Nepal News: ಭಾರತದಲ್ಲಿ ನೋಟ್ ಬ್ಯಾನ್ ಆದ ಸಮಯದಲ್ಲಿ ನೇಪಾಳದಲ್ಲಿ 100ರ ನೋಟ್ ಬಿಟ್ಟು ಬೇರೆ ನೋಟ್ ಬಳಸಲು ಅನುಮತಿ ಇರಲಿಲ್ಲ. ಆದರೆ ಈಗ ಭಾರತದ 200 ಮತ್ತು 500 ರೂಪಾಾಯಿ ನೋಟ್ ಬಳಸಲು ನೇಪಾಳದಲ್ಲಿ ಅನುಮತಿ ನೀಡಲಾಗಿದೆ.
ನೇಪಾಳದ ರಾಷ್ಟ್ರಬ್ಯಾಂಕ್ ನೋಟೀಸ್‌ನಲ್ಲಿ ಭಾರತೀಯ 200 ಮತ್ತು 500 ರೂಪಾಯಿ ಕರೆನ್ಸಿಯನ್ನು ಪ್ರತೀ ವ್ಯಕ್ತಿ 25 ಸಾವಿರದವರೆಗೆ ಹೊಂದಬಹುದು ಎಂದು ಹೇಳಿದೆ. ಆದರೆ ನೇಪಾಳ ಭಾರತದಿಂದ ಮಾತ್ರ ಭಾರತದ ಕರೆನ್ಸಿ ತರಬಹುದು. ಆದರೆ ಬೇರೆ ಯಾವುದೇ ದೇಶದಿಂದ ಭಾರತೀಯ ಕರೆನ್ಸಿ ತರಲು ಅನುಮತಿ ಇಲ್ಲ. ಅದೇ ರಿತೀ ಭಾರತೀಯ ಕರೆನ್ಸಿಯನ್ನು ನೇಪಾಳದಿಂದ ಮಾತ್ರ ಭಾರತದ ಕರೆನ್ಸಿಯಲ್ಲಿ ಭಾರತಕ್ಕೆ ಕಳುಹಿಸಬಹುದು. ಆದರೆ ಬೇರೆ ದೇಶಕ್ಕೆ ನೇಪಾಳದ ಮೂಲಕ ಭಾರತೀಯ ಕರೆನ್ಸಿ ಸಾಗಿಸುವಂತಿಲ್ಲ.
ನೇಪಾಳದ ಈ ನಿರ್ಧಾರದಿಂದ ನೇಪಾಳ ಮತ್ತು ಭಾರತದ ನಡುವೆ ನಡೆಯುವ ವ್ಯಾಪಾರ ವ್ಯವಹಾರಗಳಿಗೆ ಅನುಕೂಲವಾಗಲಿದೆ.




