Sunday, October 5, 2025

Latest Posts

ಕಾಂಗ್ರೆಸ್‌ ಬುಡಕ್ಕೆ ಕೈ ಇಟ್ಟ ಯತ್ನಾಳ್‌!

- Advertisement -

ಧರ್ಮಸ್ಥಳ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ಹಿಂದೆ ಗಾಂಧಿ ಕುಟುಂಬದ ಷಡ್ಯಂತ್ರ ಇದೆಯಂತೆ. ಹೀಗಂತ, ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಗಂಭೀರ ಆರೋಪ ಮಾಡಿದ್ದಾರೆ.

ಹಿಂದೂ ಧಾರ್ಮಿಕ ಸ್ಥಳಗಳಿಗೆ ಅಪಚಾರ ಮಾಡುವ ಸಲುವಾಗಿ ಸೋನಿಯಾ ಗಾಂಧಿ, ರಾಹುಲ್‌ಗಾಂಧಿ ಒತ್ತಾಯಕ್ಕೆ, ಎಸ್‌ಐಟಿ ರಚನೆ ಮಾಡಲಾಗಿದೆ. ತನಿಖೆಯಲ್ಲಿ ಒಂದಾದರೂ ಬುರುಡೆ, ಮೂಳೆಗಳು ಸಿಕ್ಕಿವೆಯೇ? ಪಾನ್‌ಪರಾಗ್‌ ಚೀಟಿ ಸಿಕ್ಕಿದೆ. ಅದಕ್ಕಾಗಿ 20 ಅಡಿ ಅಗೆಯಬೇಕಿತ್ತೇ? ಹಿಂದೂಗಳಲ್ಲಿ ಯಾರೂ 20 ಅಡಿ ಆಳದವರೆಗೂ ಶವಗಳನ್ನು ಹೂತಿಡುವುದಿಲ್ಲ.

ಹಿಂದೂ ಧರ್ಮವನ್ನು ಅಪಮಾನಿಸುವ ಉದ್ದೇಶಕ್ಕೆ ಎಸ್‌ಐಟಿ ರಚಿಸಲಾಗಿದೆ. ಈ ಮೊದಲು ಅಯ್ಯಪ್ಪಸ್ವಾಮಿ ದೇವಸ್ಥಾನದ ವಿರುದ್ದ ಷಡ್ಯಂತ್ರ ಮಾಡಲಾಗಿದೆ. ಚಾಮುಂಡಿ ದೇವಸ್ಥಾನವನ್ನು ಅಪವಿತ್ರ ಮಾಡುವ ಪ್ರಯತ್ನಗಳಾಗಿವೆ. ಹಿಂದೂ ದೇವಸ್ಥಾನಗಳನ್ನು ಗುರಿ ಮಾಡಿಕೊಂಡಿದ್ದಾರೆ. ಅವರ ನಿರ್ದೇಶನ ಸಿದ್ದರಾಮಯ್ಯ ಅವರಿಗೆ ಬಂದಿದೆ ಎಂದರು.

10 ಜನ ಸತ್ತಿದ್ದಾರೆ ಎಂದರೂ ನನಗೆ ಗೊತ್ತಿಲ್ಲ, ಗಮನಕ್ಕೆ ಬಂದಿಲ್ಲ ಅಂತಾ ಗೃಹ ಸಚಿವರು ಹೇಳುತ್ತಾರೆ. ಉಪಮುಖ್ಯಮಂತ್ರಿ ಅವರಂತೂ ಕೇಳುವಂತೆಯೇ ಇಲ್ಲ. ರಾಜ್ಯದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ಎಲ್ಲದರಲ್ಲೂ ಹಣ ಹೊಡೆಯಲು ಮುಂದಾಗಿದ್ದಾರೆ. ಆಡಳಿತ ನಿಷ್ಕ್ರಿಯವಾಗಿದೆ. ಎಲ್ಲಾ ದರಗಳು ದುಪ್ಪಟ್ಟು ಆಗಿವೆ. ಸ್ಟ್ಯಾಂಪ್‌ ಡ್ಯೂಟಿಯನ್ನು ಶೇಕಡ 1ರಿಂದ 2ಕ್ಕೆ ಹೆಚ್ಚಿಸಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಕೊಟ್ಟಿರುವ 60 ಸಾವಿರ ಕೋಟಿ ರೂ.ಗಳನ್ನು ವಸೂಲಿ ಮಾಡಲು, ಎಲ್ಲಾ ದರಗಳನ್ನು ಹೆಚ್ಚಿಸಲಾಗಿದೆ.

ತಮ್ಮ ಮಾಲೀಕತ್ವದ ಸಕ್ಕರೆ ಕಾರ್ಖಾನೆಗಾಗಿ 113 ಎಕರೆಯನ್ನು ಖರೀದಿಸಿದ್ದು, ಆದರ ನೋಂದಣಿ ಮಾಡಿಸಲು ಪ್ರಯತ್ನಿಸಿದಾಗ ಸರ್ವರ್‌ ಸ್ಥಗಿತಗೊಂಡಿರುವುದು ತಿಳಿಯಿತು. ದರ ಹೆಚ್ಚಳ ಜಾರಿಯಾದ ಬಳಿಕ ಸರ್ವರ್‌ಗಳು ತನ್ನಷ್ಟಕ್ಕೆ ತಾನೇ ಆರಂಭವಾಗುತ್ತವೆ. ಹೀಗಂತ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಗುಡುಗಿದ್ದಾರೆ.

- Advertisement -

Latest Posts

Don't Miss