂ ಅಂತ ಬರೆಸೋ ತಾಕತ್ ಇದ್ರೆ ಸಮಾವೇಶ ಕ್ಕೆ ಹೋಗಿ. ಇಲ್ಲವೇ ರಾಜೀನಾಮೆ ನೀಡಲಿ ಎಂದು ಯತ್ನಾಳ್ ಹೇಳಿದ್ದಾರೆ.

ಪಂಚಮಸಾಲಿ ಗಳು ಇಂದಿನ ಸಭೆಗೆ ಹೋಗಬಾರದು. ಬಸವಣ್ಣನ ವಿಚಾರ ಹೇಳೋರು ಎಷ್ಟು ಅಂತರ್ಜಾತಿ ವಿವಾಹ ಮಾಡಿದ್ದಾರೆ? ಜಯಮೃತ್ಯುಂಜಯ ಸ್ವಾಮೀಜಿ ಕೂಡೂ ಹೇಳಿದ್ದೇವೆ. ಧರ್ಮದಲ್ಲಿ ಹಿಂದೂ ಅಂತ ಬರೆಸಬೇಕು ಅಂತ ಹೇಳಿದ್ದೇವೆ. ಇದನ್ನು ಬರೆಸಿದ್ರೆನೆ ನಾವು ಅವರ ಜೊತೆ ಮುಂದುವರಿಯುತ್ತೇವೆ. ಇಲ್ಲದಿದ್ದರೆ ನಿಮ್ಮ ಜೊತೆ ನಮ್ಮ ವ್ಯವಹಾರ ಇಲ್ಲಾ ಅಂತ ಹೇಳಿದ್ದೇವೆ. ಹಿಂದೂ ಧರ್ಮಕ್ಕೆ ವಿರೋಧ ಮಾಡೋರು ನಮ್ಮ ಸ್ವಾಮೀಜಿಗಳು ಅಲ್ಲಾ ಎಂದು ಖಡಾಖಂಡಿತವಾಗಿ ವಾಗ್ದಾಳಿ ನಡೆಸಿದ್ದಾರೆ.

ಪಂಚಮಸಾಲಿ ಗಳಿಗೆ ಮೀಸಲಾತಿ ನೀಡದಂತೆ ಯಡಿಯೂರಪ್ಪ ಒತ್ತಡ ಹೇರಿದ್ದರು. ಬೊಮ್ಮಾಯಿ ಮೇಲೆ ಯಡಿಯೂರಪ್ಪ ಒತ್ತಡ ಹೇರಿದ್ದರು. ಯಡಿಯೂರಪ್ಪ ಪಂಚಮಸಾಲಿ, ಕುಡು ಒಕ್ಕಲಿಗರ ವಿರೋಧಿ. ಯಡಿಯೂರಪ್ಪ ಗಾಣಿಗರನ್ನು ಮಾತ್ರ 2 ಎ ಗೆ ಸೇರಿಸಿದ್ದ. ಉಳಿದವರನ್ನು ಸೇರಿಸಲಿಲ್ಲಾ. 2 ಸಿ 2 ಡಿ ಯನ್ನು ಮೋದಿ, ಅಮಿತ್ ಶಾ ಒತ್ತಾಯದ ಮೇರೆಗೆ ಬೊಮ್ಮಾಯಿ ನೀಡಿದ್ರು.

ಇದೊಂದು ಮೂರ್ಖ ಸರ್ವೆ. ಲಿಂಗಾಯತ ಕ್ರಿಶ್ಚಿಯನ್. ಇವರನ್ನು ಎದುರಲ್ಲಿ ಹೊಡೆಯಬೇಕು. ಇದನ್ನು ಮಾಡಿದ ಅಯೋಗ್ಯರ ಕಪಾಳಕ್ಕೆ ಹೊಡಿಯಬೇಕು. ಎಲ್ಲಾ ಸಮಾಜ ಛಿದ್ರ ಮಾಡಿ ಮುಸ್ಲಿಂ ರ ಕೈಯಲ್ಲಿ ನೀಡಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ಸೋನಿಯಾಗಾಂಧಿ ಅವರು ಚರ್ಚೆ ನ ಮದರ್ ಆಗಲು ಹೊರಟಿದ್ದಾರೆ. ಕೂಡಲೇ ಈ ಜಾತಿ ಗಣತಿಯನ್ನು ಕೈ ಬಿಡಬೇಕು. ರಾಜ್ಯದಲ್ಲಿ ಲಿಂಗಾಯತ ರ ದೊಡ್ಡ ಶಕ್ತಿ ಇದೆ. ಇದನ್ನು ವ್ಯವಸ್ಥಿತವಾಗಿ ಒಡೆಯಲು ಕಾಂಗ್ರೆಸ್ ಮುಂದಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

ನನ್ನ ಯಡಿಯೂರಪ್ಪ ಹೊರಗೆ ಹಾಕಿದ್ದಾನೆ. ಹೊರಗೆ ಹಾಕಿ ಏನು ಸಾಧಿಸಿದ್ದಾನೆ..? ಹಿಂದುತ್ವ ಬಿಟ್ಟರೆ ರಾಜ್ಯದಲ್ಲಿ ಬಿಜೆಪಿಗೆ ಅಸ್ತಿತ್ವವೇ ಇಲ್ಲಾ. ರಾಜ್ಯದ ಸಿಎಂ ಯಾರಗಬೇಕು ಅಂತ ರಾಜ್ಯದ ಜನ ತೀರ್ಮಾನ ಮಾಡ್ತಾರೆ. ಯಡಿಯೂರಪ್ಪ ಮಾಡಲ್ಲಾ. ಹಿಂದೂ ಅಂತ ಬರೆಸದಂತೆ ಹೇಳಿರೋ

ವಿಜಯೇಂದ್ರ ಮೇಲೆ ಬಿಜೆಪಿ ಯಾವ ಕ್ರಮ ಕೈಗೊಳ್ಳುತ್ತೆ ನೋಡೋಣಾ. ಕೂಡಲೇ ಅವರಿಗೆ ಶೋಕಾಸ್ ನೀಡಬೇಕು. ಬಿಜೆಪಿ ಗೆ ಹೋಗಲು ನಾನು ಕೈಕಾಲು ಹಿಡಿಯಲ್ಲಾ. ಅವರಾಗಿ ಕರೆದ್ರೆ ಮಾತ್ರ ಬಿಜೆಪಿ ಗೆ ಹೋಗ್ತೇನೆ. ನನಗೆ ಇಂಗ್ಲಿಷ್ ಬರಲ್ಲಾ, ಹೀಗಾಗಿ ರಾಷ್ಟ್ರ ರಾಜಕಾರಣಕ್ಕೆ ಹೋಗಲ್ಲಾ. ವಿಜಯೇಂದ್ರ ರಾಷ್ಟ್ರ ರಾಜಕಾರಣಕ್ಕೆ ಹೋಗಲಿ. ಮೂರು ಮಂದಿಗೆ ನಮ್ಮ ಮಾನ್ಯತೆ ಇಲ್ಲಾ. ನಮ್ಮ ಸಮಾಜ ತುಳಿದ ಯಡಿಯೂರಪ್ಪ ವೇದಿಕೆಗೆ ನಮ್ಮವರು ಹೋಗಬಾರದು.

ಏಕತಾ ಸಮಾವೇಶ ಬ್ಲ್ಯಾಕ್ ಮೇಲೆ ಸಮಾವೇಶ. ಎರಡು ಪಕ್ಷದವರು ತಮ್ಮವರನ್ನು ಬ್ಲ್ಯಾಕ್ ಮೇಲ್ ಮಾಡಲು ಸಮಾವೇಶ ಮಾಡ್ತಿದ್ದಾರೆ. ಜಾಮದಾರ್ ಎಂದಾದ್ರು ಲಿಂಗಾಯತ ರಿಗೆ ಸಹಾಯ ಮಾಡಿದ್ದಾರಾ? ರಾಜ್ಯದಲ್ಲಿ ಹಿಂದೂಗಳು ಒಂದಾಗುತ್ತಿದ್ದಾರೆ. ಮದ್ದೂರಿನಲ್ಲಿ ಕೂಡಾ ಹಿಂದೂಗಳ ಒಂದಾಗಿದ್ದಾರೆ. ಕಾಂಗ್ರೆಸ್ ಮುಸ್ಲಿಂ ರ ಮೇಲಿನ ಕೇಸ್ ಹಿಂಪಡೆದರು. ಆದ್ರೆ ಬಿಜೆಪಿ ಅಧಿಕಾರದಲ್ಲಿದ್ದಾಗ ಹಿಂದೂ ಗಳ ಮೇಲಿನ ಕೇಸ್ ಹಿಂಪಡೆಯಲಿಲ್ಲಾ ಎಂದು ಬಿಜೆಪಿ ಬಗ್ಗೆ ಯತ್ನಾಳ್ ಬೇಸರ ವ್ಯಕ್ತಪಡಿಸಿದ್ದಾರೆ.

ಹಿಂದೂತ್ವ ಉಳಿಯಬೇಕದರೆ ಯತ್ನಾಳ ಸಿಎಂ ಆಗಬೇಕು ಅಂತ ಜನ ಹೇಳ್ತಿದ್ದಾರೆ. ಹಿಂದೂ ಅಂತ ಹೇಳದೆ ಹೇದ್ರೆ ಸ್ವಾಮಿಗಳು ತಮ್ಮ ಖಾವಿ ತ್ಯಾಗ ಮಾಡಿಬಿಡಲಿ. ಖಾವಿ ಸನಾತನ ಧರ್ಮದ ಸಂಕೇತ. ಹಿಂದೂ ಧರ್ಮ ಬೇಡವಾದ್ರೆ ಖಾವಿ ಕಳಚಿಬಿಟ್ಟು ನಿಮಗಿಷ್ಟವಾದ ಬಟ್ಟೆ ಹಾಕಿಕೊಳ್ಳಿ ಎಂದು ಸ್ವಾಮೀಜಿಗಳ ವಿರುದ್ಧ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

ಯಡಿಯೂರಪ್ಪ ಲಿಂಗಾಯತ ನೇ ಅಲ್ಲಾ. ಅವರು ಬಳಿಗಾರರು. ರಾಜ್ಯದಲ್ಲಿ ಅವರ ಸಮಾಜದ ಇಪ್ಪತ್ತು ಸಾವಿರ ಮತಗಳು ಇಲ್ಲಾ. ಆದ್ರು ಲಿಂಗಾಯತ ಅಂತ ಹೇಳಿಕೊಂಡು ಅಡ್ಡಾಡುತ್ತಿದ್ದಾನೆ ಎಂದು ಯಡಿಯೂರಪ್ಪ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

About The Author