Tuesday, July 16, 2024

Latest Posts

ಶ್ರೀಲಂಕಾ ಉಗ್ರರ ದಾಳಿ ಎಫೆಕ್ಟ್; 600 ಹೆಚ್ಚು ವಿದೇಶಿಗರು, 200ಕ್ಕೂ ಹೆಚ್ಚು ಇಸ್ಲಾಮಿಕ್ ಪಾದ್ರಿಗಳ ಗಡಿಪಾರು

- Advertisement -

ಕೊಲಂಬೊ: ಭೀಕರ ಉಗ್ರ ದಾಳಿ ಬಳಿಕ ಎಚ್ಚೆತ್ತುಕೊಂಡಿರುವ ಶ್ರೀಲಂಕಾ ಸರ್ಕಾರ 200 ಇಸ್ಲಾಮಿಕ್ ಪಾದ್ರಿಗಳೂ ಸೇರಿದಂತೆ ಅಲ್ಲಿ ನೆಲೆಸಿದ್ದ 600ಕ್ಕೂ ಹೆಚ್ಚು ವಿದೇಶಿಗರನ್ನು ಗಡಿಪಾರು ಮಾಡಿದೆ. ಈ ಬಗ್ಗೆ ಶ್ರೀಲಂಕಾದ ಗೃಹ ಸಚಿವ ವಜಿರಾ ಅಬೇಯವರ್ದೆನಾ  ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, 200 ಇಸ್ಲಾಮಿಕ್ ಪಾದ್ರಿಗಳೂ ಸೇರಿದಂತೆ ಶ್ರೀಲಂಕಾದಲ್ಲಿ ನೆಲೆಯೂರಿದ್ದ 600ಕ್ಕೂ ಹೆಚ್ಚು ವಿದೇಶಿಗರನ್ನು ಗಡಿಪಾರು ಮಾಡಲಾಗಿದೆ. ದೇಶದಲ್ಲಿನ ಪ್ರಸ್ತುತ ಪರಿಸ್ಥಿತಿಗಳನ್ನು ಅವಲೋಕಿಸಿ ಶ್ರೀಲಂಕಾ ಸರ್ಕಾರ ಮಹತ್ವ ನಿರ್ಣಯಕ್ಕೆ ಬಂದಿದ್ದು, ಅದರಂತೆ ವೀಸಾ ನಿಯಮಾವಳಿಗಳನ್ನು ಪುನರ್ ಪರಿಶೀಲನೆ ಮಾಡುತ್ತಿದ್ದೇವೆ. ಇದರಲ್ಲಿ 200ಕ್ಕೂ ಹೆಚ್ಚು ಇಸ್ಲಾಮಿಕ್ ಪಾದ್ರಿಗಳೂ ಸೇರಿದ್ದಾರೆ . ಈ ಬಗ್ಗೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಿದ್ದಾರೆ ಅಂತ ಹೇಳಿದ್ದಾರೆ. ಲಂಕಾದಲ್ಲಿ ನೂರಾರು ಧಾರ್ಮಿಕ ಸಂಸ್ಥೆಗಳಿವೆ ಹೀಗಾಗಿ ದಶಕಗಳಿಂದಲೂ ನೂರಾರು ವಿದೇಶಿ ಪಾದ್ರಿಗಳು ಬಂದು ಮಕ್ಕಳಿಗೆ ಧಾರ್ಮಿಕ ಬೋಧನೆ ಮಾಡುತ್ತಾರೆ.  ಈ ಪೈಕಿ ಕೆಲವರು ದೇಶದ್ರೋಹ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದೇ ಇತ್ತೀಚೆಗೆ ನಡೆದ ಉಗ್ರರ ದಾಳಿಗೆ ಕಾರಣ ಅಂತ ಮಾಹಿತಿ ನೀಡಿದ್ದಾರೆ. ಅಂತ ಮಾಹಿತಿ ನೀಡಿದ್ದಾರೆ. ಈ ಕುರಿತು ಸರ್ಕಾರ ಗಂಭೀರವಾಗಿ ಚಿಂತನೆಯಲ್ಲಿ ತೊಡಗಿದೆ ಅಂತ ಹೇಳಿದ್ದಾರೆ.

- Advertisement -

Latest Posts

Don't Miss