Sunday, September 8, 2024

Latest Posts

ಯಡಿಯೂರಪ್ಪ ಬ್ರಿಗೇಡ್ ನಲ್ಲಿ ಯಾರ್ ಯಾರಿಗೆ ಸ್ಥಾನ..?

- Advertisement -

ಬೆಂಗಳೂರು: ರಾಜ್ಯದಲ್ಲಿ ಕೇಸರಿ ಪತಾಕೆ ಹಾರಿಸುವಲ್ಲಿ ಯಶಸ್ವಿಯಾದ ಬಿಜೆಪಿ, ಇದೀಗ ಸರ್ಕಾರ ರಚನೆ ಮಾಡಲಿದೆ. ಈ ಕುರಿತು ದೆಹಲಿಯಲ್ಲಿ ವರಿಷ್ಠರ ಆಣತಿ ಪಾಲಿಸುತ್ತಿರೋ ರಾಜ್ಯ ನಾಯಕರು ತಮ್ಮ ಸಂಪುಟದಲ್ಲಿ ಯಾರು ಯಾರಿಗೆ ಸ್ಥಾನ ನೀಡಲಿದ್ದಾರೆ ಅನ್ನೋದು ಕುತೂಹಲ ಕೆರಳಿಸಿದೆ.

ಬಿಜೆಪಿ ಸರ್ಕಾರ ರಚನೆಗೆ ಸಜ್ಜಾಗುತ್ತಿರುವ ಮಧ್ಯೆಯೇ ಬಿ.ಎಸ್ ಯಡಿಯೂರಪ್ಪ ಸಂಭಾವ್ಯ ಸಂಪುಟ ಸಚಿವರ ಪಟ್ಟಿಯಲ್ಲಿ ಹೆಸರುಗಳು ಹನುಮಂತನ ಬಾಲದಂತೆ ಬೆಳೆದಿದೆ. ಪಟ್ಟಿಯಲ್ಲಿ ಈಶ್ವರಪ್ಪ, ಶ್ರೀರಾಮುಲು, ಆರ್. ಅಶೋಕ್, ಗೋವಿಂದ ಕಾರಜೋಳ, ವಿ. ಸೋಮಣ್ಣ, ಉಮೇಶ್ ಕತ್ತಿ, ಇನ್ನು ಸಿ.ಪಿ ಯೋಗೀಶ್ವರ್ ಗೆ ಮೊದಲು ಪರಿಷತ್ ನಲ್ಲಿ ಸ್ಥಾನ ನೀಡಿ ಬಳಿಕ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಲಾಗುತ್ತದೆ ಅಂತ ಹೇಳಲಾಗ್ತಿದೆ.

ಇನ್ನು ಶಿವನಗೌಡ ನಾಯಕ್, ರಾಜುಗೌಡ, ಬೋಪಯ್ಯ, ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಡಾ.ಅಶ್ವಥ್ ನಾರಾಯಣ, ಬಸವರಾಜ್ ಬೊಮ್ಮಾಯಿ, ಮಾಧುಸ್ವಾಮಿ, ಮುರುಗೇಶ್ ನಿರಾಣಿ, ಅರವಿಂದ ಲಿಂಬಾವಳಿ, ಜಗದೀಶ್ ಶೆಟ್ಟರ್ ಅಥವಾ ಅರವಿಂದ್ ಬೆಲ್ಲದ್ ಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಲಾಗುತ್ತದೆ.

ಅತೃಪ್ತರಿಗೂ ಸಚಿವ ಸ್ಥಾನ..!

ಇನ್ನು ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಲು ಮುಖ್ಯ ಕಾರಣರಾದ ಕಾಂಗ್ರೆಸ್-ಜೆಡಿಎಸ್ ನ ಅತೃಪ್ತರಿಗೂ ಬಿಜೆಪಿ ಮಣೆ ಹಾಕಲಿದೆ. ಜೆಡಿಎಸ್ ಶಾಸಕ ಎಚ್.ವಿಶ್ವನಾಥ್, ಗೋಪಾಲಯ್ಯ, ಕಾಂಗ್ರೆಸ್ ಶಾಸಕರಾದ ರಮೇಶ್ ಜಾರಕಿಹೊಳಿ, ಬಿ.ಸಿ ಪಾಟೀಲ್, ಶಿವರಾಂ ಹೆಬ್ಬಾರ್, ಆನಂದ್ ಸಿಂಗ್, ಎಂಟಿಬಿ ನಾಗರಾಜ್, ಡಾ.ಕೆ.ಸುಧಾಕರ್, ಎಸ್.ಟಿ ಸೋಮಶೇಖರ್, ಭೈರತಿ ಬಸವರಾಜ್ ಹಾಗೂ ಪಕ್ಷೇತರ ಶಾಸಕರಾದ ಆರ್ ಶಂಕರ್, ಎಚ್.ನಾಗೇಶ್ ಮತ್ತು ಬಿಎಸ್ಪಿ ಶಾಸಕ ಎನ್.ಮಹೇಶ್ ಗೂ ಕೂಡ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.

- Advertisement -

Latest Posts

Don't Miss