Devotional tips:
ಕೆಲವರಿಗೆ ಎಷ್ಟೇ ಪ್ರಯತ್ನ ಮಾಡಿದರು ಯಾವೊದೋ ಒಂದು ಕಾರಣದಿಂದ ವಿವಾಹ ಯೋಗ ಕೂಡಿ ಬರುವುದಿಲ್ಲ ಕಂಕಣ ಕೂಡಿ ಬಂದಾಗ ಮದುವೆಯಾಗುತ್ತೆ ಎನ್ನುವ ಮಾತಿದೆ ,ಕೆಲವರಿಗೆ ೩೫ವರ್ಷ ದಾಟಿದರು ಕಂಕಣ ಭಾಗ್ಯ ಕೂಡಿ ಬರುವುದಿಲ್ಲ.ಯಾವುದೊ ಒಂದು ಕಾರಣದಿಂದ ಸಂಬಂಧಗಳು ಮುರಿದು ಹೋಗುತ್ತದೆ .ಕೆಲವರ ರಾಶಿ–ನಕ್ಷತ್ರದಲ್ಲಿ ತೊಂದರೆ ಇರಬಹುದು ಅಥವಾ ಕೆಲವರ ರಾಶಿಯಲ್ಲಿ ಗೋಚಾರ ಫಲಗಳು ಇಲ್ಲದೆ ಇರಬಹುದು ,ಈ ಕಾರಣಗಳಿಂದ ಮದುವೆ ವಿಳಂಬವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ .ಮದುವೆಯಾಗಲು ರಾಶಿ–ನಕ್ಷತ್ರ ಬಹಳ ಮುಖ್ಯವಾಗಿರುತ್ತದೆ ,ನಕ್ಷತ್ರಗಳ ಪ್ರಕಾರ ಮದುವೆಯ ದಿನಾಂಕ ಮತ್ತು ವೈವಾಹಿಕ ಜೀವನವನ್ನು ತಿಳಿದುಕೊಳ್ಳಬಹುದು. ಮತ್ತು ನಕ್ಷತ್ರ ಅಥವಾ ರಾಶಿಯಲ್ಲಿ ಯಾವುದೇ ಸಮಸ್ಯೆಗಳು ತೊಂದರೆಗಳು ಕಂಡು ಬಂದರೆ ಕೆಲವೊಂದು ಪೂಜೆಗಳಿಂದ ಪರಿಹಾರ ಮಾಡಿಕೊಳ್ಳ ಬಹುದು .
ಮನುಷ್ಯನಿಗೆ ಗುರು ಬಲ ಕೂಡಿ ಬಂದಾಗ ಮಾತ್ರ ಕಂಕಣ ಬಲ ಕೂಡಿ ಬರುತ್ತದೆ. ಕೆಲವರಿಗೆ ರಾಶಿಯ ತೊಂದರೆಯಿಂದ ಮದುವೆಯಾಗುವುದು ವಿಳಂಬವಾಗುತ್ತದೆ.ಇದರಿಂದ ಕೆಲವರು ಮದುವೆಯಾಗುವ ಆಸೆಯನ್ನೇ ಕಳೆದುಕೊಂಡಿರುತ್ತಾರೆ. ಆದರೆ ಕೆಲವು ಪೂಜೆ ಮತ್ತು ಪರಿಹಾರಗಳಿಂದ ಮದುವೆ ವಿಳಂಬವಾಗುವುದನ್ನು ತಪ್ಪಿಸಬಹುದು. ಹಾಗಾದರೆ ನಿಮ್ಮ ಮನೆಯಲ್ಲಿ ಯಾರಾದರೂ ಮದುವೆಯಾಗದ ಸಮಸ್ಯೆ ಎದುರಿಸುತಿದ್ದರೆ , ಸಂಗಾತಿ ಸಿಗಲಿಲ್ಲವೆಂದು ನಿರಾಸೆ ಹೊಂದಿದ್ದಾರೆ ನಾವು ಹೇಳುವ ಸರಳ ಉಪಾಯವನ್ನು ಅನುಸರಿಸಿ,ಅದ್ಭುತ ಪರಿಹಾರ ಕಂಡುಕೊಳ್ಳಬಹುದು. ಹಾಗಾದರೆ ಈ ಸಮಸ್ಯೆಗೆ ಪರಿಹಾರವನ್ನು ತಿಳಿದುಕೊಳ್ಳೋಣ ಬನ್ನಿ .
ಮದುವೆ ವಿಳಂಬವಾಗುವ ಹುಡುಗ ಹಾಗು ,ಹುಡುಗಿಯರು ಪ್ರತಿ ಗುರುವಾರ ಮತ್ತು ಹುಣ್ಣಿಮೆಯ ದಿನದಂದು ಆಲದ ಮರಕ್ಕೆ ನೀರನ್ನು ಹಾಕಿ 108 ಪ್ರದಕ್ಷಿಣೆಯನ್ನು ಮಾಡಬೇಕು ಆಲದಮರವಿಲ್ಲದಿದ್ದರೆ ಅಶ್ವತ್ಥ ಮರ,ಬಾಳೆ ಮರಗಳಿಗೆ ನೀರು ಹಾಕಿ ಪೂಜೆ ಮಾಡಿದರೆ ಖಂಡಿತವಾಗಿ ಫಲ ಸಿಗುತ್ತದೆ .ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಬಾರದು.
ಹುಡುಗಿಯರಿಗೆ ಮದುವೆ ತಡವಾಗುತ್ತಿದ್ದರೆ ಶಿವನ 16 ಸೋಮವಾರಗಳ ವ್ರತವನ್ನು ಮಾಡಬೇಕು .ವ್ರತ ಮಾಡುವ ವಿಧಾನ: ಉಪವಾಸವಿದ್ದು ವ್ರತವನ್ನು ನಿಷ್ಠೆಯಿಂದ ,ನಿಯಮದಿಂದ ,ಭಕ್ತಿಯಿಂದ ಆಚರಿಸಬೇಕು .ಮೊದಲು ಶಿವಲಿಂಗಕ್ಕೆ ಅಭಿಷೇಕ ಮಾಡಿ ಪೂಜಿಸಿದ ನಂತರ ಪಾರ್ವತಿ ದೇವಿಯನ್ನು ಪೂಜಿಸಿ ಶಿವ–ಪಾರ್ವತಿಯರ ಮದುವೆ ನಡೆಸಬೇಕು ,ನಂತರ ಪಾರ್ವತಿಮಂಗಳ ಪುಸ್ತಕವನ್ನು ಓದಬೇಕು ಹಾಗು ಮಲಗುವ ಕೋಣೆಯಲ್ಲಿ ಶಿವ ಪಾರ್ವತಿಯರ ಫೋಟೋವನ್ನು ಇಟ್ಟುಕೊಳ್ಳಬೇಕು ಹಾಗು ಹಸಿರು ಹುಲ್ಲು, ಪಾನಕವನ್ನು ಪ್ರತಿ ಸೋಮವಾರ ಹಸುವಿಗೆ ನೀಡಿ ಗೌರಿ–ಶಂಕರ ಮಂತ್ರವನ್ನು ಪಠಿಸಬೇಕು .
ಹೆಣ್ಣುಮಕ್ಕಳು ಸೋಮವಾರದ ದಿನ ಮುಂಜಾನೆ ಮನೆಯಲ್ಲಿ ಮೊದಲು ಪೂಜೆಮುಗಿಸಿ ೫ತೆಂಗಿನಕಾಯಿಗಳನ್ನೂ ತೆಗೆದುಕೊಂಡು ಶಿವನ ದೇವಾಲಯಕ್ಕೆ ಹೋಗಿ ಶಿವಲಿಂಗದ ಮುಂದೆ ಇಟ್ಟು ಅರ್ಚಕರಿಂದ ಪೂಜೆಯನ್ನು ಮಾಡಿಸಬೇಕು ,ನಂತರ ತೆಂಗಿನ ಕಾಯಿಗಳನ್ನು ಆ ದೇವಾಲಯದಲ್ಲಿ ಒಡೆದು ನಂತರ ಅದನ್ನು ತೆಗೆದುಕೊಂಡು ಹೋಗಿ ಮನೆಯಲ್ಲಿ ಅಡಿಗೆಗೆ ಬಳಸಬೇಕು ಆ ತೆಂಗಿನ ಕಾಯಿಯನ್ನು ಆ ಹೆಣ್ಣು ಮಗಳು ಮಾತ್ರ ಸೇವಿಸ ಬೇಕು ಬೇರೆ ಯಾರು ಸೇವಿಸ ಬಾರದು .
ಯುವಕರಲ್ಲಿ ಮದುವೆ ವಿಳಂಬ ವಾಗುತ್ತಿದ್ದರೆ ಪ್ರತಿ ದಿನವೂ ಭಕ್ತಿ ಯಿಂದ ಶಿವ ಚಾಲೀಸ ಮಂತ್ರವನ್ನು ಜಪಿಸಬೇಕು. ಹಾಗು ಪ್ರತಿ ಗುರುವಾರದಂದು ಸ್ನಾನದ ನೀರಿಗೆ ಚಿಟಿಕೆ ಅರಿಶಿನವನ್ನು ಸೇರಿಸಿ ಸ್ನಾನ ಮಾಡಿ ಹಳದಿ ಬಟ್ಟೆಯನ್ನು ಧರಿಸಬೇಕು .ಹಾಗು ಎರಡು ಚಪಾತಿಯನ್ನು ತೆಗೆದುಕೊಂಡು ಮಧ್ಯಭಾಗದಲ್ಲಿ ಅರಿಶಿನವನ್ನು ಹಚ್ಚಬೇಕು ಹಾಗು ಚಪಾತಿಯನ್ನು 3ಗುರುವಾರದಂದು ಗೋಮಾತೆಗೆ ತಿನ್ನಿಸಬೇಕು . ಮದುವೆ ವಿಳಂಬವಾಗಲು ಮುಖ್ಯ ಕಾರಣವೆಂದರೆ ರಾಹು ದೋಷ ಹಾಗು ಮಂಗಳ ಗ್ರಹದ ದೋಷಗಳು ,ಇದಕ್ಕೆ ಪರಿಹಾರವಾಗಿ ಪ್ರತಿ ದಿನ ನವಗ್ರಹಗಳಿಗೆ ಪೂಜೆ ಸಲ್ಲಿಸುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ ಹಾಗು ದೇವಿ ದುರ್ಗೆಯ ಆರಾಧನೆ ಮಾಡಬೇಕು.