Friday, September 12, 2025

Latest Posts

ನಾವು ಸಿಡಿದೆದ್ರೆ ಅಷ್ಟೇ.. ಯತ್ನಾಳ್ ಖಡಕ್ ಎಚ್ಚರಿಕೆ

- Advertisement -

ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ, ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ್ದಾರೆ. ಈದ್‌ ಮಿಲಾದ್‌ಗೆ ಡಿಜೆ ಅನುಮತಿ ಕೊಡ್ತಾರೆ. ಪಾಕಿಸ್ತಾನದ ಧ್ವಜ ಹಾರಿಸೋಕೆ ಅನುಮತಿ ಕೊಡ್ತಾರೆ. ಪಾಕ್‌ ಪರ ಘೋಷಣೆ ಕೂಗಬಹುದು. ಪ್ಯಾಲೆಸ್ತೇನ್‌ ಧ್ವಜ ಹಾರಿಸೋಕೂ ಅನುಮತಿ ಕೊಡ್ತಾರೆ. ಬರೀ 15 ನಿಮಿಷ ಕೊಡಿ. ಪೊಲೀಸರು ಹಿಂದೆ ಸರಿಯಿರಿ. ಇಡೀ ಹಿಂದೂಗಳನ್ನು ಮುಗಿಸಿಬಿಡ್ತೇನೆ ಅನ್ನುವ ಪ್ರಚೋದನಾಕಾರಿ ಮಾತುಗಳಿಗೂ ಅನುಮತಿ ಕೊಡ್ತಾರೆ.

ಸುಪ್ರೀಂಕೋರ್ಟಿನ ಆದೇಶವಿದ್ರೂ, ಪರ್ಮಿಷನ್‌ ಇಲ್ಲದಿದ್ರೂ, ದಿನಕ್ಕೆ 5 ಬಾರಿ ಸಲ ಅವರು ಹೊದರುತ್ತಾರೆ. ಕಾಂಗ್ರೆಸ್‌ ಬಂದ್ಮೇಲೆ ಮುಸಲ್ಮಾನರ ಸರ್ಕಾರ ಆಗಿದೆ. ದಲಿತರಿಗೆ, ಹಿಂದುಳಿದವರಿಗೆ ರಕ್ಷಣೆ ಕೊಡ್ತಿಲ್ಲ. ನಮ್ಮ ಡಿಜೆಗೆ ಅನುಮತಿ ಇಲ್ಲ ಅಂತೀರಾ. ಅವರಿಗೆ ಡಿಜೆಗೆ ಎಲ್ಲೂ ತೊಂದರೆ ಮಾಡಿಲ್ಲ.

ಹಿಂದೂಗಳ ಮೇಲೆಯೇ ಏಕೆ ದಬ್ಬಾಳಿಕೆ. ಮುಸಲ್ಮಾನರೇ ವೋಟ್‌ ಹಾಕಿ ಆಯ್ಕೆಯಾಗಿದ್ದೀರಾ? ಮುಂದಿನ ಬಾರಿ ಮುಸಲ್ಮನರಷ್ಟೇ ವೋಟ್‌ ಹಾಕಬೇಕಾಗುತ್ತೆ. ಮದ್ದೂರಿನಲ್ಲಿ ಕಲ್ಲು ತೂರಾಟ ಮಾಡ್ತಿರೋದು ಶಾಂತಿ ಸುವ್ಯವಸ್ಥೆನಾ?. ಇಡೀ ದೇಶದಲ್ಲಿ ಈದ್‌ ಮಿಲಾದ್‌ ಮೆರವಣಿಗೆ ಮೇಲೆ ಎಲ್ಲಾದ್ರೂ ಹಿಂದೂಗಳು ಕಲ್ಲು ತೂರಿದ್ದಾರಾ?. ಇಂಥಾ ಕೆಟ್ಟ ಕೆಲಸ ಮಾಡೋದು ಮುಸಲ್ಮಾನರು.

ನಾವು ಬಹಳ ವೀಕ್‌ ಅಂತಲ್ಲಾ.. ನಾವು ಸಿಡಿದೆದ್ರೆ ಯಾರೂ ಉಳಿಯುವುದಿಲ್ಲ. ಹಿಂದೂಗಳ ಹಬ್ಬ, ಮೆರವಣಿಗೆ ವೇಳೆ, ಮಸೀದಿಗಳೆನ್ನೆಲ್ಲಾ ಚೆಕ್‌ ಮಾಡಬೇಕು ಕೇವಲ ನಾಟಕಕ್ಕೆ ಶಾಂತಿ ಸಭೆ ಮಾಡೋದಲ್ಲ. ಮೊದಲು ಮದ್ದೂರಿನಲ್ಲಿರುವ ಅಕ್ರಮ ಮಸೀದಿ ಧ್ವಂಸ ಮಾಡಿ. 500 ಹಿಂದೂಗಳ ಮೇಲೆ ಕೇಸ್‌ ಹಾಕಿದ್ದೀರಲ್ಲ. ಹಿಂದೂಗಳು ಕಲ್ಲು ಹೊಡೆದಿದ್ರಾ?. 2028ಕ್ಕೆ ರಾಜ್ಯದ ಜನರು ಸರಿಯಾಗಿ ಉತ್ತರ ಕೊಡ್ತಾರೆ ಅಂತಾ, ಚಿತ್ರದುರ್ಗದಲ್ಲಿ ಯತ್ನಾಳ್‌ ಗುಡುಗಿದ್ದಾರೆ.

- Advertisement -

Latest Posts

Don't Miss