ಸಮುದ್ರದಲ್ಲಿನ ವೇದಿಕೆ ಮೂಲಕ 9 ಉಪಗ್ರಹಗಳನ್ನ ನಿಗದಿತ ಕಕ್ಷೆಗೆ ಉಡಾವಣೆ ಮಾಡುವಲ್ಲಿ ಚೀನಾ ರಾಷ್ಟ್ರ ಯಶಸ್ವಿಯಾಗಿದೆ.

ವಿಡಿಯೋ ಹಂಚಿಕೆ ಫ್ಲಾಟ್ಫಾರ್ಮ್ ಬಿಲಿಬಿಲಿಗೆ ಸೇರಿದ ಈ ಉಪಗ್ರಹಗಳನ್ನ ಲಾಂಗ್ ಮಾರ್ಚ್ 11 ಹೆಸರಿನ ರಾಕೆಟ್ ಸಹಾಯದಿಂದ ಹಳದಿ ಸಮುದ್ರದಲ್ಲಿ ಉಡಾವಣೆ ಮಾಡಲಾಗಿತ್ತು.
ಲಾಂಗ್ ಮಾರ್ಚ್ 11 ರಾಕೆಟ್ಗಳನ್ನ ಹಡಗಿನಂತಹ ಉಡಾವಣಾ ತಾಣಗಳಲ್ಲಿ ಉಪಗ್ರಹ ಉಡಾವಣೆ ಮಾಡಲೆಂದೇ ವಿನ್ಯಾಸಗೊಳಿಸಲಾಗಿದೆ. ಅಲ್ಲದೇ ಇದು ಮುಖ್ಯವಾಗಿ ಸಣ್ಣ ಉಪಗ್ರಹಗಳನ್ನ ಸಾಗಿಸಲು ಬಳಕೆಯಾಗಲ್ಪಡುತ್ತೆ. ಕಳೆದ ವರ್ಷ ಜೂನ್ನಲ್ಲಿ ಲಾಂಗ್ ಮಾರ್ಚ್ 11 ಸಹಾಯದಿಂದ ಚೀನಾದಲ್ಲಿ ಮೊದಲ ಬಾರಿಗೆ ಸಮುದ್ರ ವೇದಿಕೆ ಮೂಲಕ ಉಪಗ್ರಹ ಉಡಾವಣೆ ಮಾಡಲಾಗಿತ್ತು.
ಇನ್ನು ಈ ವಿಚಾರವಾಗಿ ಮಾತನಾಡಿದ ಪೀಪಲ್ಸ್ ಡೇಲಿ ಥೈವಾನ್ ಉಪಗ್ರಹ ಉಡಾವಣಾ ಕೇಂದ್ರದ ನಿರ್ದೇಶಕ ಲೀ ಝೋಂಗ್ಲೀ ಉಪಗ್ರಹಗಳ ಸುರಕ್ಷಿತ ಹಾಗೂ ಸುಲಭ ಉಡಾವಣೆಗೆ ಸಮುದ್ರ ಉಡಾವಣಾ ವೇದಿಕೆಯೇ ಹೆಚ್ಚು ಸೂಕ್ತ ಅಂತಾ ಹೇಳಿದ್ದಾರೆ.

ಫೋನಿನ ಮೂಲಕವೇ ನಿಮ್ಮ ಸಮಸ್ಯೆಗೆ ಪರಿಹಾರ
7483025648