Monday, December 23, 2024

Latest Posts

ಯುವರಾಜನ 5 ನೇ ಸಿನಿಮಾ ಸ್ಥಗಿತ.!

- Advertisement -

ನಿಖಿಲ್ ಕುಮಾರಸ್ವಾಮಿ ಕನ್ನಡ ಚಿತ್ರರಂಗದ ಉದಯೋನ್ಮುಖ ನಟ. ಇವರು ಮೊದಲ ಬಾರಿಗೆ ನಾಯಕ ನಟನಾಗಿ ತಮ್ಮ ಹೋಮ್ ಬ್ಯಾನರ್ ನಲ್ಲಿ ನಿರ್ಮಾಣಗೊಂಡ ‘ಜಾಗ್ವಾರ್’ ಚಿತ್ರದ ಮೂಲಕ ಕನ್ನಡ ಮತ್ತು ತೆಲುಗು ಚಿತ್ರರಂಗಕ್ಕೆ ಪರಿಚಿತರಾದರು. ನಂತರ ಹರ್ಷ ನಿರ್ದೇಶನದಲ್ಲಿ ಮೂಡಿಬಂದ ಕೌಟುಂಬಿಕ ಚಿತ್ರ ‘ಸೀತಾರಾಮ ಕಲ್ಯಾಣ’ದಲ್ಲಿ ನಟಿಸಿದರು. ಅನಂತರ ಪೌರಾಣಿಕ ಚಿತ್ರ ‘ಕುರುಕ್ಷೇತ್ರ’ದಲ್ಲಿ ಅಭಿಮನ್ಯುವಿನ ಪಾತ್ರದಲ್ಲಿ ನಟಿಸಿದ್ದರು.

‘ರೈಡರ್’ ಸಿನಿಮಾ ಬಳಿಕ ಮತ್ತೊಂದು ಸಿನಿಮಾ ಮಾಡ್ತಿದ್ದಾರೆ. ಆ ಹೊಸ ಸಿನಿಮಾ ಇದೇ ವರ್ಷದ ಆರಂಭದಲ್ಲಿ ಸೆಟ್ಟೇರಿತ್ತು. ನಿಖಿಲ್ ಕುಮಾರಸ್ವಾಮಿ ಹಾಗೂ ಕೆವಿಎನ್ ಪ್ರೊಡಕ್ಷನ್ ಕಾಂಬಿನೇಷನ್‌ನ ಸಿನಿಮಾ ‘ಯದುವೀರ’. ಈ ಸಿನಿಮಾ ಬಗ್ಗೆ ಈವರೆಗೂ ಯಾವುದೇ ಒಂದು ಅಪ್‌ಡೇಟ್ ಕೂಡ ಸಿಕ್ಕಿರಲಿಲ್ಲ. ಆದರೆ ಇದೀಗ ನಿಖಿಲ್ ಅಭಿಮಾನಿಗಳಿಗೆ ಈ ಸಿನಿಮಾದ ಬಗ್ಗೆ ಒಂದು ಬೇಸರದ ಸುದ್ದಿ ಇದೆ.

ಈ ಸಿನಿಮಾ ಬಗ್ಗೆ ಹರಿದಾಡುತ್ತಿರುವ ಸುದ್ದಿ ಏನಪ್ಪಾ ಅಂದ್ರೆ, ‘ಯದುವೀರ’ ಸಿನಿಮಾ ತಾತ್ಕಾಲಿಕವಾಗಿ ನಿಂತಿದೆ ಎನ್ನಲಾಗುತ್ತಿದೆ. ನಿರ್ಮಾಣ ಸಂಸ್ಥೆಯಾಗಲಿ ಅಥವಾ ನಿಖಿಲ್ ಕುಮಾಸ್ವಾಮಿಯಾಗಲಿ ಈ ಸಿನಿಮಾ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಅನ್ನೋ ಮಾತು ಕೂಡ ಕೇಳಿ ಬರುತ್ತಿವೆ. ಮತ್ತೆ ‘ಯದುವೀರ’ ಸಿನಿಮಾ ಯಾವಾಗ ಶುರುವಾಗುತ್ತೆ ಎನ್ನುವುದರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ.

ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ 

 

 

 

 

 

- Advertisement -

Latest Posts

Don't Miss