ಕ್ರಿಕೇಟಿಗ ಯುವರಾಜ್ ಸಿಂಗ್ ಅಪ್ಪನಾದ ಖುಷಿಯಲ್ಲಿದ್ದಾರೆ. ಪತ್ನಿ ಹೇಜಲ್ ಗಂಡು ಮಮಗುವಿಗೆ ಜನ್ಮ ನೀಡಿದ್ದು, ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಯುವಿ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಕ್ರಿಕೇಟಿಗರೆಲ್ಲ ಯುವಿಗೆ ಅಭಿನಂದಿಸಿದ್ದು, ಹರ್ಭಜನ್ ಸಿಂಗ್, ಮೊಹಮ್ಮದ್ ಕೈಫ್, ಇರ್ಫಾನ್ ಪಠಾಣ, ರಾಹುಲ್ ಶರ್ಮಾ, ಪರ್ವಿಂದರ್ ಅವಾನಾ ಸೇರಿ ಹಲವು ಕ್ರಿಕೇಟಿಗರು ಈ ಬಗ್ಗೆ ಟ್ವೀಟಿಸಿದ್ದಾರೆ.
ನನ್ನ ಅಭಿಮಾನಿಗಳು, ಗೆಳೆಯರು, ಸಂಬಂಧಿಕರ ಜೊತೆ, ಈ ಖಷಿಯ ವಿಷಯ ಹಂಚಿಕೊಳ್ಳಲು ಸಂತೋಷವಾಗುತ್ತಿದೆ. ದೇವರು ನಮಗೆ ಗಂಡು ಮಗುವನ್ನು ನೀಡಿ, ಆಶೀರ್ವದಿಸಿದ್ದು, ಈ ಆಶೀರ್ವಾದಕ್ಕಾಗಿ ನಾವು ದೇವರಿಗೆ ಧನ್ಯವಾದ ಹೇಳುತ್ತೇವೆ. ಇನ್ನು ಈ ಬಗ್ಗೆ ನಾವಿರಿಸಿದ್ದ ಗೌಪ್ಯತೆಯನ್ನು ನೀವು ಗೌರವಿಸಬೇಕು ಎಂದು ವಿನಂತಿಸುವ ಮೂಲಕ, ಯುವರಾಜ್ ಸಿಂಗ್ ಟ್ವೀಟ್ ಮಾಡಿದ್ದಾರೆ.
2016ರಲ್ಲಿ ನಟಿ ಹೇಜಲ್ ಕೀಚ್ ಮತ್ತು ಕ್ರಿಕೇಟಿಗ ಯುವರಾಜ್ ಸಿಂಗ್ ವಿವಾಹವಾಗಿದ್ದರು. 2007ರಲ್ಲಿ ಟಟಿ20 ವರ್ಲ್ಡ್ ಕಪ್‌ನಲ್ಲಿ ಮತ್ತು 2011ರ ಓಡಿಐ ವರ್ಲ್ಡ್ ಕಪ್‌ನಲ್ಲಿ ಯುವಿ ಭಾಗವಹಿಸಿ, ಗೆದ್ದಿದ್ದರು. 2019ರಲ್ಲಿ ಅಂತಾರಾಷ್ಟ್ರೀಯ ಕ್ರಿಕೇಟ್‌ಗೆ ಯುವಿ ಗುಡ್ ಬೈ ಹೇಳಿದ್ದಾರೆ. ಮತ್ತು ಹೇಜಲ್ ಕೀಚ್ ಹಿಂದಿಯ ಬಾಡಿಗಾರ್ಡ್ ಸಿನಿಮಾದಲ್ಲಿ ಸಲ್ಮಾನ್ ಖಾನ್ ಮಮತ್ತು ಕರೀನಾ ಕಪೂರ್ ಜೊತೆ ನಟಿಸಿದ್ದರು. 2013ರ ಹಿಂದಿ ಬಿಗ್‌ಬಾಸ್ ಶೋನಲ್ಲಿ ಕೂಡ ಕಾಣಿಸಿಕೊಂಡಿದ್ದರು.