ಬೆಂಗಳೂರು : ಸಂಪುಟ ವಿಸ್ತರಣೆ ಮಾಡಿ ಕೇವಲ ಪಕ್ಷೇತರರಿಬ್ಬರನ್ನ ಸಚಿವರನ್ನಾಗಿ ಮಾಡಿ ಸರ್ಕಾರಕ್ಕೆ ಕುಮಾರಸ್ವಾಮಿ ಸಂಚಕಾರ ತಂದುಕೊಂಡ್ರಾ ಅನ್ನೊ ಮಾತು ಕೇಳಿಬಂದಿತ್ತು. ಯಾಕೆಂದರೆ ಕಾಂಗ್ರೆಸ್ ನ ಹಿರಿಯ ಸಚಿವರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ರು.. ಆದ್ರೆ ಮಾಜಿ ಪ್ರಧಾನಿ ಇಂದು ದೋಸ್ತಿ ಸರ್ಕಾರದ ರಹಸ್ಯ ಕಾರ್ಯಾಚರಣೆಯನ್ನು ಬಾಯ್ತಪ್ಪಿ ಬಹಿರಂಗ ಮಾಡಿದ್ದಾರೆ..
ಮೂವರು ಸಚಿವರು ರಾಜೀನಾಮೆ ಕೊಡಲು ಒಪ್ಪಿದ್ದಾರೆ
ರಾಜ್ಯರಾಜಕಾರಣದಲ್ಲಿ ಮತ್ತೊಂದು ಸುತ್ತಿನ ಪೊಲಿಟಿಕಲ್ ಡ್ರಾಮಾ ಶುರುವಾಗಲಿದೆ. ಹೆಚ್. ವಿಶ್ವನಾಥ್ ಜೆಡಿಎಸ್ ಶಾಸಕರ ಸಭೆಯಲ್ಲಿ ಹೆಚ್ಡಿ ರೇವಣ್ಣ ಸೇರಿದಂತೆ ಹಲವು ಸಚಿವರ ರಾಜೀನಾಮೆ ಕೊಡಿ ಈ ಮೂಲಕ ಸರ್ಕಾರ ಉಳಿಯಲು ನೆರವಾಗಿ ಅಂತ ಚಾಟಿ ಬೀಸಿದ್ರು.. ಅಂತಿಮವಾಗಿ ಜೆಡಿಎಸ್ ನಿಂದ ಮನಗುಳಿ ರಾಜೀನಾಮೆ ಕೊಡಲು ಒಪ್ಪಿದ್ದಾರಂತೆ. ಹೀಗಂತ ಸ್ವತಃ ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ. ಇದಿಷ್ಟೆ ಅಲ್ಲ ಕಾಂಗ್ರೆಸ್ ಸಚಿವರಾದ ಕೃಷ್ಣ ಭೈರೇಗೌಡ, ಶಿವಶಂಕರ್ ರೆಡ್ಡಿ ಕೂಡ ರಾಜೀನಾಮೆ ಕೊಡ್ತಾರೆ ಅನ್ನೋ ಮೂಲಕ ಕಾಂಗ್ರೆಸ್ ನಲ್ಲೂ ಮಹತ್ವದ ರಾಜಕೀಯ ಬೆಳವಣಿಗೆ ನಡೆಯಲಿದೆ ಅನ್ನೋದನ್ನ ಮಾಜಿ ಪ್ರಧಾನಿ ಗುಟ್ಟು ಬಿಟ್ಟುಕೊಟ್ಟಿದ್ದಾರೆ.
ಏನೇ ಆಗಲಿ ಕೇಂದ್ರ ಬಜೆಟ್ ಮಂಡನೆ ನಂತರ ಸರ್ಕಾರ ರಚನೆ ಮಾಡಲೇ ಅಂತ ಯಡಿಯೂರಪ್ಪ ಟೀಂ ಪ್ರಯತ್ನ ಪಡ್ತಿರುವ ಬೆನ್ನಲ್ಲೇ ದೇವೇಗೌಡರ ತಂತ್ರ ಫಲಿಸಿದ್ರೆ ಸರ್ಕಾರ ಸದ್ಯಕ್ಕೆ ಸೇಫ್ ಆಗಲಿದೆ
ಕಾಂಗ್ರೆಸ್ ಪಕ್ಷಕ್ಕೆ ಇಂಥಹ ಸ್ಥಿತಿ ಬರಬಾರದಿತ್ತು