www.karnatakatv.net : ಈಗಾಗಲೇ ಎಲ್ಲಾ ಸಮಾಜದ ಮಾಠಧೀಶರು ಸೇರಿ ಯಡಿಯೂರಪ್ಪ ಅವರನ್ನು ಮುಂದುವರೆಸಬೇಕು ಇಲ್ಲ ಅಂದ್ರೆ ನಷ್ಟ ಆಗುತ್ತೆ.. ಯಡಿಯೂರಪ್ಪ ವ್ಯಕ್ತಿ ಅಲ್ಲ ಒಂದು ಶಕ್ತಿ.. ಜೀವನದುದ್ದಕ್ಕೂ ಎಲ್ಲವನ್ನು ತ್ಯಾಗ ಮಾಡಿದ್ದಾರೆ. ಕಾಲ್ನಡಿಗೆಯಿಂದ ಪಕ್ಷ ಸಂಘಟನೆ ಮಾಡಿ ಸೈಕಲ್ ಮೂಲಕ ಹಳ್ಳಿ ಹಳ್ಳಿಗೆ ತಿರುಗಿ ನಂತರದ ದಿನಗಳಲ್ಲಿ ಶಾಸಕರು ಸದನಕ್ಕೆ ಬರುವಂತೆ ಮಾಡಿದ್ದಾರೆ . ಪದತ್ಯಾಗ ಮಾಡುವ ಸಂದರ್ಭದಲ್ಲಿ ಖುಷಿಯಿಂದ ಹೋಗ್ತಾರೆ ಆದ್ರೆ ಆ ಸಂದರ್ಭ ಯಡಿಯೂರಪ್ಪ ಅವರಿಗೆ ಬರ್ಲಿಲ್ಲ ಕರ್ನಾಟಕ ಕರಾಳ ದಿನ ನಿನ್ನೆ ಆಗಿದ್ದು ಯಾವುದೇ ಪಕ್ಷ ಇರ್ಲಿ, ಆ ಪಕ್ಷವನ್ನ ಕಟ್ಟಿದ, ಪಕ್ಕವನ್ನ ಬೆಳೆಸಿದ ವ್ಯಕ್ತಿಯನ್ನ ಗೌರವದಿಂದ ನಡೆಸಿಕೊಳ್ಳಬೇಕು ಎರಡು ವರ್ಷ ಯಡಿಯೂರಪ್ಪ ಮುಂದುವರೆಸಿದ್ರೆ ಏನು ಸಮಸ್ಯೆ ಆಗ್ತಾ ಇರ್ಲಿಲ್ಲ ಇನ್ನೂ 15 ದಿನ ಕಳೆದ್ರೆ ಕೊರೊನಾ ಬರುತ್ತೆ. ಇಂತಹ ಸಂದರ್ಭದಲ್ಲಿ ಮತ್ತೊಂದು ಮುಖ್ಯ ಮಂತ್ರಿ ಬೇಕಿತ್ತಾ. ಇವತ್ತಿನಿಂದ ಬಿಜೆಪಿ ಅವನತಿಗೆ ಶುರುವಾಗಿದೆ. ಯಡಿಯೂರಪ್ಪ ಇಲ್ಲದೆ ಬಿಜೆಪಿಯಲ್ಲಿ ಶಕ್ತಿ ಇಲ್ಲ ಅಂತ ಎಷ್ಟೋ ಜನ ನನ್ನ ಬಳಿ ಮಾತ್ನಾಡಿದ್ದಾರೆ. ಯಡಿಯೂರಪ್ಪ ಇಲ್ಲದ ಬಿಜೆಪಿಯಲ್ಲಿ ನಾನು ಇರಲ್ಲ ನಾವು ಬೇರೆ ಪಕ್ಷಕ್ಕೆ ಹೋಗ್ತಿವಿ ಅಂತಿದ್ದಾರೆ. ಮೇಲಿನ ವ್ಯಕ್ತಿಯನ್ನ ನೋಡಿ ಯಾರು ಓಟ್ ಕೊಟ್ಟಿಲ್ಲ ಯಡಿಯೂರಪ್ಪನವರನ್ನ ನೋಡಿ ಓಟ್ ಹಾಕಿದ್ದಾರೆ. ರುದ್ರಮುನಿ ಸ್ವಾಮೀಜಿ ಹೇಳಿಕೆ.