Hubli News: ಹುಬ್ಬಳ್ಳಿ: ಗಣೇಶ ಚತುರ್ಥಿ ಆಚರಣೆ, ಗಣೇಶ ವಿಸರ್ಜನೆ ವೇಳೆಯಲ್ಲಿ ಹಲವೆಡೆ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗುತ್ತಿದೆ. ಆದ್ದರಿಂದ ಹಬ್ಬದ ಸಮಯದಲ್ಲಿ ಪೊಲೀಸರು ಕಟ್ಟೆಚ್ಚರವಹಿಸುತ್ತಾರೆ. ಆದರೆ ವಾಣಿಜ್ಯ ನಗರಿ ಹುಬ್ಬಳ್ಳಿಯ ನ್ಯೂ ಮ್ಯಾದಾರ ಓಣಿಯಲ್ಲಿ ಮಾತ್ರ ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮೂದಾಯದವರು ಒಟ್ಟಾಗಿ ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸಿ ಸಮಯದಲ್ಲಿ ಭಾವೈಕ್ಯತೆಯ ಸಂದೇಶವನ್ನು ಸಾರಿದ್ದಾರೆ.
ಹೌದು, ನ್ಯೂ ಮ್ಯಾದಾರ ಓಣಿಯಲ್ಲಿ ಹುಬ್ಬಳ್ಳಿ ಚಾ ಸಪ್ತಸಾಮ್ರಾಟ್ ಗಜಾನನ ಯುವಕ ಮಂಡಳದಿಂದ ಪ್ರತಿವರ್ಷದಂತೆ ಈ ವರ್ಷವೂ ಕೂಡಾ 21 ಫುಟ್ ನ ಬೃಹತ್ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ.
ಈಗಾಗಲೇ 10 ದಿನಗಳ ಕಾಲ ಗಣೇಶನಿಗೆ ಸಮಿತಿಯವರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇಂದು ಈ ಗಣೇಶನನ್ನು ಅದ್ದೂರಿಯಾಗಿ ಮತ್ತು ವಿಶಿಷ್ಟವಾಗಿ ವಿಸರ್ಜನೆ ಮಾಡಲು ಸಿದ್ದತೆ ನಡೆಸಲಾಗಿದೆ.
ಪುಣೆ, ಮುಂಬೈ ಮಾದರಿಯಲ್ಲಿ ಗಣೇಶ ವಿಸರ್ಜನೆಗೆ ಸಿದ್ದತೆ…
ಅಂದ ಹಾಗೇ ಹುಬ್ಬಳ್ಳಿಯಲ್ಲಿ ನಡೆಯುವ ಗಣೇಶ ಚತುರ್ಥಿ ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದೆ. ಅದರಂತೆ ಈ ವರ್ಷ ಗಣೇಶ ಚತುರ್ಥಿಗೆ ಮತ್ತಷ್ಟು ರಂಗು ನೀಡಬೇಕೆಂಬ ಉದ್ದೇಶದಿಂದ ಸಪ್ತಸಾಮ್ರಾಟ್ ಗಜಾನನ ಯುವಕ ಮಂಡಳದ ಸದಸ್ಯರು ಇದೇ ಮೊದಲ ಬಾರಿಗೆ ಪುಣೆ, ಮುಂಬೈ ಮಾದರಿಯಲ್ಲಿ ಗಣೇಶ ವಿಸರ್ಜನೆಗೆ ಸಿದ್ದತೆ ನಡೆಸಿದ್ದಾರೆ.
ಅದಕ್ಕಾಗಿ ಮ್ಯಾದಾರ ಓಣಿಯಲ್ಲಿ ಪ್ರತ್ಯೇಕ ಸೆಟ್ ಹಾಕಿ ಸೌಂಡ್ ಸಿಸ್ಟಮ್ ಅಳವಡಿಸಿದ್ದಾರೆ. ಮತ್ತೊಂದು ಕಡೆಗೆ ಬೃಹತ್ ಗಣೇಶ ಮೂರ್ತಿಯನ್ನಿಟ್ಟು ಸಕಲ ಭಕ್ತರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಸಂಜೆ ನಡೆಯುವ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಸಕಲ ಭಕ್ತರು ಭಾಗವಹಿಸಿ ಗಣೇಶನ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಮಂಡಳಿಯ ಸದಸ್ಯರು ಮನವಿ ಮಾಡಿದ್ದಾರೆ.




