ಶಾಂತಿದೇವಿ ಖ್ಯಾತ ಸಾಮಾಜಿಕ ಕಾರ್ಯಕರ್ತೆಯಾಗಿದ್ದರು.ಜೊತೆಗೆ ಬುಡಕಟ್ಟು ಜನಾಂಗದ ಹುಡುಗಿಯರು, ಮಹಿಳೆಯರ ಅಭಿವೃದ್ಧಿ, ಸುಸ್ಥಿರ ಜೀವನಕ್ಕಾಗಿ ಶ್ರಮಿಸಿದ್ದು ರಾಯಗಡಾ ಜಿಲ್ಲೆಯ ಗುನುಪುರದಲ್ಲಿರುವ ಅವರ ನಿವಾಸದಲ್ಲಿ ನಿಧನರಾಗಿದ್ದಾರೆ. ಈ ಬಗ್ಗೆ ಪ್ರಧಾನಿ ನರೆಂದ್ರ ಮೋದಿಯವರು ಸಂತಾಪವನ್ನು ಸೂಚಿಸಿದ್ದಾರೆ.
88 ವರ್ಷ ವಯಸ್ಸಾಗಿದ್ದ ಶಾಂತಿದೇವಿಗೆ ಏಕಾಏಕಿ ಎದೆ ನೋವು ಕಾಣಿಸಿಕೊಂಡಿತ್ತು, ಈಗಾಗಿ ಎಚ್ಚರ ತಪ್ಪಿದ್ದಾರೆ. ಕೂಡಲೇ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಅಷ್ಟರಲ್ಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಶಾಂತಿ ದೇವಿ ಬದುಕಿರುವಾಗ ಸುಸ್ಥಿರ ಜೀವನಕ್ಕಾಗಿ ಶ್ರಮಿಸಿದ್ದ ಶಾಂತಿ ದೇವಿ, 2021 ರ ನವೆಂಬರ್ 9 ರಂದು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು. ಈ ಕುರಿತು ಶಾಂತಿದೇವಿ ನಿಧನದಿಂದ ನೋವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ಉಪರಾಷ್ಟçಪತಿ ವೆಂಕಯ್ಯನಾಯ್ಡು, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಇತತರೂ ಕೂಡ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.




