Sandalwood: ಸದ್ಯ ದೇಶದೆಲ್ಲೆಡೆ ಸದ್ದು ಮಾಡುತ್ತಿರುವ ಸಿನಿಮಾ ಅಂದ್ರೆ ಅದು ನಮ್ಮ ಕನ್ನಡ ಸಿನಿಮಾ ಕಾಂತಾರ ಭಾಗ 1. ಕಳೆದ ಬಾರಿ ಕನ್ನಡದಲ್ಲಿ ಮಾತ್ರ ಕಾಂತಾರ ಸಿನಿಮಾ ರಿಲೀಸ್ ಮಾಡಲಾಗಿತ್ತು. ಆದರೆ ಅದು ತಾನಾಗಿಯೇ ಪ್ಯಾನ್ ಇಂಡಿಯನ್ ಸಿನಿಮಾ ಆಯಿತು. ಅದಾದ ಬಳಿಕ ಭಾರತೀಯರೆಲ್ಲರೂ ಕಾಂತಾರ ಭಾಗ 1ಕ್ಕಾಗಿ ಕಾತುರದಿಂದ ಕಾದಿದ್ದರು. ಇದೀಗ ಕಾಂತಾರ ಭಾಗ 1 ಕೂಡ ರಿಲೀಸ್ ಆಗಿದೆ. ಹಾಗಾಗಿ ರಿಷಬ್ ಈಗ ಸಖತ್ ಬ್ಯುಸಿ. ಕನ್ನಡ, ಹಿಂದಿ ಸೇರಿ ಹಲವು ಭಾಷೆಗಳ ಸುದ್ದಿ ಚಾನೆಲ್‌ಗಳಿಗೆ ಹೋಗಿ ಸಂದರ್ಶನ ನೀಡುತ್ತಿದ್ದಾರೆ.
ಇದೀಗ ಜೂಮ್ ಸುದ್ದಿ ವಾಹಿನಿಯಲ್ಲಿ ರಿಷಬ್ ಸಂದರ್ಶನ ನೀಡಿದ್ದು, ಅಲ್ಲಿ ನಿರೂಪಕಿ, ರಿಷಬ್ ನನಗೆ 1 ವಿಷಯ ತಿಳಿಯುತ್ತಿಲ್ಲ. ಇಲ್ಲಿ ಬಂದಾಗ ನೀವೆಲ್ಲ ಹಿಂದಿ ಮಾತನಾಡುತ್ತೀರಿ. ಆದರೆ ನಿಮ್ಮ ರಾಜ್ಯದಲ್ಲಿ ಹಿಂದಿಯನ್ನು ಜನ ಮಾತನಾಡಲು ವಿರೋಧಿಸುತ್ತಾರೆ ಇದಕ್ಕೇನಂತೀರಿ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಉತ್ತರಿಸಿರುವ ರಿಷಬ್, ನಾವು ಯಾವ ರಾಜ್ಯಕ್ಕೆ ಹೋಗುತ್ತೇವೋ, ಆ ರಾಜ್ಯದ ಭಾಷೆ ಕಲಿಯುವ ಪ್ರಯಾಸ ನಾವು ಮಾಡಬೇಕು ಎಂದಿದ್ದಾರೆ. ಬಳಿಕ ಮಾತನಾಡಿದ ನಿರೂಪಕಿ, ನಿಮ್ಮ ಸಿನಿಮಾ ದೇಶ ವಿದೇಶಗಳಲ್ಲಿ ರಿಲೀಸ್ ಆಗಿ, ಪುಷ್ಪ ಚಿತ್ರವನ್ನೂ ಹಿಂದೆ ಹಾಕಿ ಓಡುತ್ತಿದೆ. ನೀವು ಬರೀ ನಟರಷ್ಟೇ ಅಲ್ಲ, ನಿರ್ದೇಶಕ, ನಿರ್ಮಾಪಕರೂ ಹೌದು. ನಿಮಗೆ ಈಗ ಹೇಗನ್ನಿಸುತ್ತಿದೆ ಎಂದು ಕೇಳಿದ್ದಾರೆ.
ಇದಕ್ಕೆ ಉತ್ತರಿಸಿದ ರಿಷಬ್, ನಾನು ಕಾಂತಾರದಲ್ಲಿ ಬರೀ ನಟನೆ, ನಿರ್ದೇಶನ ಮಾಡಿದ್ದೇನೆ. ನಿರ್ಮಾಪಕನಾಗಿಲ್ಲ. ಆದರೆ ಚಿತ್ರಕ್ಕೆ ಜನ ನೀಡುವ ಪ್ರೀತಿ, ಆಶೀರ್ವಾದವೆಲ್ಲ ನನಗೆ ಖುಷಿ ನೀಡುತ್ತಿದೆ. ಮುಂದಿನಿಂದ ನಾನು ಮಾತ್ರ ಕಾಣುತ್ತೇನೆ. ಆದರೆ ನನ್ನ ಹಿಂದೆ ಎಡಿಟರ್, ಡಿಓಪಿ, ಸೇರಿ ಹಲವರು ಕೆಲಸ ಮಾಡಿದ್ದಾರೆ. ಅವರೆಲ್ಲ ನೀಡಿದ ಶಕ್ತಿಯೇ ತೆರೆಯ ಮೇಲೆ ಬಂದ ನನ್ನ ಪಾತ್ರ ಎಂದು ರಿಷಬ್ ತನ್ನವರೆಲ್ಲರನ್ನೂ ನೆನಪಿಸಿಕ“ಂಡಿದ್ದಾರೆ.
ಇನ್ನು ಕಾಂತಾರ ಭಾಗ 2,3,4 ಹೀಗೆ ಬರಲಿದೆಯಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಿಷಬ್, ಅದೇನೋ ತಿಳಿದಿಲ್ಲ. ಮಾಡುವ ಪ್ರಯತ್ನ ಖಂಡಿತ ಮಾಡುತ್ತೇನೆ. ನಮ್ಮ ಭಾರತೀಯ ಸಂಸ್ಕೃತಿಯ ಕಥೆಗಳೇ ಹಾಗಿದೆ. ನಮ್ಮನ್ನು ಬೇರಿನ ತನಕ ಕರೆದ“ಯ್ಯುತ್ತದೆ. ಅದೇ ನನ್ನ ಕಥೆಗಳಿಗೆ ಪ್ರೇರೇಪಣೆ ಎಂದು ರಿಷಬ್ ಹೇಳಿದ್ದಾರೆ.