Wednesday, August 20, 2025

Latest Posts

ಪಾಂಡ್ಯ ಕತ್ತಿನಲ್ಲಿ ಕೋಟಿ ಕೋಟಿ ಬೆಲೆಯ ವಜ್ರದ ಬ್ಯಾಟ್ ಮತ್ತು ಬಾಲ್..!

- Advertisement -

ಕ್ರೀಡೆ : ಸಾವಿರಾರು ವರ್ಷಗಳಷ್ಟು ಹಿಂದಿನಿಂದಲೂ ವಜ್ರ ವೈಡೂರ್ಯ ಗಳು ಅಂದ್ರೆ ಭಾರತೀಯರಿಗೆ ಅಚ್ಚುಮೆಚ್ಚು. ಅದರಲ್ಲೂ ಮಹಿಳೆಯರ ಬಗ್ಗೆಯಂತೂ ಹೇಳೊದೇ ಬೇಡ. ಇನ್ನು ಆಭರಣ ವ್ಯಾಮೋಹ ಪುರುಷರನ್ನು ಬಿಟ್ಟಿಲ್ಲ . ಕೆಲ ಪುರುಷರು ಕೂಡ ನಾವೇನು ಕಮ್ಮಿ ಎನ್ನುವಂತೆ ಆಭರಣ ವ್ಯಮೋಹಿಗಳಾಗಿದ್ದಾರೆ. ಈ ವಿಷಯದಲ್ಲಿ ಟೀಮ್ ಇಂಡಿಯಾ ಆಟಗಾರರು ಹಿಂದೆ ಬಿದ್ದಿಲ್ಲ ಹಲವು ಕ್ರಿಕೆಟಿಗರು ತಮ್ಮ ಕೊರಳಿನಲ್ಲಿ ಬಂಗಾರದ ಚೈನ್ ಧರಿಸುವುದನ್ನು ನೋಡಿದ್ದೇವೆ. ಅದ್ರೆ ಟೀಮ್ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಗೆ ವಜ್ರಗಳ ವ್ಯಾಮೋಹ. ಇತ್ತೀಚಿಗಷ್ಟೇ “ಚಹಲ್ ಟಿವಿ” ಗೆ ನೀಡಿದ್ದ ಸಂದರ್ಶನದಲ್ಲಿ ಪಾಂಡ್ಯ, ವಜ್ರದ ಮೇಲಿನ ತನ್ನ ಪ್ರೀತಿಯನ್ನ ಹೊರ ಹಾಕಿದ್ದಾರೆ.

ಚಹಲ್ ಜೊತೆ ಮಾತನಾಡುತ್ತ, ಕತ್ತಿನಲ್ಲಿ ವಿಶೇಷ ಚೈನ್ ಧರಿಸಿರುವ ಗುಟ್ಟು ಬಿಟ್ಟುಕೊಟ್ಟಿದ್ದಾರೆ. ಸಂಪೂರ್ಣ ವಜ್ರದಿಂದಲೇ ತಯಾರಿಸಲಾದ ಈ ಚೈನ್‌ನಲ್ಲಿ ವಜ್ರದ ಬ್ಯಾಟ್ ಮತ್ತು ಬಾಲ್‌ ಇದೆ. ಜೊತೆಗೆ ಪದಕವೂ ಕಂಗೊಳಿಸುತ್ತಿದೆ. ಕೈಯಲ್ಲಿ ಎರಡು ವಜ್ರದ ಉಂಗುರ ಧರಿಸಿರುವ ಹಾರ್ದಿಕ್, ತನಗೆ ವಜ್ರದ ಮೇಲಿರುವ ವಿಶೇಷ ವ್ಯಾಮೋಹವನ್ನು ತೋರಿಸಿದ್ದಾರೆ. ಸದ್ಯ ವಿಶ್ವಕಪ್ ಟೂರ್ನಿಯಲ್ಲಿ ಮಿಂಚುತ್ತಿರುವ ಪಾಂಡ್ಯ, ಇತ್ತೀಚಿಗಷ್ಟೇ ಪಾಕ್ ವಿರುದ್ಧ ನಡೆದ ಪಂದ್ಯದಲ್ಲಿ ಭರ್ಜರಿ ಪರ್ಫಾರ್ಮೆನ್ಸ್ ನೀಡಿದ್ರು. ಪಂದ್ಯದ ನಂತರ ಪ್ರಯಾಣದ ವೇಳೆ ಚಹಲ್ ಟಿವಿ ಜೊತೆ ಮಾತನಾಡುತ್ತ ವಜ್ರದ ಮೇಲಿನ ತಮ್ಮ ಪ್ರೀತಿಯನ್ನ ಹೊರ ಹಾಕಿದ್ದಾರೆ.

ನಂದನ್, ಸ್ಪೋರ್ಟ್ಸ್ ಬ್ಯೂರೋ, ಕರ್ನಾಟಕ ಟಿವಿ

- Advertisement -

Latest Posts

Don't Miss