sprts news
ಇದೇ ಮೊದಲ ಬಾರಿ ಮಹಿಳಾ ಐಪಿಎಲ್ ಮೊದಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಇನ್ನಷ್ಟೇ ಗೆಲುವಿನ ಖಾತೆ ತೆರೆಯಬೇಕಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಅರ್ಸಿಬಿ) ಮೊದಲ ಪಂದ್ಯದಿಂದ ಇಲ್ಲಿಯವರೆಗೂ ಒಂದು ಪಂದ್ಯವನ್ನು ಗೆಲ್ಲದ ಆರ್ಸಿಬಿ ಬುಧವಾರ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ ಸೆಣಸಾಡಲಿದೆ. ಈಗಾಗಲೇ ಆಡಿರುವ 5 ಪಂದ್ಯಗಳಲ್ಲೂ ಸೋತಿರುವ ಸ್ಮೃತಿ ಮಂಧನಾ ಪಡೆ ಈ ಪಂದ್ಯದಲ್ಲಿ ಗೆಲ್ಲದಿದ್ದರೆ ತಂಡದ ಪ್ಲೇ-ಆಫ್ ಹಾದಿ ಸಂಪೂರ್ಣವಾಗಿ ಮುಚ್ಚಲಿದೆ.
ಆರ್ಸಿಬಿ ಸದ್ಯ ಕೊನೆ ಸ್ಥಾನದಲ್ಲೇ ಬಾಕಿಯಾಗಿದ್ದು, ಇನ್ನು ಉಳಿದಿರುವುದು ಕೇವಲ ಮೂರು ಪಂದ್ಯ ಮಾತ್ರ ಇನ್ನುಳಿದ 3 ಪಂದ್ಯಗಳಲ್ಲಿ ಗೆದ್ದರೂ ಕಳಪೆ ನೆಟ್ ರನ್ರೇಟ್ ಹೊಂದಿರುವ ಕಾರಣ ಪ್ಲೇ-ಆಫ್ಗೇರುವುದು ಅನುಮಾನ ಎಂದಿದ್ದಾರೆ. ಹಾಗಾಗಿ ಇಂದು ನಡೆಯುವ ಆರ್ಸಿಬಿ ವಿರುದ್ದ ಯುಪಿ ವಾರಿಯರ್ಸ ನಡುವೆ ಪಂದ್ಯ ನಡೆಯಲಿದ್ದು ಈ ಪಂದ್ಯ ಬೆಂಗಳೂರು ತಂಡದ ಪಾಲಿಗೆ ಮಾಡು ಇಲ್ಲವೆ ಮಡಿ ಎನ್ನುವಂತಾಗಿದೆ. ಹೀಗಿದ್ದರೂ ಇನ್ನುಳಿದ ಎಲ್ಲಾ ಪಂದ್ಯಗಳಲ್ಲಿ ಬೃಹತ್ ಗೆಲುವು ಸಾಧಿಸಿ, ಇತರೆ ತಂಡಗಳ ಫಲಿತಾಂಶ ಆರ್ಸಿಬಿ ಪರವಾಗಿ ಬಂದರೆ ತಂಡಕ್ಕೆ ಪ್ಲೇ-ಆಫ್ಗೇರಲು ಸಾಧ್ಯವಿದೆ. ತಂಡ ಈಗಾಗಲೇ ಯುಪಿ ವಿರುದ್ಧ ಒಂದು ಪಂದ್ಯವನ್ನಾಡಿದ್ದು, 10 ವಿಕೆಟ್ಗಳಿಂದ ಹೀನಾಯವಾಗಿ ಸೋಲನುಭವಿಸಿತ್ತು. ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡುತ್ತಿರುವ ಆರ್ಸಿಬಿ ಅಸಾಧಾರಣ ಪ್ರದರ್ಶನ ನೀಡಿದರಷ್ಟೇ ಗೆಲುವು ನಗೆ ಬೀರಲಿದೆ ಅತ್ತ ಯುಪಿ ವಾರಿಯರ್ಸ್ 5 ಪಂದ್ಯಗಳಲ್ಲಿ 2ರಲ್ಲಿ ಗೆದ್ದಿದ್ದು, ಮತ್ತೊಂದು ಗೆಲುವಿನ ಮೂಲಕ ಪ್ಲೇ-ಆಫ್‌ಗೆ ಮತ್ತಷ್ಟು ಹತ್ತಿರವಾಗುವ ನಿರೀಕ್ಷೆಯಲ್ಲಿದೆ.