Wednesday, December 3, 2025

Latest Posts

ಅಪ್ಪು ಹಾದಿಯಲ್ಲೇ ಯುವರಾಜ್‌ಕುಮಾರ್..! ಚಿಕ್ಕಪ್ಪನಿಲ್ಲದೇ ಇಲ್ಲದೇ ಹುಟ್ಟುಹಬ್ಬ ಆಚರಿಸಿಕೊಳ್ಳದ ಯುವ..!

- Advertisement -

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಮ್ಮನ್ನೆಲ್ಲಾ ಅಗಲಿ ೬ ತಿಂಗಳುಗಳೇ ಕಳೆದೋಗಿದೆ. ಆದರೂ ಅಪ್ಪು ತಮ್ಮ ಮುಂದಿನ ಸಿನಿಮಾ ಅಪ್ಡೇಟ್ ಕೊಡ್ತಾರೆ, ಶೂಟಿಂಗ್ ಟೈಮ್‌ನಲ್ಲಿ ಅವರನ್ನ ಮುಂದಿನ ದಿನಗಳಲ್ಲಿ ಕಣ್ತುಂಬಿಕೊಳ್ಬೋದು ಅನ್ನೋ ಅಪರಿಮಿತ ಆಸೆಯನ್ನ ಇಟ್ಕೊಂಡಿದ್ದಾರೆ ಪವರ್ ಸ್ಟಾರ್ ಫ್ಯಾನ್ಸ್. ಜೇಮ್ಸ್ ಸಿನಿಮಾ ಬಳಿಕ ಅಪ್ಪು ಹಲವು ಸಿನಿಮಾಗಳನ್ನ ಒಪ್ಕೊಂಡಿದ್ರು.

ಇದರ ಜೊತೆಯಲ್ಲಿ ಸಂತೋಷ್ ಆನಂದ್‌ರಾಮ್ ನಿರ್ದೇಶನ ಮಾಡಬೇಕಿದ್ದ ಕಥೆಯನ್ನೂ ಸಹ ಅಪ್ಪು ಕೇಳಿ ಫಿದಾ ಆಗಿದ್ರು. ಆದರೆ ಆ ಸಿನಿಮಾ ಮಾಡೋಕೂ ಮೊದಲೇ ಪುನೀತ್ ರಾಜ್‌ಕುಮಾರ್ ನಮ್ಮನ್ನೆಲ್ಲ ಅಗಲಿದರು. ಹೀಗಾಗಿ ಅಪ್ಪು ಕಥೆ ಕೇಳಿ ಮೆಚ್ಚಿಕೊಂಡಿದ್ದ ಆ ಸಿನಿಮಾವನ್ನೇ ಈಗ ರಾಘಣ್ಣನ ಮಗ ಯುವರಾಜ್‌ಕುಮಾರ್ ಮಾಡಲು ಮುಂದಾಗಿದ್ದಾರೆ. ದೊಡ್ಮನೆ ಮತ್ತೊಂದು ಕುಡಿಗೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ.

ಈಗಾಗಲೇ “ಯುವ ರಣಧೀರ ಕಂಠೀರವ” ಸಿನಿಮಾದಲ್ಲಿ ನಟಿಸಿರೋ ಯುವರಾಜ್‌ಕುಮಾರ್ ಈ ಸಿನಿಮಾ ಮೂಲಕವೇ ಸ್ಯಾಂಡಲ್‌ವುಡ್‌ಗೆ ಲಾಂಚ್ ಆಗಬೇಕಿತ್ತು. ಆದರೀಗ ಅಪ್ಪು ಚಿಕ್ಕಪ್ಪನಿಗಾಗಿ ರೆಡಿಯಾಗಿರೋ ಈ ಕಥೆ ಮೂಲಕವೇ ನಾಯಕನಾಗಿ ಎಂಟ್ರಿ ಕೊಡಬೇಕೆಂದು ಯುವ ಸಜ್ಜಾಗಿದ್ದಾರೆ. ಮತ್ತೊಂದೆಡೆ ಪ್ರೀತಿಯ ಚಿಕ್ಕಪ್ಪನಿಲ್ಲದೇ ನಟ ಯುವರಾಜ್‌ಕುಮಾರ್ ಈ ಬಾರಿ ತಮ್ಮ ಹುಟ್ಟುಹಬ್ಬವನ್ನ ಆಚರಿಸಿಕೊಂಡಿಲ್ಲ. ಬದಲಿಗೆ ಅಪ್ಪು ಮಾಮನ ಹಾದಿಯಲ್ಲೇ ಯುವ ಸಾಗಿದ್ದಾರೆ.

ಬೆಂಗಳೂರಿನಲ್ಲಿರೋ ನಿರಾಶ್ರಿತರ ಆಶ್ರಮಕ್ಕೆ ಇಡೀ ದಿನ ಅನ್ನದಾಸೋಹ ಮಾಡಿದ್ದಾರೆ ಯುವರಾಜ್‌ಕುಮಾರ್ ಅಭಿಮಾನಿಗಳು. ಈಗಾಗಲೇ ಅದೆಷ್ಟೋ ಅಭಿಮಾನಿಗಳು ತನ್ನ ನೆಚ್ಚಿನ ನಟನಿಲ್ಲದೇ ತಮ್ಮ ಬರ್ತಡೆಯನ್ನ ಆಚರಿಸಿಕೊಳ್ಳೋದನ್ನೇ ನಿಲ್ಲಿಸಿದ್ದಾರೆ. ಅದರಂತೆಯೇ ಈಗ ನಟ ಯುವರಾಜ್‌ಕುಮಾರ್ ಸಹ ಈ ಬಾರಿ ಬರ್ತಡೇಗೆ ಬ್ರೇಕ್ ಹಾಕಿದ್ದಾರೆ.

ಕರ್ನಾಟಕ ಟಿವಿ, ನಳಿನಾಕ್ಷಿ

- Advertisement -

Latest Posts

Don't Miss