Tuesday, October 15, 2024

Latest Posts

10 ಗಂಟೆಗೆ ಡಿಜೆ ಬಂದ್, ಕಿಡಿಗೇಡಿಗಳು ಬಾಲ ಬಿಚ್ಚಿದ್ರೆ ಕಠಿಣ ಕ್ರಮ: ಕಮಿಷನರ್‌ ಶಶಿಕುಮಾರ್

- Advertisement -

Hubli News: ಹುಬ್ಬಳ್ಳಿ: ವಾಣಿಜ್ಯನಗರ ಹುಬ್ಬಳ್ಳಿಯಲ್ಲಿ ಹನ್ನೊಂದನೇ ದಿನದ ಗಣಪತಿ ವಿಸರ್ಜನೆ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ನಿಂದ ಹೈ ಅಲರ್ಟ್ ಘೋಷಣೆ ಮಾಡಿದ್ದು, ಎಲ್ಲೆಡೆಯೂ ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.

ಈದ್ಗಾ ಮೈದಾನದಲ್ಲಿ ನೂರಾರು ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳು ಬೀಡು ಬಿಟ್ಟಿದ್ದು, ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

ಹುಬ್ಬಳ್ಳಿಯ ಗಣಪತಿ ವಿಸರ್ಜನೆಗೆ ಈಗಾಗಲೇ ಸಾಕಷ್ಟು ಸಿದ್ಧತೆ ಮಾಡಲಾಗಿದ್ದು, ಶಾಂತಿಯುತ ಗಣಪತಿ ವಿಸರ್ಜನೆ ಮಾಡುವ ಸದುದ್ದೇಶದಿಂದ ಕಮೀಷನರೇಟ್ ನಿಂದ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ಅಲ್ಲದೇ ಹುಬ್ಬಳ್ಳಿಯ ಗಣಪತಿ ವಿಸರ್ಜನೆಗೆ ನಾಡಿನ ಮೂಲೆ ಮೂಲೆಯಿಂದ ಜನರು ಆಗಮಿಸುವ ಹಿನ್ನೆಲೆಯಲ್ಲಿ ಭದ್ರತೆ ನಿಯೋಜನೆ ಮಾಡಲಾಗಿದೆ.

ಈಗಾಗಲೇ ಚನ್ನಮ್ಮ ವೃತ್ತ ಸೇರಿದಂತೆ ಆಯಕಟ್ಟಿನ ಸ್ಥಳಗಳಲ್ಲಿ ಹದ್ದಿನ ಕಣ್ಣು ಇರಿಸಲಾಗಿದ್ದು, ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡುವವರ ವಿರುದ್ಧ ಕಾನೂನು ಕ್ರಮಗಳನ್ನು ಜರುಗಿಸಲು ಕೂಡ ಪೊಲೀಸ್ ಇಲಾಖೆ ಮುಂದಾಗಿದೆ.

ಈ‌ಕುರಿತಂತೆ ಹು-ಧಾ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಪ್ರತಿಕ್ರಿಯೆ ನೀಡಿದ್ದು, ಇಂದು 11 ನೇ ದಿನದ ಬೃಹತ್ ಗಣೇಶ ವಿಸರ್ಜನೆ ನಡೆಯಲಿದೆ. ಕಳೆದ 10 ದಿನಗಳ ಕಾಲ ಶಾಂತಿಯುತವಾಗಿ ಸಾರ್ವಜನಿಕ ಗಣೇಶೋತ್ಸವ ನಡೆದಿದೆ . ಇಂದು 100 ಕ್ಕೂ ಹೆಚ್ಚು ಗಣೇಶ ಮೂರ್ತಿಗಳು ವಿಸರ್ಜನೆಗೊಳ್ಳಲಿವೆ. ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಜನರು ಬರುವ ಸಂಭವ ಇದೆ . 3,500 ಕ್ಕಿಂತ ಹೆಚ್ಚು ಅಧಿಕಾರಿ, ಸಿಬ್ಬಂದಿಗಳನ್ನು ಬಂದೋಬಸ್ತ್ ಗಾಗಿ ನೇಮಕ ಮಾಡಲಾಗಿದೆ. 19 ಸ್ಥಳಗಳಲ್ಲಿ ಸೇಫ್ಟಿ ಐ ಲ್ಯಾಂಡ್ ಮಾಡಲಾಗಿದೆ.
ಆರೋಗ್ಯ ಸಮಸ್ಯೆ ಆದ್ರೆ ಅಲ್ಲಿ ವಿಶ್ರಾಂತಿ ತೆಗೆದುಕೊಳ್ಳಬಹುದು . ಗಣೇಶ ವಿಸರ್ಜನೆ ಹಿನ್ನೆಲೆ ನಗರದಾದ್ಯಂತ 250ಕ್ಕೂ ಹೆಚ್ಚು ಸಿಸಿ ಟಿವಿ ಅಳವಡಿಸಲಾಗಿದೆ ಎಂದರು.

ಕಾರ್ಯಾಚರಣೆ ನಡೆಯುವ ವೇಳೆ ವಿದ್ಯುತ್ ಸಮಸ್ಯೆ ಆಗಬಾರದು ಅಂತ ಪಾಲಿಕೆಗೆ ಹೇಳಿದ್ದೇವೆ.
ಆಂಬುಲೆನ್ಸ್, ಅಗ್ನಿ ಶಾಮಕದಳ ವ್ಯವಸ್ಥೆ ಮಾಡಿದ್ದೇವೆ‌ . ವಯರ್ಲೆಸ್ ಸಿಸಿಟಿವಿ ಸೇರಿ ಹಲವು ಭದ್ರತೆ ಒದಗಿಸಿದ್ದೇವೆ. ಮಾರ್ಗಮಧ್ಯದಲ್ಲಿ ಇರುವ ಧಾರ್ಮಿಕ ಕೇಂದ್ರದ ಕಮಿಟಿ ಯವರು ಗೌರವ ಸಲ್ಲಿಸುತ್ತಿದ್ದಾರೆ.
ಜಿಲ್ಲಾಧಿಕಾರಿಗೂ ಸಹ ನಮ್ಮ ಸಂಪೂರ್ಣ ರೂಪರೇಷೆ ತಿಳಿಸಿದ್ದೇವೆ. ಅವರು ಸಂಜೆ ಬಂದು ಸಹಕಾರ ನೀಡಿದವರಿಗೆ ಧನ್ಯವಾದ ತಿಳಿಸಲಿದ್ದಾರೆ. ಕಳೆದ 10 ದಿನಗಳಿಂದ ಶಾಂತಿಯುತವಾಗಿ ಗಣೇಶೋತ್ಸವ ನಡೆದಿದೆ‌‌. ಗಣೇಶೋತ್ಸವ ಮುಂಬೈ ರೀತಿ ಹುಬ್ಬಳ್ಳಿಯಲ್ಲೂ ಸಂಭ್ರಮದಿಂದ ಆಚರಿಸಲಾಗುತ್ತೆ. ಗಣೇಶ ಮಂಡಳಿ ಸೇರಿ ಹಲವು ಸಂಘ-ಸಂಸ್ಥೆಗಳು ಸಹಕಾರ ನೀಡಿದ್ದಾರೆ. ಕಿಡಿಗೇಡಿಗಳು ಸಮಸ್ಯೆ ಮಾಡಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತೆ ಎಂದರು.

10 ಗಂಟೆಗೆ ಡಿಜೆ ಬಂದ್ …

ಸುಪ್ರೀಂ ಕೋರ್ಟ್ ನಿರ್ದೇಶನದಂತೆ 10 ಗಂಟೆಗ ಡಿಜೆ ಬಂದ್ ಮಾಡಬೇಕು. ಹೆಚ್ಚಿನ ಕಾಲಾವಕಾಶಕ್ಕಾಗಿ ಮನವಿ ಮಾಡಿದ್ದಾರೆ, ಆದರೆ ಅದು ಸಾಧ್ಯವಿಲ್ಲ . 10 ಗಂಟೆಗೆ ಬಂದ್ ಆಗಲೇ ಬೇಕು ಅದರಲ್ಲಿ ಎರಡು ಮಾತಿಲ್ಲ .10 ಗಂಟೆ ನಂತರ ಸಾರ್ವಜನಿಕರು ಕುಟುಂಬ ಸಮೇತ ಆಗಮಿಸುತ್ತಿದ್ದಾರೆ ಖುಷಿ ವಿಚಾರ . ಹುಬ್ಬಳ್ಳಿ ಧಾರವಾಡ ಕಮಿಷ್ನರೇಟ್ ನಲ್ಲಿ ಹಲವು ಚುನಾಯಿತ ಪ್ರತಿನಿಧಿಗಳು ಮನವಿ ಮಾಡಿದ್ದಾರೆ . ಆದರೆ ಅವಕಾಶ ಕೊಡಲು ಅವಕಾಶ ಇಲ್ಲ‌ ಇದಕ್ಕೆ ಗಜಾನನ ಮಂಡಳಿ ಅವರು ಒಪ್ಪಿ, ಸಹಕರಿಸಿದ್ದಾರೆ. 2 ಲಕ್ಷಕ್ಕಿಂತ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದೆ ಜನ ಜಾಸ್ತಿ ಇದ್ದಾಗ ಡಿಜೆ ನಿಲ್ಲಿಸ್ತಾರೆ. ವಿಸರ್ಜನೆಗೆ ಸ್ವಲ್ಪ ಸಮಯ ಹೆಚ್ಚು ಕಡಿಮೆ ಆಗುತ್ತೆ ಇಂದು ಹುಬ್ಬಳ್ಳಿಕಾ ರಾಜ, ಮಹಾರಾಜ, ದುರ್ಗದ ಬೈಲ್ ಸೇರಿದಂತೆ ಪ್ರಮುಖ ಗಣೇಶ ವಿಸರ್ಜನೆ ಆಗುತ್ತವೆ. ಹೀಗಾಗಿ ಜನದಟ್ಟನೆ ಬಹಳಷ್ಟು ಇರುತ್ತೆ ಜನ ಸಹಕರಿಸಬೇಕು ಎಂದು ಮನವಿ ಮಾಡಿದರು.

- Advertisement -

Latest Posts

Don't Miss