Tuesday, May 21, 2024

Latest Posts

ನನ್ನ ಮಕ್ಕಳು ರಾಹುಲ್ ಗಾಂಧಿಯಂತಾಗಬೇಕು, ಮೋದಿಯಂತೆ ಸುಳ್ಳು ಹೇಳಬಾರದು: ಸಚಿವ ಸಂತೋಷ್ ಲಾಡ್

- Advertisement -

Dharwad News: ಧಾರವಾಡ: ಧಾರವಾಡದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತನಾಡಿದ್ದು, ಲಾಡ್ ಅಭಿವೃದ್ಧಿ ಮಾಡಿಲ್ಲವೆಂದು ಜೋಶಿ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಇದು ನನ್ನ ಚುನಾವಣೆಯಲ್ಲ. ನನ್ನ ಚುನಾವಣೆ ಬಂದಾಗ ನಾನೇನು ಅಭಿವೃದ್ಧಿ ಮಾಡಿದ್ದೇನೆ ಹೇಳುವೆ. ಈಗ ಅವರ ಚುನಾವಣೆ ನಡೆದಿದೆ ಅವರೇನು ಮಾಡಿದ್ದಾರೆ ಹೇಳಲಿ. ನಾಲ್ಕು ಸಲ, 20 ವರ್ಷ ಎಂಪಿ ಆಗಿದಿರೀ. ಈ ಅವಧಿಯಲ್ಲಿ ನೀವೇನು ಮಾಡಿದಿರಿ ಹೇಳಿ. ಜನರತ್ತ ನಾನು ಹೋಗಿ ನನ್ನ ಕೆಲಸ ಹೇಳುವೆ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.

ನನಗೆ ಸಿದ್ದರಾಮಯ್ಯ ಬೈಯ್ಯೊಕೆ ಇಟ್ಟಿದಾರೆಂಬ ಆರೋಪ ವಿಚಾರದ ಬಗ್ಗೆ ಮಾತನಾಡಿದ ಸಂತೋಷ್ ಲಾಡ್,  ನನಗೆ ಇವರನ್ನು ಬೈಯ್ಯಲು ಸಿದ್ದರಾಮಯ್ಯ ಇಟ್ಟಿರಬಹುದು. ಹಾಗಾದರೆ ಇವರನ್ನು ಮೋದಿ ಸುಳ್ಳು ಹೇಳೋಕೆ ಇಟ್ಟಿದಾರಾ? ವಿಶ್ವದಲ್ಲಿ ಸುಳ್ಳು ಹೇಳುವ ಪಕ್ಷ ಬಿಜೆಪಿ. ಅದರಲ್ಲಿ ನಂ. 1 ಪ್ರಹ್ಲಾದ ಜೋಶಿ. ಪದೇ ಪದೇ ಜೋಶಿಯವರೇ ಸುಳ್ಳು ಹೇಳಬೇಡಿ. ಅಭಿವೃದ್ಧಿ ವಿಷಯದಲ್ಲಿ ಬನ್ನಿ ಮಾತನಾಡೋಣ. ನೀವು ಹಿರಿಯ ನಾಯಕರು. ನೀವು ನಿಮ್ಮ ಕಾರ್ಯಕ್ರಮಗಳ ಬಗ್ಗೆ ಮಾತನಾಡಿ. ಇವತ್ತು ದರ ಏರಿಕೆಯಾಗಿದೆ. ಅದರ ಬಗ್ಗೆ ನಾವು ಯಾರನ್ನು ಪ್ರಶ್ನೆ ಕೇಳಬೇಕು. ರೂಪಾಯಿ ಮೌಲ್ಯ ಕುಸಿದಿದೆ. ಇದರ ಬಗ್ಗೆ ಉತ್ತರ ಕೊಡುವವರು ಯಾರು? ಎಲೆಕ್ಟ್ರೋಲ್ ಬಾಂಡ್ ಬಗ್ಗೆ ಉತ್ತರ ಕೊಡುವವರಾರು? ಎಂದು ಸಂತೋಷ್ ಲಾಡ್  ಪ್ರಶ್ನಿಸಿದ್ದಾರೆ.

ಎಲ್ಲ ಇತಿಹಾಸವುಳ್ಳ, ಬಹಳ ಉತ್ತಮ ವಾಗ್ಮಿಗಳು ನೀವು. ದೇಶದ ಸಮಸ್ಯೆಗಳ ಬಗ್ಗೆ ಯಾಕೆ ಉತ್ತರ ಕೊಡುವುದಿಲ್ಲ. 2ಜಿ ಹಗರಣದ ಬಗ್ಗೆ ಮಾತನಾಡುತ್ತಾರೆ? ಹತ್ತು ವರ್ಷ ಅಧಿಕಾರದಲ್ಲಿದ್ರಲ್ವಾ? ಯಾಕೆ ತಪ್ಪು ಮಾಡಿದವರನ್ನು ಹಿಡಿದು ಒಳಗೆ ಹಾಕಲಿಲ್ಲ. ಬಿಎಸ್‌ಎನ್‌ಎಲ್‌ಗೆ ಯಾಕೆ 4ಜಿ ಲೈಸೆನ್ಸ್ ಕೊಡಲಿಲ್ಲ. 4ಜಿ ಬಂದಾಗ ಜಿಯೋ ನಂ. ಆಯ್ತಲ್ಲ. ಬಿ‌ಎಸ್‌ಎನ್‌ಎಲ್ ಯಾಕೆ ನಂ. 1 ಆಗಲಿಲ್ಲ. ನಾನು ಏನೇ ಮಾಡಿದರೂ ದೊಡ್ಡದಾಗಿ ಮಾಡುವೆ ಅಂತಾ ಮೋದಿ ಹೇಳ್ತಾರೆ. ಬಿ.ಎಸ್.ಎನ್.ಎಲ್ ಏನಾಯ್ತು? ರಫೇಲ್ ಏನಾಯ್ತ? ಅನಿಲ ಅಂಬಾನಿ ಕಂಪನಿ ಒಂದು ಸೈಕಲ್ ತಯಾರಿಸಿಲ್ಲ. ಅದು ಒಂದೇಟಿಗೆ ಹೆಲಿಕ್ಯಾಪ್ಟರ್ ತಯಾರಿಸಬಹುದಾ? ಅದರ ಡೀಲ್ ಅವರಿಗೆ ಹೇಗೆ ಹೋಯ್ತು? ಎಂದು ಲಾಡ್ ಪ್ರಶ್ನಿಸಿದ್ದಾರೆ.

ಅಲ್ಲದೇ, ಇದೆಲ್ಲದರ ಬಗ್ಗೆ ಅವರು ಮಾತಾಡುತ್ತಿಲ್ಲ, ಸುಮ್ಮನೇ ಲಾಡ್ ಬೈತಾರೆ ಅಂತಾ ಹೇಳ್ತಾರೆ. ಇದು ಅವರ ಘನತೆಗೆ ಗೌರವ ತರುವಂತಹುದಲ್ಲ. ನಾನು ಜೋಶಿ-ಮೋದಿಗೆ ಬೈದಿಲ್ಲ. ಪ್ರಶ್ನ ಕೇಳಿದರೇ ಬೈಯ್ಯದಂತೆನಾ? ಪ್ರಶ್ನೆಗೆ ಉತ್ತರ ಕೊಡಿ. ಅದು ಬಿಟ್ಟು ನಮ್ಮ ಮೇಲೆ ಯಾಕೆ ಸುಳ್ಳು ಹೇಳ್ತಿರಾ? ಕಳೆದ 10 ವರ್ಷದಲ್ಲಿ 1.20 ಲಕ್ಷ ಕೋಟಿ ಸಾಲ ಜಾಸ್ತಿಯಾಗಿದೆ. ಇದರ ಬಗ್ಗೆ ಜೋಶಿ ಉತ್ತರ ಕೊಡಲಿ. ವಿಧವಾ ವೇತನಾ, ವೃದ್ಯಾಪ್ಯ, ಆಶಾ ಸೇರಿ ಎಲ್ಲ ಯೋಜನೆ ಮಾಡಿದ್ದು ನಾವೇ. ವಿಶ್ವವಿದ್ಯಾಲಯ, ಐಐಎಂ, ಐಐಟಿ ಮಾಡಿದವರೆಲ್ಲ ನಾವೇ. ಇವರೇನು ಮಾಡಿದಾರೆ..? ಎಂದು ಲಾಡ್  ಪ್ರಶ್ನೆ ಮೇಲೆ ಪ್ರಶ್ನೆ ಕೇಳಿದ್ದಾರೆ.

ಲಾಡ್ ಮಕ್ಕಳು ಏನಾಗಬೇಕೆಂಬ ಜೋಶಿ ಪ್ರಶ್ನೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಲಾಡ್, ನನ್ನ ಮಕ್ಕಳು ರಾಹುಲ್ ಗಾಂಧಿ ತರಹ ಆಗಬೇಕು. ಇದನ್ನು ನಾನು ಹೆಮ್ಮೆಯಿಂದ ಹೇಳುವೆ. ಮೋದಿಯಂತೆ ಸುಳ್ಳು ಹೇಳುವವರಾಗಬಾರದು?. ಮೋದಿ ಪ್ರಬುದ್ಧರಾಗಿದ್ದರೆ ಒಂದು ಸುದ್ದಿಗೋಷ್ಠಿ ಮಾಡಲಿ. ರಾಹುಲ್ ಗಾಂಧಿ ಟಿವಿ ಸಂದರ್ಶನಕ್ಕೆ ಸದಾ ಕಾಲ ಲಭ್ಯ ಇದಾರೆ. ಮೋದಿ ಯಾಕೆ ಸಂದರ್ಶನಕ್ಕೆ ಬರೋದಿಲ್ಲ. ಹಿಂದೂ-ಮುಸ್ಲಿಂ, ಪಾಕಿಸ್ತಾನ ಬಿಟ್ಟರೆ ಬೇರೆ ಮಾತನಾಡುವುದಿಲ್ಲ. ಚೀನಾ, ಜಪಾನ ಏನೆಲ್ಲ ಮಾಡುತ್ತಿದೆ ಗೊತ್ತಾ? ಅದಾನಿ ಪೋರ್ಟ್ ನಲ್ಲಿ ಡ್ರಗ್ ಸಿಕ್ಕಿತಲ್ವಾ? ಅದೆ ಬಗ್ಗೆ ಮಾತನಾಡಿ. ನರೇಂದ್ರ ಮೋದಿ ಸಾವಿರಾರೂ ಸುಳ್ಳು ಹೇಳಿದ್ದಾರೆ. ಇದೆ ಬಗ್ಗೆ ನಾನು ಚರ್ಚೆಗೆ ಸಿದ್ಧ. ಜೋಶಿ ಚರ್ಚೆಗೆ ಬರ್ತಾರಾ? ಎಂದು ಲಾಾಡ್ ಪ್ರಶ್ನಿಸಿದ್ದಾರೆ.

ಮಹಾದಾಯಿ ಹೋರಾಟಗಾರರ ಸಭೆ ವಿಚಾರದ ಬಗ್ಗೆ ಮಾತನಾಡಿದ ಸಂತೋಷ್ ಲಾಡ್, ಮಹದಾಯಿ ಹೋರಾಟಗಾರರು ಇವತ್ತು ಭೇಟಿಗೆ ಬಂದಿದ್ದಾರೆ. ಕೆಲವರು ಪಕ್ಷಕ್ಕೂ ಸೇರಲಿದ್ದಾರೆ. ಮೋದಿ ರಷ್ಯಾ-ಉಕ್ರೇನ್ ವಾರ್ ನಿಲ್ಲಿಸಬಲ್ಲರು.ನಮ್ಮ ಮಹದಾಯಿಗೆ ಅರಣ್ಯ ಇಲಾಖೆ ಕ್ಲಿಯೆರನ್ಸ್ ಕೊಡಿಸಲು ಆಗೋಲ್ವಾ?  ಕೇಂದ್ರ ಸರ್ಕಾರವೇ ಮಹದಾಯಿ ಮಾಡಬಹುದಲ್ವಾ? ರಾಜ್ಯ ಸರ್ಕಾರದ ಮೇಲೆ ಯಾಕೆ ಹಾಕ್ತಿರಾ? ಡಬಲ್ ಇಂಜಿನ ಸರ್ಕಾರ ಇತ್ತಲ್ವಾ? ಆಗ ಯಾಕೆ ಮಾಡಲಿಲ್ಲ? ಮಹದಾಯಿ ವಿಷಯದಲ್ಲಿ ನಾವು ರಾಜಕೀಯ ಲಾಭ ನೋಡುತ್ತಿಲ್ಲ. ಮಹದಾಯಿ ಆಯ್ತು ಅಂತಾ ಬಿಜೆಪಿಯೇ ವಿಜಯೋತ್ಸವ ಮಾಡಿತ್ತಲ್ವಾ? ನಾವೇನು ಮಾಡಿದ್ವಾ? ಎಂದು ಲಾಡ್ ಮತ್ತೆ ಪ್ರಶ್ನಿಸಿದ್ದಾರೆ.

ಪುಲ್ವಾಮಾ ದಾಳಿ ಬಗ್ಗೆ ತನ್ವೀರ ಶೇಟ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಲಾಡ್, ಸೇಟ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಪುಲ್ವಾಮಾ ದಾಳಿ ಮೇಲೆಯೇ ಇವರು ವೋಟ್ ಕೇಳಿದ್ರಲ್ವಾ. ಈಗ ಆರು ವರ್ಷ ಆಯ್ತು. ಅದರ ಬಗ್ಗೆ ಅವರೇ ಚರ್ಚೆ ಮಾಡಬೇಕಲ್ವಾ? ಆಗ ಅಮಿತ ಷಾ ಸರ್ಕಾರದಲ್ಲಿರಲಿಲ್ಲ. ಅವರೇ 300 ಜನ ತೀರಿದ್ದಾರೆಂದು ಹೇಳಿದ್ದರು. 300 ಜನರನ್ನು ಕೊಂದಿದ್ದೇವೆ ಎಂದಿದ್ದರಿ. ಟಿವಿಯಲ್ಲಿಯೂ ತೋರಿಸಿಬಿಟ್ರಿ. ಇಡೀ ದೇಶಕ್ಕೆ ಬೆಂಕಿ ಹೊತ್ತಿಕೊಂಡಿತ್ತು. ಅವರು ಆಗ ಯಾರು? ಅವರು ಸಾಮರ್ಥ್ಯ ಏನು? ಯಾರಪ್ಪನದೋ ದುಡ್ಡು, ಇವರ ಜಾತ್ರೆ ಎನ್ನುವಂತೆ ನಡೆದಿದೆ. ಅವರ ಜಾತ್ರೆ ನಡಿತಾ ಇದೆ. ಅವರ ಜಾತ್ರೆ ನಡೆಯುತ್ತಿದೆ, ನಡೆಯಲಿ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.

ಸಾಕ್ಷಿಯ ವಿಚಾರಣೆಗೂ, ಆರೋಪಿಯ ವಿಚಾರಣೆಗೂ ವ್ಯತ್ಯಾಸ ತಿಳಿದಿಲ್ಲವೇ?: ಕಾಂಗ್ರೆಸ್ಸಿಗರಿಗೆ ಪ್ರೀತಂಗೌಡ ಪ್ರಶ್ನೆ..

ವಿಷ್ಣುವಿನ ಅವತಾರವೇ ಪ್ರಧಾನಿ ಮೋದಿ: ನಟಿ ಕಂಗನಾ ರಾಣಾವತ್

ಕಾಂಗ್ರೆಸ್‌ನವರು ಉದರಿ ಭಾಗ್ಯಗಳ ಬಗ್ಗೆ ಪ್ರಚಾರ ಮಾಡಿದ್ರೆ ನಡೆಯುತ್ತಾ..?: ಲಾಡ್‌ಗೆ ಜೋಶಿ ತಿರುಗೇಟು..

- Advertisement -

Latest Posts

Don't Miss