ಈ ಬೇಸಿಗೆಯ ಕಾಲದಲ್ಲಿ ಬಾಯಾರಿಕೆ, ಸುಸ್ತಾಗುವುದು ಸರ್ವೇ ಸಾಮಾನ್ಯ. ದಾಹವನ್ನು ತೀರಿಸಿಕೊಳ್ಳುಲು ಹಣ್ಣಿನ ಜ್ಯೂಸ್ ಅಥವಾ ಮಜ್ಜಿಗೆಯನ್ನು ಕುಡಿಯುತ್ತೇವೆ. ಮಜ್ಜಿಗೆ ಕೇವಲ ದೇಹವನ್ನ ತಂಪಾಗಿಸಲು ಸಹಾಯ ಮಾಡುವುದಿಲ್ಲ ಬದಲಿಗೆ ನಮ್ಮ ಸೌಂದರ್ಯಕ್ಕೂ ಸಾಕಷ್ಟು ಪ್ರಯೋಜನಕಾರಿ.
ಎಲ್ಲರಿಗೂ ಗೊತ್ತಿರೋ ಹಾಗೆ ಮಜ್ಜಿಗೆಯನ್ನ ಕಡಿಮೆ ದರದಲ್ಲಿ ಖರೀದಿ ಮಾಡಬಹುದು. ಹಾಗೆಯೇ ಸುಲಭವಾಗಿ ಮನೆಯಲ್ಲಿಯೇ ತಯಾರಿಸಬಹುದು. ಮಜ್ಜಿಗೆಯಲ್ಲಿ ಲ್ಯಾಕ್ಟಿಕ್ ಆಮ್ಲ ಸಮೃದ್ಧವಾಗಿದೆ ಹಾಗೂ ನೈಸರ್ಗಿಕ ಪ್ರೊ ಬಯೋಟಿಕ್ ಕೂಡ ಇದೆ. ಚರ್ಮದ ಕಾಂತಿಗಾಗಿ ಬೇರೆ ಬೇರೆ ತರಹದ ಉತ್ಪನ್ನಗಳನ್ನು ಉಪಯೋಗಿಸುವ ಬದಲು ಮಜ್ಜಿಗೆಯನ್ನು ಪ್ರತಿನಿತ್ಯ ತೀನುವುದು ಉತ್ತಮ. ಮಜ್ಜಿಗೆ ಚರ್ಮವನ್ನು ಶುದ್ಧೀಕರಿಸುತ್ತದೆ. ಹಾಗೂ ಚರ್ಮ ತಾರುಣ್ಯದಿಂದ ಕೂಡಿರಲು ಮಜ್ಜಿಗೆ ಸಹಾಯ ಮಾಡುತ್ತದೆ.
ಹೆಚ್ಚು ವೆಚ್ಚದ ಹಣ ನೀಡಿ ಸೌಂದರ್ಯ ಉತ್ಪನ್ನಗಳನ್ನು ಖರೀದಿ ಮಾಡುವ ಬದಲು, ನೈಸರ್ಗಿಕವಾದ ಪದಾರ್ಥಗಳನ್ನು ಬಳಸುವುದು ತ್ವಚೆಗೆ ಒಳ್ಳೆಯದು. ಮಜ್ಜಿಗೆಯನ್ನು ವಿಶೇಷವಾದ ಕ್ಲೆನ್ಸರ್ ರೀತಿ ಚರ್ಮಕ್ಕೆ ಬಳಸುವುದರಿಂದ ಚರ್ಮವನ್ನು ಆಳವಾಗಿ ಶುದ್ಧೀಕರಿಸುವ ಮೂಲಕ ಚರ್ಮದ ಒಳಗಿನ ರಂಧ್ರಗಳಲ್ಲಿರುವ ಕೊಳಕು ಮತ್ತು ಧೂಳುಗಳನ್ನು ಹೊರತೆಗೆದು ಚರ್ಮವನ್ನು ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ.
ಇನ್ನು ಮಜ್ಜಿಗೆಗೆ 2 ಚಮಚ ರೋಸ್ ವಾಟರ್ ಅನ್ನು ಮಿಕ್ಸ್ ಮಾಡಿ, ಮಿಶ್ರಣವನ್ನು ನಿಮ್ಮ ಚರ್ಮಕ್ಕೆ ಕ್ಲೆನ್ಸರ್ ರೀತಿ ನಿಧಾನವಾಗಿ ಬಳಸಬೇಕು. ಇದೆ ರೀತಿ ವಾರದಲ್ಲಿ 2 ರಿಂದ 3 ಬಾರಿ ಮಾಡಿದರೆ, ನೀವೇ ಸ್ವತಃ ಫಲಿತಾಂಶವನ್ನು ಕಂಡುಕೊಳ್ಳಬಹುದು.
ಅದಷ್ಟೇ ಅಲ್ಲದೆ ಮಜ್ಜಿಗೆ ಮತ್ತು ಜೇನುತುಪ್ಪವನ್ನು ಮಿಕ್ಸ್ ಮಾಡಿ ಹಚ್ಚಿದರೆ ಚರ್ಮದ ವಯಸ್ಸಾಗುವಿಕೆಯನ್ನು ನಿಧಾನಗೊಳಿಸುತ್ತದೆ. ಅಲ್ಲದೆ, ಜೇನುತುಪ್ಪ ಕ್ಲೆನ್ಸರ್ ಆಗಿ ಹಾಗೂ ಮಜ್ಜಿಗೆ ಚರ್ಮವನ್ನು ತೇವಗೊಳಿಸುವ ಶಕ್ತಿಯನ್ನು ಹೊಂದಿದೆ. ಅಷ್ಟೇ ಅಲ್ಲ ಚರ್ಮವನ್ನು ಬಿಗಿಗೊಳಿಸಲು ಕೂಡ ಸಹಾಯ ಮಾಡುತ್ತದೆ..
ನಿಮ್ಮ ಮುಖದಲ್ಲಿ ತೀವ್ರ ಮೊಡವೆ ಇದ್ದರೆ ಫೇಸ್ ಪ್ಯಾಕ್‌ಗಳಲ್ಲಿ ಮಜ್ಜಿಗೆಯನ್ನು ಬಳಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಹೀಗೆ ಮಾಡುವುದರಿಂದ ಕೇವಲ ಮೊಡವೆಗಳಿಗೆ ಮಾತ್ರ ಮಜ್ಜಿಗೆ ಚಿಕಿತ್ಸೆ ನೀಡುವುದಿಲ್ಲ ಜೊತೆಗೆ ಚುಕ್ಕೆಗಳು, ಕಲೆಗಳನ್ನು ಹಗುರಗೊಳಿಸುತ್ತದೆ.
ಇನ್ನು ಕೊನೆಯ ವಿಧಾನ ಏನೆಂದರೆ, ಒಂದು ಬೌಲ್‌ನಲ್ಲಿ 2 ಚಮಚ ಕಡಲೆಹಿಟ್ಟಿಗೆ, ಕಾಲ್ ಚಮಚ ಅರಿಶಿಣ ಮತ್ತು ಬೇಕಾಗುವಷ್ಟು ಮಜ್ಜಿಗೆಯನ್ನು ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. ಈ ಪೇಸ್ಟ್ ಅನ್ನು ನಿಮ್ಮ ಮುಖ, ಕುತ್ತಿಗೆಗೆ ಹಚ್ಚಿರಿ. ಹಚ್ಚಿದ ನಂತರ 15 ರಿಂದ 20 ನಿಮಿಷಗಳ ಬಳಿಕ ತಣ್ಣೀರಿನಲ್ಲಿ ಶುದ್ಧೀಕರಿಸಿ. ಈ ವಿಧಾನವನ್ನ ವಾರಕೆ ಒಂದು ಬಾರಿ ಮಾಡುವುದರಿಂದ ಚರ್ಮದ ಅನೇಕ ಸಮಸ್ಯೆಗಳಿಗೆ ಮುಕ್ತಿ ಪಡೆಯಬಹುದು.
ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ