Saturday, December 28, 2024

Latest Posts

ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಯಾವುದು ಗೊತ್ತಾ..?

- Advertisement -

ಕ್ರೀಡೆ : ಎಲ್ಲಿ ನೋಡಿದ್ರು ಈಗ ಕ್ರಿಕೆಟ್ ನದ್ದೇ ಸುದ್ದಿ, ಅತ್ತ ಚಾಂಪಿಯನ್ ಪಟ್ಟಕ್ಕಾಗಿ ಇಂಗ್ಲೆಂಡ್ ನಲ್ಲಿ ವಿಶ್ವ ಶ್ರೇಷ್ಠ ತಂಡಗಳು ಸೆಣಸುತ್ತಿವೆ. ಇತ್ತ ಗಲ್ಲಿ ಗಲ್ಲಿಗಳಲ್ಲೂ ಬ್ಯಾಟು ಬಾಲು ಸದ್ದು ಮಾಡುತ್ತಿದೆ. ಹೀಗಾಗಿ ಎಲ್ಲಿ ನೋಡಿದ್ರು, ಕ್ರಿಕೆಟ್ ನದ್ದೇ ಸುದ್ದಿ. ಸದ್ಯದ ವಿಷಯಾ ಎನಪ್ಪ ಅಂದ್ರೆ, ವಿಶ್ವದಲ್ಲೇ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಒಂದು ರೆಡಿಯಾಗುತ್ತಿದೆ.

ಅಷ್ಟಕ್ಕೂ ಆ ಸ್ಟೇಡಿಯಂ ಇರೋದಾದ್ರೂ ಎಲ್ಲಿ, ಅಲ್ಲಿ ಎಷ್ಟು ಜನ ಕುಳಿತುಕೊಳ್ಳಬಹುದು ಅಂತಿರಾ…? ಯಸ್… ಆ ಕ್ರೀಡಾಂಗಣ ನಿರ್ಮಾಣ ಆಗ್ತಿರೋದು, ನಮ್ಮ ಭಾರತದಲ್ಲೇ. ಹೌದು..ಗುಜರಾತ್ ನ ಅಹಮದಾಬಾದ್ ನಲ್ಲಿ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣವಾಗುತ್ತಿದೆ. ಈ ಕ್ರೀಡಾಂಗಣ ದಲ್ಲಿ ಏಕ ಕಾಲಕ್ಕೆ ಒಂದು ಲಕ್ಷ, ಹತ್ತು ಸಾವಿರ ಮಂದಿ ಕುಳಿತು ಪಂದ್ಯ ವೀಕ್ಷಿಸಬಹುದಾಗಿದೆ. ಇದು ಆಸ್ಟ್ರೇಲಿಯಾದ ಮೆಲ್ಬರ್ನ್ ಕ್ರಿಕೆಟ್ ಸ್ಟೇಡಿಯಂಗಿಂತಲು ದೊಡ್ಡದಾಗಿದೆ. ಇದುವರೆಗೆ ವಿಶ್ವದ ಅತಿ ದೊಡ್ಡ ಕ್ರೀಡಾಂಗಣ ಅನ್ನೋ ಹಿರಿಮೆ ಹೊಂದಿದ್ದ ಮೆಲ್ಬರ್ನ್ ಕ್ರೀಡಾಂಗಣ ಒಂದು ಲಕ್ಷ, ಇಪ್ಪತ್ತನಾಲ್ಕು ಮಂದಿ ಸಾಮರ್ಥ್ಯ ಹೊಂದಿದೆ. ಸದ್ಯ ಅಹಮದಾಬಾದ್ ನಲ್ಲಿ ನಿರ್ಮಾಣವಾಗುತ್ತಿರುವ ಈ ಕ್ರೀಡಾಂಗಣದ ಚಿತ್ರದ ಮುಂದೆ ಪಾರ್ಥೀವ್ ಪಟೇಲ್ ನಿಂತಿರುವ ಪೋಟೋ ಒಂದು, ಸಾಮಾಜಿಕ ಜಾಲತಾಣಗಳಲ್ಲಿ ಪೊಸ್ಟ್ ಆಗಿದ್ದು ಟೀಮ್ ಇಂಡಿಯಾ ಫಾಸ್ಟ್ ಬೌಲರ್ ಜೆಸ್ಪ್ರಿತ್ ಬೂಮ್ರಾ ರಿ ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲದೇ “ಎ ನ್ಯೂ ಹೋಮ್ ಫಾರ್ ಇಂಡಿಯನ್ ಫ್ಯಾನ್ಸ್ ” ಅಂತ ಬರೆದು ಕೊಂಡಿದ್ದಾರೆ. ಯಸ್ ವೀಕ್ಷಕರೆ ಅದೇನೇ ಇರಲಿ, ವಿಶ್ವದಲ್ಲೇ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ಭಾರತದಲ್ಲಿ ನಿರ್ಮಾಣವಾಗುತ್ತಿದೆ ಅನ್ನೋದೆ ನಮ್ಮ ಹೆಮ್ಮೆ..

ನಂದನ್, ಸ್ಪೋರ್ಟ್ಸ್ ಬ್ಯೂರೋ, ಕರ್ನಾಟಕ ಟಿವಿ

ಧೋನಿ ಆಟಕ್ಕೆ ಸಚಿನ್ ಬೇಸರ ಮಾಡಿಕೊಂಡಿದ್ಯಾಕೆ..?

- Advertisement -

Latest Posts

Don't Miss