ಡ್ರೈವಿಂಗ್ ವೇಳೆ ಲೈವ್ ಸ್ಟ್ರೀಮ್ ಮಾಡಲು ಹೋಗಿ ನಜ್ಜುಗುಜ್ಜಾದ ಯೂಟ್ಯೂಬರ್‌ನ ಕೋಟಿ ಬೆಲೆಯ ಕಾರು

International News: ಡ್ರೈವಿಂಗ್ ವೇಳೆ ಲೈವ್ ಸ್ಟ್ರೀಮ್ ಮಾಡಲು ಹೋಗಿ ಯೂಟ್ಯೂಬರ್‌ನ 1.7 ಕೋಟಿಗೂ ಹೆಚ್ಚಿನ ಬೆಲೆಯ ಕಾರು ನಜ್ಜುಗುಜ್ಜಾಗಿದೆ.

ಅಮೆರಿಕದ 20 ವರ್ಷದ ಖ್ಯಾತ ಯೂಟ್ಯೂಬರ್ ಜ್ಯಾಕ್ ಮಿಯಾಮಿ ತನ್ನ 1.7 ಕೋಟಿಗೂ ಮೀರಿದ ಮ್ಯಾಕ್‌ಲ್ಯಾರೆನ್ ಸೂಪರ್ ಕಾರ್‌ನಲ್ಲಿ ಹೋಗುವಾಗ, ಲೈವ್ ಸ್ಟ್ರೀಮ್ ಮಾಡಲು ಹೋಗಿ, ಎಡವಟ್ಟು ಮಾಡಿಕೊಂಡಿದ್ದಾನೆ. ಆತ ಲೈವ್ ಸ್ಟ್ರೀಮ್ ಇಡಲು ಪ್ರಯತ್ನಿಸುವುದು. ಅದು ಸರಿಯಾಗದೇ, ಅಪಘಾತವಾಗಿ, ಕಾರ್ ನಜ್ಜುಗುಜ್ಜಾಗುವುದು, ಕೊನೆಗೆ ಆತ ಬೊಬ್ಬೆ ಹಾಕುವುದು ಕೂಡ ರೆಕಾರ್ಡ್ ಆಗಿದೆ.

ಇನ್ನು ಜ್ಯಾಕ್ ಹಣೆಗೂ ಕೂಡ ಪೆಟ್ಟಾಗಿದ್ದು, ತನ್ನ ಚಚ್ಚಿಹೋದ ಕಾರ್ ಪರಿಸ್ಥಿತಿಯನ್ನು ಆತ ಕೊನೆಗೆ ತೋರಿಸಿದ್ದಾನೆ. ಘಟನೆ ಬಗ್ಗೆ ಜ್ಯಾಕ್‌ ತೀವ್ರ ಬೇಸರ ವ್ಯಕ್ತಪಡಿಸಿದ್ದು, ಈತನ ಹುಚ್ಚಾಟಕ್ಕೆ ಜನ, ಅಸಮಾಧಾನ ಹೊರಹಾಕಿದ್ದಾರೆ.

ಕಾರ್ ಅಪಘಾತದ ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ. 

About The Author