- Advertisement -
ಕರ್ನಾಟಕ ಟಿವಿ : ಕಲರ್ಸ್ ಕನ್ನಡ ಒಂದೆರಡು ವರ್ಷಗಳ ಕಾಲ ಕನ್ನಡ ಟಿವಿ ಇಂಡಸ್ಟ್ರಿಯಲ್ಲಿ ನಂ1 ಸ್ಥಾನದಲ್ಲಿದ್ದು ಮಹಾರಾಜನಂತೆ ಇತ್ತು.. ನಾಲ್ಕೈದು ತಿಂಗಳ ಹಿಂದೆ ಜೀ ಕನ್ನಡ ಭಾರಿ ಮುನ್ನಡೆ ಸಾಧಿಸಿ ಕಲರ್ಸ್ ಕನ್ನಡವನ್ನ 2ನೇ ಸ್ಥಾನಕ್ಕೆ ತಳ್ಳಿ ತಾನು ಮೊದಲ ಸ್ಥಾನಕ್ಕೆ ಏರಿತು.. ಇದೀಗ ಎರಡು ಮತ್ತು ಮೂರನೇ ಸ್ಥಾನ ಉದಯ ಟಿವಿ ಹಾಗೂ ಉದಯ ಮೂವೀಸ್ ಆಕ್ರಮಿಸಿಕೊಂಡಿದ್ದು ಕಲರ್ಸ್ ಕನ್ನಡ 4ನೇ ಸ್ಥಾನಕ್ಕೆ ಕುಸಿತ ಕಂಡಿದೆ.. ಈಟಿವಿಯಿಂದ ಕಲರ್ಸ್ ಕನ್ನಡವಾಗಿ ಬದಲಾದ ಚಾನಲ್ ನಂತರ ದೀರ್ಘ ಕಾಲ ನಂ 1 ಸ್ಥಾನ ಕಾಯ್ದುಕೊಂಡಿತ್ತು. ಇದೀಗ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.
ನ್ಯೂಸ್ ಡೆಸ್ಕ್, ಕರ್ನಾಟಕ ಟಿವಿ
- Advertisement -