- Advertisement -
28 ವರ್ಷಗಳ ಹಿಂದಿನ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪನ್ನ ಸಿಬಿಐ ವಿಶೇಷ ನ್ಯಾಯಾಲಯ ಸೆ.30ಕ್ಕೆ ಕಾಯ್ದಿರಿಸಿದೆ. ಹಾಗೂ ಪ್ರಕರಣದ ಆರೋಪಿಗಳಾದ ಎಲ್.ಕೆ ಅಡ್ವಾಣಿ, ಮುರುಳಿ ಮನೋಹರ ಜೋಶಿ,ಕಲ್ಯಾಣ್ ಸಿಂಗ್ , ಉಮಾ ಭಾರತಿ ಸೇರಿದಂತೆ ಒಟ್ಟು 32 ಮಂದಿಗೆ ತೀರ್ಪಿನ ದಿನ ಕೋರ್ಟ್ಗೆ ಹಾಜರಾಗುವಂತೆ ಸೂಚಿಸಿದೆ.
ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸುರೇಂದ್ರ ಕುಮಾರ್ ಯಾದವ್ ಮಹತ್ವದ ತೀರ್ಪನ್ನ ಪ್ರಕಟಿಸಲಿದ್ದಾರೆ. ಇದೇ ತಿಂಗಳ ಆರಂಭದಲ್ಲಿ 32 ಮಂದಿ ಆರೋಪಿಗಳನ್ನ ಕೋರ್ಟ್ಗೆ ಕರೆಸಿದ್ದ ನ್ಯಾಯಾಧೀಶರು ಎಲ್ಲರ ಹೇಳಿಕೆ ದಾಖಲಿಸಿಕೊಂಡು ವಿಚಾರಣೆಯನ್ನ ಮುಕ್ತಾಯಗೊಳಿಸಿದ್ದರು.
- Advertisement -