ಕಳೆದ ಎರಡು ವರ್ಷದಿಂದ ಸಂಕಷ್ಟಕ್ಕೆ ಸಿಲುಕಿರೋ ಜನರಿಗೆ ಕಂದಾಯ ಇಲಾಖೆಯಿಂದ ಹೊಸವರ್ಷಕ್ಕೆ ಬಂಪರ್ ಗಿಫ್ಟ್ ನೀಡಲು ನಿರ್ಧಾರಿಸಲಾಗಿದ್ದು, ಆಸ್ತಿ ವಹಿವಾಟು ಸಂಬಂಧಿಸಿದಂತೆ, ಯಾರು ಖರೀದಿ ಮಾಡುತ್ತಾರೆ, ಅಂತಹವರಿಗೆ ರೆವಿನ್ಯೂ, ಸೈಟ್, ಫ್ಲಾಟ್ ಗೈಡೆನ್ಸ್ ವ್ಯಾಲ್ಯು 10% ಕಡಿಮೆ ಮಾಡಿ ಆದೇಶ ಹೊರಡಿಸಲಾಗಿದೆ. ಅಗ್ರಿಮೆಂಟ್ ಮಾಡಿರೋ, ರಿಜಿಸ್ಟ್ರೇಷನ್ ಮಾಡಿಸಲು ತಯಾರಾಗಿರೋರಿಗೆ ಕಂದಾಯ ಇಲಾಖೆಯಿಂದ ಈ ಗಿಫ್ಟ್ ನೀಡಲಾಗಿದ್ದು, ಮೂರು ತಿಂಗಳವರೆಗೆ ಈ ಆಫರ್ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿಕೆ ನೀಡಿದ್ದಾರೆ.
ರಾಜ್ಯದ ಲಕ್ಷಾಂತರ ಜನರಿಗೆ ಇದು ಅನ್ವಯವಾಗಲಿದ್ದು, 1-1-2022 ರಿಂದ 31-3-2022ರ ವರೆಗೂ ರಿಯಾಯಿತಿ ನೀಡಲು ನಿರ್ಧರಿಸಲಾಗಿದ್ದು, ರಾಜ್ಯದ ಸಚಿವರ ಜೊತೆ ಚರ್ಚೆ ಮಾಡಿ ಈ ನಿರ್ಧಾರ ಮಾಡಲಾಗಿದೆ ಎಂದಿದ್ದಾರೆ. ಆಯಾ ಪ್ರದೇಶದ ಗೈಡ್ಲೈನ್ಸ್ ವ್ಯಾಲ್ಯೂ ಪ್ರಕಾರ ಇದು ಅನ್ವಯ ಆಗಲಿದ್ದು, ಎಲ್ಲಾ ರೀತಿಯ ರಿಜಿಸ್ಟ್ರೇಷನ್ಗೆ ಇದು ಅನ್ವಯವಾಗಲಿದೆ ಎಂದು ಆದೇಶ ನೀಡಲಾಗಿದೆ.




