- Advertisement -
Special News:
ಆಂದ್ರಪ್ರದೇಶದಲ್ಲಿ ವ್ಯಕ್ತಿಯೋರ್ವ ಯೂಟ್ಯೂಬ್ ನೋಡಿ ನಕಲಿ ನೋಟು ತಯಾರಿಸಿದ ಘಟನೆ ನಡೆದಿದೆ. 7ನೇ ಕ್ಲಾಸ್ ಓದಿದ್ದ ವ್ಯಕ್ತಿಯೊಬ್ಬ ಯುಟ್ಯೂಬ್ ನೋಡಿ ನಕಲಿ ನೋಟುಗಳನ್ನು ತಯಾರಿಸಿ ಚಲಾವಣೆ ಮಾಡುತ್ತಿದ್ದು, ಇದೀಗ ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.ಬಂಧಿತನನ್ನು ಆಂಧ್ರಪ್ರದೇಶದ ಪುಲ್ಲಲರೇವು ರಾಜು (36) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಯಿಂದ 500 ರೂ. ಮುಖಬೆಲೆಯ ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದ್ದು, ಪ್ರಕರಣದಲ್ಲಿ ಆರೋಪಿಗೆ ಸಹಕಾರ ನೀಡಿದ ಆಂಧ್ರಪ್ರದೇಶದ ಕಡಪದ ರಜನಿ ಮತ್ತು ಚರಣ್ ಸಿಂಗ್ ಎಂಬರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಯುಟ್ಯೂಬ್ ನೋಡಿ ನಕಲಿ ನೋಟುಗಳ ತಯಾರಿ ಬಗ್ಗೆ ತಿಳಿದುಕೊಂಡು, ಖೋಟಾ ನೋಟುಗಳನ್ನು ಸಿದ್ಧಪಡಿಸುತ್ತಿದ್ದ. ಆದರೆ, ಸ್ಥಳೀಯರ ಬಳಿ ಶೋರೂಂವೊಂದರಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
- Advertisement -