- Advertisement -
:ಲಂಡನ್‌ನಲ್ಲಿ ಕೋವಿಡ್ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಮದ್ಯದ ಪಾರ್ಟಿ ಮಾಡಿರುವ ವಿವಾದದಲ್ಲಿ ಪ್ರಧಾನಿ ಬೋರಿಸ್ ಜಾನ್ಸನ್‌ಗೆ ಸ್ವಪಕ್ಷದಲ್ಲೇ ರಾಜಿನಾಮೆ ನೀಡುವಂತೆ ಒತ್ತಡ ನಿರ್ಮಾಣವಾಗಿದೆ.
ಈಗಿರುವಾಗ ಬೋರಿಸ್ ಜಾನ್ಸನ್ ಪ್ರಧಾನಿ ಪಟ್ಟದಿಂದ ಕೆಳಗಿಳಿಯುವ ಸಾಧ್ಯತೆಗಳಿವೆಯಂತೆ. ಬೋರಿಸ್ ಒಂದು ವೇಳೆ ಕೆಳಗಿಳಿದರೆ ಮುಂದಿನ ಬ್ರಿಟನ್ ಪ್ರಧಾನಿಯಾಗಿ ಭಾರತೀಯ ಮೂಲದ ರಿಷಿ ಸುನಾಕ್ ಪಟ್ಟವನ್ನು ಅಲಂಕರಿಸುವ ಸಾಧ್ಯತೆಯಿದೆ.
ಬೋರಿಸ್‌ಗೆ ಹಲವು ಕಡೆಗಳಿಂದ ಸದ್ಯ ಒತ್ತಡ ಇರುವಾಗ ಕೆಳಗಿಳಿಯುವ ಎಲ್ಲಾ ಸಾಧ್ಯತೆಗಳು ಕಂಡು ಬರುತ್ತಿವೆ. ಈಗಾಗಿ ಭಾರತೀಯ ಮೂಲದ, ಹಾಗು ಇನ್ಪೋಸಿಸ್ ನಾರಾಯಣ ಮೂರ್ತಿ ಅಳಿಯ ರಿಷಿ ಸುನಾಕ್ ಮುಂದಿನ ಪ್ರಧಾನಿಯಾಗುವ ಎಲ್ಲಾ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ, ಬ್ರಿಟನ್‌ನಲ್ಲಿ ಮುಂದಿನ ಪ್ರಧಾನಿಯಾಗುವವರ ಪಟ್ಟಿಯಲ್ಲಿ ನಂಬರ್1 ಸ್ಥಾನದಲ್ಲಿ ರಿಷಿಯವರ ಹೆಸರಿದೆ ಎಂದು ವರದಿಯಾಗಿದೆ.
- Advertisement -