ರಾಜ್ಯದಲ್ಲಿ ಒಂದು ಕಡೆ ಬಿಜೆಪಿ ಸರ್ಕಾರ ಕೋವಿಡ್-19 ನಿಯಂತ್ರಣಕ್ಕೆ ಜನರ ವಿರೋಧದ ನಡುವೆ ವೀಕೆಂಡ್ ಕರ್ಫ್ಯೂವನ್ನು ಜಾರಿಗೆ ತಂದಿದೆ.
ಅತ್ತ ಕಾಂಗ್ರೆಸ್ ಕೊರೊನಾಕ್ಕೆ ವಿರುದ್ಧವಾಗಿ ನಾವು ಮೇಕೆದಾಟು ಪಾದಯಾತ್ರೆಯನ್ನು ಮಾಡೇ ಮಾಡುತ್ತೇವೆ ಎಂದು ಪಟ್ಟುಬಿದ್ದಿದೆ.
ಈಗ ಕೊರೊನಾ ನಡುವೆ ರಾಜಕೀಯ ಹಗ್ಗಜಗ್ಗಾಟ ಶುರುವಾಗಿದೆ.
ಈಗಾಗಿ ಕೆಲಹೊತ್ತಿನಲ್ಲೇ ಕೊರೊನ ನಿಯಮದ ಬೆನ್ನಲ್ಲೆ ಕಾಂಗ್ರೆಸ್ ಕೈನಾಯಕರು ಪಾದಯಾತ್ರೆಯನ್ನು ಮಾಡಲು ಸಿದ್ದರಾಗಿದ್ದಾರೆ. ಇತ್ತ ರಾಮನಗರದ ಡಿಸಿಯಿಂದ ಡಿಕೆ ಶಿವಕುಮಾರ್ ಗೆ ನೋಟಿಸ್ ಬಂದಿದೆ. ಇನ್ನು ಗೃಹ ಸಚಿವ ಅರಗ ಜ್ಞಾನೇಂದ್ರ ಡಿ ಕೆ ಶಿವಕುಮಾರ್ ಮಧ್ಯೆ ಮಾತಿನ ಚಕಮಕಿ ಬೆಳೆದಿದೆ.
ಕಾನೂನು ಎಲ್ಲರಿಗೂ ಒಂದೇ, ಜೊತೆಗೆ ವೀಕೆಂಡ್ ಕರ್ಫ್ಯೂ ಸಹ ಅದನ್ನು ಎಲ್ಲರೂ ಪಾಲಿಸಲೇಬೇಕು ಪಾಲಿಸದಿದ್ದೆç ಅಂತವರ ವಿರುದ್ದ ಕಟಿಣ ಕ್ರಮವನ್ನು ಕೈಗೊಳ್ಳುತ್ತೇವೆ, ಅದು ಮೇಕೆದಾಟು ರ‍್ಯಾಲಿ ಅಲ್ಲ ಚುನಾವನಾ ರ‍್ಯಾಲಿ ಎಂದು ಅರಗ ಜ್ಞಾನೇಂದ್ರ ಕಿಡಿ ಕಾರಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಡಿಕೆ ಶಿವಕುಮಾರ್ ಗೃಹ ಮಂತ್ರಿಗಳ ಕೈಲಿ ಇಂತಹ ಮಾತುಗಳು ಬರಬಾರದು, ಅವರು ತಮ್ಮ ಪಕ್ಷದವರ ವಿರುದ್ದ ಕೇಸ್‌ಗಳನ್ನು ಹಾಕಲೇ ಇಲ್ಲ ಈಗ ಪಾದಯಾತ್ರೆಗೆ ವಿರೋಧ ಮಾಡುತ್ತಿದ್ದಾರೆ.ನಮ್ಮನ್ನ ಅರೆಸ್ಟ್ ಮಾಡಲಿ ನಾವು ಪಾದಯಾತ್ರೆ ಮಾಡೇ ಮಾಡುತ್ತೇವೆ.
ಕಾಂಗ್ರೆಸ್ ಪಾದಯಾತ್ರೆಗೆ ಪಟ್ಟು ಬಿಜೆಪಿಗೆ ಸಿಟ್ಟು..
- Advertisement -
- Advertisement -