Tumakuru: ತಿಪಟೂರಿನ ಹಳ್ಳಿ ಹಳ್ಳಿಗೂ ಅರೋಗ್ಯ ರಕ್ಷೆ: ಡಾ. ಜಿ.ಎಸ್. ಶ್ರೀಧರ್‌ ಅವರ ಸಂಕಲ್ಪ

Tumakuru: ತಿಪಟೂರು: ತಿಪಟೂರಿನ ಗ್ರಾಮೀಣ ಭಾಗದ ಜನರಿಗೂ ಗುಣಮಟ್ಟದ ಆರೋಗ್ಯ ಸೇವೆ ಸುಲಭವಾಗಿ ದೊರೆಯಬೇಕು ಎಂಬ ಉದ್ದೇಶದಿಂದ ಸತ್ಯಕುಮಾರ್‌ ರಿಲೀಫ್‌ ಫೌಂಡೇಶನ್‌ ವತಿಯಿಂದ ‘ಸಂಚಾರಿ ಆರೋಗ್ಯ ಚಿಕಿತ್ಸಾಲಯ’ ಸೇವೆಯನ್ನು ಆರಂಭಿಸಲಾಗಿದೆ.

ತಿಪಟೂರಿನ ಕಟ್ಟಕಡೆಯ ಹಳ್ಳಿಗಾಡಿನ ವ್ಯಕ್ತಿಗೂ ಆರೋಗ್ಯ ತಪಾಸಣೆ ಹಾಗೂ ಅಗತ್ಯ ಚಿಕಿತ್ಸಾ ಸೇವೆ ದೊರೆಯಬೇಕು ಎಂಬುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ಆರೋಗ್ಯ ಸೇವೆಗಾಗಿ ದೂರದ ಆಸ್ಪತ್ರೆಗೆ ತೆರಳಲು ಸಾಧ್ಯವಾಗದ ಗ್ರಾಮೀಣ ಭಾಗದ ಜನರಿರುವ ಸ್ಥಳಗಳಿಗೆ ಸಂಚಾರಿ ಆರೋಗ್ಯ ಚಿಕಿತ್ಸಾಲಯ ತೆರಳಿ, ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ನೀಡಲಿದೆ.

ಡಾ. ಜಿ.ಎಸ್. ಶ್ರೀಧರ್‌ ಅವರ ಸಂಕಲ್ಪದಂತೆ, ತಿಪಟೂರಿನ ಹಳ್ಳಿ ಹಳ್ಳಿ ಹಳ್ಳಿಗೂ ದಿನ ನಿತ್ಯ ತೆರಳಿ ಜನರಿಗೆ ಆರೋಗ್ಯ ಸೇವೆ ಒದಗಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಈ ಸಂಚಾರಿ ಆರೋಗ್ಯ ಚಿಕಿತ್ಸಾಲಯ ಗ್ರಾಮೀಣ ಜನರ ಆರೋಗ್ಯ ಕಾಳಜಿಗೆ ಮುಂದಾಗಿದೆ.

ತಿಪಟೂರಿನ ಪ್ರತಿಯೊಂದು ಹಳ್ಳಿಗೂ ಆರೋಗ್ಯ ಭಾಗ್ಯ ತಲುಪಿಸುವ ನಿಟ್ಟಿನಲ್ಲಿ ಸತ್ಯಕುಮಾರ್‌ ರಿಲೀಫ್‌ ಫೌಂಡೇಶನ್‌ ಕೈಗೊಂಡಿರುವ ಈ ಸೇವಾ ಕಾರ್ಯಕ್ಕೆ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

About The Author