Monday, December 23, 2024

Latest Posts

ನೀವು ಊಟ ತಯಾರಿಸಿ ಮಾರುವವರಾದರೆ ಈ ಮಷಿನ್‌ಗಳನ್ನ ಖಂಡಿತ ಬಳಸಿ..!

- Advertisement -

ಹೆಣ್ಣು ಮಕ್ಕಳು ಮನೆಯಿಂದಲೇ ಆರಂಭಿಸುವ ಉದ್ಯಮಗಳಲ್ಲಿ ಅಡುಗೆ ಮಾಡಿ, ಮಾರಾಟ ಮಾಡುವ ಉದ್ಯಮ ಕೂಡಾ ಒಂದು. ಬೇರೆ ಊರಿನಿಂದ ಕೆಲಸಕ್ಕೆ ಅಥವಾ ಓದಲು ಬಂದ ಬ್ಯಾಚುಲರ್‌ಗಳಿಗೆ, ಊಟ ಮಾಡಿ ಕೊಡುವ ಮೂಲಕ ಕೂಡ ಚಿಕ್ಕ ಉದ್ಯಮ ಶುರು ಮಾಡಬಹುದು. ಇಂಥ ಉದ್ಯಮ ಆರಂಭಿಸುವವರು ಕೆಲ ಮಷಿನ್‌ಗಳನ್ನ ಖರೀದಿ ಮಾಡಬೇಕಾಗುತ್ತದೆ. ಅವುಗಳಲ್ಲಿ ನಾಲ್ಕುಮಷಿನ್‌ಗಳ ಬಗ್ಗೆ ನಾವಿವತ್ತು ಮಾಹಿತಿ ನೀಡಲಿದ್ದೇವೆ.

ಆಟ್ಟಾ ಮೇಕರ್ ಮಷಿನ್. ಈ ಮಷಿನ್‌ನಲ್ಲಿ ನೀವು ಹಿಟ್ಟು ಉಪ್ಪು ಎಣ್ಣೆ ನೀರು ಹಾಕಿದ್ರೆ ನಿಮಗೆ ಚಪಾತಿ ಮಾಡೋಕ್ಕೆ ಬೇಕಾದ ಹಿಟ್ಟು ರೆಡಿ ಆಗತ್ತೆ.

ಎರಡನೇಯದಾಗಿ ಚಪಾತಿ ಮೇಕಿಂಗ್ ಮಷಿನ್. ಇದನ್ನ ಆನ್‌ಲೈನ್ ಮೂಲಕ ಕೂಡ ನೀವು ಖರೀದಿ ಮಾಡಬಹುದು. ಎರಡರಿಂದ ಮೂರು ಸಾವಿರದ ವರೆಗೆ ಈ ಮಷಿನನ್ನ ನೀವು ಕೊಂಡುಕೊಳ್ಳಬಹುದು. ಚಪಾತಿ ಮಾಡಲು ಬೇಕಾಗುವಷ್ಟು ಹಿಟ್ಟು ತಯಾರಿಸಿಕೊಂಡು, ಮಷಿನ್‌ನಲ್ಲಿ ಹಾಕಿ ಪ್ರೆಸ್ ಮಾಡಿದ್ರೆ ಧಿಡೀರ್ ಚಪಾತಿ ರೆಡಿಯಾಗುತ್ತದೆ.

ಮೂರನೇಯದಾಗಿ ಪಲ್ಯ ಸಾರು ಮಾಡಲು, ವೆಜಿಟೇಬಲ್ ಕಟಿಂಗ್ ಮಷಿನ್ ಬೇಕು. ಈ ಮಷಿನ್ ಮೂಲಕ ನೀವು ತರಕಾರಿಗಳನ್ನ ಕೆಲ ನಿಮಿಷಗಳಲ್ಲೇ ಕಟ್ ಮಾಡಬಹುದು.

ನಾಲ್ಕನೇಯದಾಗಿ ದೊಡ್ಡ ಕುಕ್ಕರನ್ನ ನೀವು ತೊಗೋಳ್ಬೇಕು. ಇಂಥ ಕುಕ್ಕರ್‌ಗಳಲ್ಲಿ ಎರಡು ಕಂಟೈನರ್‌ಗಳಿರತ್ತೆ. ಇಂಥ ಎರಡು ಕುಕ್ಕರ್ ಇದ್ದರೆ ಒಂದರಲ್ಲಿ ಅನ್ನ ಮತ್ತು ಒಂದರಲ್ಲಿ ಬೇಳೆ ಬೇಯಿಸಬಹುದು.

ಈ ಮಷಿನ್‌ಗಳ ಬಳಕೆ ಮಾಡಿದ್ದಲ್ಲಿ ನೀವು ಬೇರೆಯವರ ಸಹಾಯ ಪಡೆದು ಉದ್ಯಮ ಆರಂಭಿಸುವ ಗೌಜಿ ಇರುವುದಿಲ್ಲ. ಬೇರೆಯವರಿಗೆ ಕೆಲಸಕ್ಕಿಟ್ಟುಕೊಂಡ್ರೆ ಅವರಿಗೆ ಪ್ರತಿ ತಿಂಗಳು ಸಂಬಳ ನೀಡಬೇಕಾಗುತ್ತದೆ. ಆದ್ರೆ ಈ ಮಷಿನ್‌ಗಳನ್ನ ಒಮ್ಮೆ ದುಡ್ಡು ಕೊಟ್ಟು ತಂದ್ರೆ ಮತ್ತೆ ಪದೆ ಪದೆ ದುಡ್ಡು ಖರ್ಚು ಮಾಡುವ ಅವಶ್ಯಕತೆ ಇರುವುದಿಲ್ಲ. ಮತ್ತು ಇದರಿಂದ ಸಮಯ ಕೂಡ ಉಳಿತಾಯವಾಗುತ್ತದೆ.

ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

- Advertisement -

Latest Posts

Don't Miss