ಬಿಗ್ ಸ್ಕ್ರೀನ್ ಮೇಲೆ ಫಿಟ್ ಅಂಡ್ ಫೈನ್ ಆಗಿ ಸಿಕ್ಸ್ ಪ್ಯಾಕ್ ನಲ್ಲಿ ನಿಮ್ಮ ನೆಚ್ಚಿನ ಹೀರೋಗಳು ಕಾಣಿಸ್ತಾರೆ. ಈ ಹೀರೋಗಳ ದೇಹವನ್ನ ಉರಿಗೊಳಿಸಿ ಪ್ರೇಕ್ಷಕರ ಮುಂದೆ ಜಬರ್ದಸ್ತಾಗಿ ಕಾಣಿಸೋ ತರ ಮಾಡೋದು ಒನ್ ಅಂಡ್ ಒನ್ಲೀ ಜಿಮ್ ಟ್ರೈನರ್ಸ್ ಅಲ್ವಾ..
ಅದ್ರಲ್ಲೂ ಸದ್ಯ ಸ್ಯಾಂಡಲ್‌ವುಡ್‌ನ ಯಂಗ್ ಹೀರೋಗಳ ಪಾಲಿನ ನೆಚ್ಚಿನ ಜಿಮ್ ಟ್ರೈನರ್ ಅಂದ್ರೆ ಅವ್ರು ಶ್ರೀನಿವಾಸಗೌಡ ಅಲಿಯಾಸ್ ಸೀನು. ಇವ್ರಿಗೆ ಬುದ್ಧಿ ಬಂದಾಗಿನಿಂದ ಕನ್ನಡ ಭಾಷೆಯ ಬಗ್ಗೆ ಹೆಚ್ಚು ಅಭಿಮಾನ ಜೊತೆಗೆ ಜಿಮ್ ಕಡೆಯೂ ಹೆಚ್ಚು ಒಲವು. ಬಡತನದಲ್ಲೇ ಬೆಳೆ ಶ್ರೀನಿವಾಸ್ ಗೌಡ ಚಿಕ್ಕ ವಯಸ್ಸಿನಲ್ಲೇ ಪೇಪರ್ ಹಾಕೋದ್ರಿಂದ ಹಿಡಿದೂ ಹೊಟ್ಟೆ ಪಾಡಿಗಾಗಿ ಸಾಕಷ್ಟು ಕೆಲಸಗಳನ್ನ ಮಾಡಿದ್ದಾರೆ. ಬಳಿಕ ಮಾಸ್ತಿಗುಡಿ ಖ್ಯಾತಿಯ ನಟ ಅನಿಲ್ ರ ಜಿಮ್‌ನಲ್ಲಿ ತಮ್ಮಿಷ್ಟದ ಜಿಮ್ ಟ್ರೈನರ್ ಆಗಿ ಕೆಲಸ ಶುರುಮಾಡ್ತಾರೆ.
ಕೆಲ ವರ್ಷಗಳ ಬಳಿಕ ಬನಶಂಕರಿ ಸೆಕೆಂಡ್ ಸ್ಟೇಜ್‌ನಲ್ಲಿ ಮಸಲ್ 360 ಹೆಸರಿನ ಹೊಸ ಜಿಮ್ ಟ್ರೈನಿಂಗ್ ಸೆಂಟರ್‌ನ ಶುರು ಮಾಡಿ, ಅಲ್ಲಿಂದ ಇವರ ಹೊಸ ಜರ್ನಿಯೇ ಶುರುವಾಗುತ್ತೆ. ಮೊದಲಿಗೆ ನಟ ಧನಂಜಯ್ ಹಾಗೂ ನಟ ಅನೀಶ್ ಸೀನು ಅವ್ರ ಜಿಮ್ ಟ್ರೈನಿಂಗ್ ಪಡೀತಾರೆ, ಇವರ ಬಳಿಕ ವಸಿಷ್ಠ ಸಿಂಹ, ರಚಿತಾ ರಾಮ್, ರಕ್ಷಿತ್ ಶೆಟ್ಟಿ, ಪ್ರವೀಣ್ ತಏಜ್, ರಕ್ಷ್, ಸೋನು ಗೌಡ, ನಿರ್ದೇಶಕ ಸೂರಿ ಹೀಗೆ ಸಾಲು ಸಾಲು ನಟ,ನಟಿಯರಿಗೆ ಶ್ರೀನಿವಾಸ್ ಗೌಡ ಜಿಮ್ ಟ್ರೈನಿಂಗ್ ಮಾಡಿದ್ದಾರೆ. ಯಂಗ್ ಹೀರೋಗಳ ರಿಯಲ್ ಹೀರೋ ಆಗಿರೋ ಶ್ರೀನಿವಾಸ ಗೌಡ ಅವ್ರ ಕಂಪ್ಲೀಟ್ ಸಂದರ್ಶನ ಶೀಘ್ರದಲ್ಲೆ ನಿಮ್ಮ ಕರ್ನಾಟಕ ಟಿವಿಯಲ್ಲಿ ಬರಲಿದೆ ವೀಕ್ಷಿಸಿ.
ನಳಿನಾಕ್ಷಿ, ಕರ್ನಾಟಕ ಟಿವಿ