- Advertisement -
ಬೆಂಗಳೂರು: ಕಾಂಗ್ರೆಸ್ ನಾಯಕರ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗವುಂಟುಮಾಡಿದ್ದ ಮಾಜಿ ಸಚಿವ ರೋಷನ್ ಬೇಗ್ ರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ.
ಕಾಂಗ್ರೆಸ್ ನಾಯಕರು ಅಲ್ಪಸಂಖ್ಯಾತರನ್ನು ಕಡೆಗಣಿಸುತ್ತಿರೋದೇ ಕಾಂಗ್ರೆಸ್ ನ ದುಸ್ಥಿಗೆ ಕಾರಣ ಅಂತ ಹೇಳಿಕೆ ನೀಡಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಿದ್ದರಾಮಯ್ಯ ಮತ್ತು ವೇಣುಗೋಪಾಲ್ ವಿರುದ್ಧ ಬಹಿರಂಗವಾಗಿ ಅವಹೇಳನ ಮಾಡಿದ್ದ ಕಾಂಗ್ರೆಸ್ ಮಾಜಿ ಸಚಿವ ರೋಷನ್ ಬೇಗ್ ರನ್ನು ಅಮಾನತುಗೊಳಿಸಲಾಗಿದೆ. ಬೇಗ್ ರ ಈ ಹೇಳಿಕೆಯಿಂದಾಗಿ ಪಕ್ಷದ ಘನತೆಗೆ ಕುಂದುಂಟಾಗಿದೆ, ಇದು ಪಕ್ಷದ ವಿರೋಧಿ ಚಟುವಟಿಕೆ ಅಂತ ಆರೋಪಿಸಿ ದಿನೇಶ್ ಗುಂಡೂರಾವ್ ಸೂಕ್ತ ಕ್ರಮ ಕೈಗೊಳ್ಳುವಂತೆ ಹೈಕಮಾಂಡ್ ಗೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ರೋಷನ್ ಬೇಗ್ ರನ್ನು ಉಚ್ಚಾಟಿಸಿ ಆದೇಶ ನೀಡಿದೆ.
ಸುಮಲತಾರದ್ದೇ ತಪ್ಪಾ ಅಥವಾ ಮಾಧ್ಯಮಗಳದ್ದಾ?? ಮಿಸ್ ಮಾಡದೇ ಈ ವಿಡಿಯೋ ನೋಡಿ
- Advertisement -