Sunday, April 13, 2025

Latest Posts

ಚಿನ್ನಾಭರಣ ತೊಳೆದು ಕೊಡುವುದಾಗಿ ಹೇಳಿ 1.45 ಲಕ್ಷ ರೂ. ಮೌಲ್ಯದ ಆಭರಣ ಎಗರಿಸಿದ ಖದೀಮರು

- Advertisement -

Hubballi News: ಹುಬ್ಬಳ್ಳಿ: ಹಳೆಯ ಚಿನ್ನಾಭರಣ ತೊಳೆದುಕೊಡುವ ನೆಪದಲ್ಲಿ 1.45 ಲಕ್ಷ ರೂಪಾಯಿ ಮೌಲ್ಯದ ಆಭರಣ ಪಡೆದು ಮಹಿಳೆಗೆ ವಂಚನೆ ಮಾಡಿರುವ ಘಟನೆ ನಡೆದಿದೆ. ನಗರದ ಜೋಳದ ಓಣಿಯ ಮಹಿಳೆ ಶ್ವೇತಾ ಖೋಡೆಗೆ ಇಬ್ಬರು ಅಪರಿಚಿತರು ವಂಚಿಸಿದ್ದಾರೆ. ಮಧ್ಯಾಹ್ನ ಮನೆಯ ಹತ್ತಿರ ಬಂದ ಅಪರಿಚಿತರು ಮಹಿಳೆಗೆ ಹಳೆಯ ಬಂಗಾರ ತೊಳೆದುಕೊಡುವುದಾಗಿ ನಂಬಿಸಿದ್ದಾರೆ. ಚಿನ್ನ ಹೊಳಪು ಮಾಡಿಕೊಡುವ ನೆಪದಲ್ಲಿ ನಾಲ್ಕು ತೊಲೆ ಮಂಗಳಸೂತ್ರ, ಒಂದು ತೊಲೆ ಚಿನ್ನದ ಸರ ಪಡೆದು ಪರಾರಿಯಾಗಿದ್ದಾರೆ. ಚಿನ್ನ ಕಳೆದುಕೊಂಡ ಮಹಿಳೆ ಘಂಟಿಕೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮೊದಲು ತಾಮ್ರದ ಚೊಂಬು, ಕಾಲು ಚೈನ್ ತೊಳೆದುಕೊಟ್ಟು ನಂಬಿಕೆ ಬರುವಂತೆ ಮಾಡಿದ ಖದೀಮರು ನಂತರ ನಾಲ್ಕೂವರೆ ತೊಲ ಆಭರಣ ಪಡೆದು ಕುಕ್ಕರ್‌ನಲ್ಲಿ ಹಾಕಿ ಕುದಿಸಲು ಹೇಳಿದ್ದಾರೆ. ಬಂಗಾರ ಕಪ್ಪಾಗಿದ್ದರಿಂದ ಅದಕ್ಕೆ ಅರಿಶಿಣ ಪುಡಿ ಮತ್ತು ಬಿಳಿ ಪೌಡರ್ ಹಾಕಿ ಕೊಟ್ಟು ಕುದಿಸಿ ಎಂದು ಹೇಳಿ ಆಭರಣದೊಂದಿಗೆ ಎಸ್ಕೇಪ್ ಆಗಿದ್ದಾರೆ. ಜೋಳದ ಓಣಿಯ ಶಂಕರ ಖಠಾವಕರ್ ಎಂಬುವವರ ಮನೆಯಲ್ಲಿ ಬಾಡಿಗೆಗೆ ಇದ್ದ ಶ್ವೇತಾ ಖೋಡೆ ಎಂಬ ಮಹಿಳೆಯನ್ನು ನಂಬಿಸಿ ಖದೀಮರು ಆಭರಣ ದೋಚಿದ್ದಾರೆ. ಮನೆಯಲ್ಲಿ ತಾಯಿ ಶ್ವೇತಾ ಹಾಗೂ ಮಗಳು ಇದ್ದ ಸಂದರ್ಭ ನೋಡಿ ವಂಚನೆ ನಡೆದಿದೆ. ವಂಚಕರ ಚಲನವಲನ ಸಿಸಿ ಟಿವಿ ಕ್ಯಾಮಾರಾದಲ್ಲಿ ಸರೆಯಾಗಿದೆ.

ಮಾಜಿ ಸಚಿವ ಹೆಚ್.ಡಿ.ರೇವಣ್ಣ ನೇತೃತ್ವದಲ್ಲಿ ಜೆಡಿಎಸ್ ಮುಖಂಡರು, ನಾಯಕರಿಂದ ಪ್ರೊಟೆಸ್ಟ್

ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಬ್ಯಾಂಕ್ ಗೇ ವಂಚಿಸಿದ್ದ ಅಧಿಕಾರಿ ಸೇರಿ ಇಬ್ಬರಿಗೆ ಶಿಕ್ಷೆ

ಹಾಸನ ಜಿಲ್ಲೆಯ 7 ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಕರವೇ ಒತ್ತಾಯ

- Advertisement -

Latest Posts

Don't Miss