Bengaluru: ಬೆಂಗಳೂರು: ಅಪಾರ್ಟ್ಮೆಂಟ್ಗಳಲ್ಲಿ ನಾನಾ ಥರದ ಶುಲ್ಕಗಳು ಇರುತ್ತವೆ. ಆದರೆ ಇಲ್ಲೊಂದು ಅಪಾರ್ಟ್ಮೆಂಟ್ನ ಸಂಗತಿ ಕೇಳಿ ಸಾರ್ವಜನಿಕರು ದಂಗಾಗಿದ್ದು, ಬಳಿಕ ಅಪಾರ್ಟ್ಮೆಂಟ್ನವರು ತೀವ್ರ ಅಸಮಾಧಾನವನ್ನೂ ಎದುರಿಸುವಂತಾಗಿದೆ.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಇಟ್ಟಿನ ಮಹಾವೀರ್ ಅಪಾರ್ಟ್ಮೆಂಟ್ನ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಷನ್ (ಆರ್ಡಬ್ಲ್ಯುಎ) ನಿಯಮ ಸಾರ್ವಜನಿಕರು ಮಾತ್ರವಲ್ಲದೆ ಪ್ರಾಣಿಹಕ್ಕು ಕಾರ್ಯಕರ್ತರ ಕೆಂಗಣ್ಣಿಗೂ ಗುರಿಯಾಗಿದೆ. ನಾಯಿ ಸಾಕಣೆ ಹಿನ್ನೆಲೆಯಲ್ಲಿ ಇಲ್ಲಿ ಇಂಥದ್ದೊಂದು ಸನ್ನಿವೇಶ ಸೃಷ್ಟಿಯಾಗಿದೆ.
ಅಂದರೆ ಈ ಅಪಾರ್ಟ್ಮೆಂಟ್ ನಿವಾಸಿಗಳು ನಾಯಿಯನ್ನು ಸಾಕುವುದಾದರೆ ಹತ್ತು ಸಾವಿರ ರೂ. ಠೇವಣಿ ನೀಡಬೇಕು. ಮಾತ್ರವಲ್ಲದೆ ಈಗಾಗಲೇ ನಾಯಿಯನ್ನು ಸಾಕುತ್ತಿರುವವರು ನ. 15ರ ಒಳಗೆ 10 ಸಾವಿರ ರೂ. ಠೇವಣಿ ಇಡಬೇಕು, ತಪ್ಪಿದರೆ ನ. 16ರಿಂದ ದಿನಕ್ಕೆ 100 ರೂಪಾಯಿಯಂತೆ ದಂಡ ವಿಧಿಸಲಾಗುವುದು ಎಂದೂ ಇಲ್ಲಿನ ಆರ್ಡಬ್ಲ್ಯುಎ ಹೇಳಿದೆ ಎನ್ನಲಾಗಿದೆ.
ಹೀಗೆ ಠೇವಣಿ ಇಟ್ಟ ಹಣವನ್ನು ನಾಯಿಯಿಂದ ಕಡಿತಕ್ಕೆ ಒಳಗಾದ ಸಂತ್ರಸ್ತರ ಚಿಕಿತ್ಸೆಗೆ ಇಲ್ಲವೇ ನಾಯಿಗೆ ಸಂಬಂಧಿಸಿದ ನಿರ್ವಹಣೆಗೆ ಬಳಸಲಾಗುವುದು ಎಂದು ಹೇಳಲಾಗಿದೆ. ಆದರೆ ಅಪಾರ್ಟ್ಮೆಂಟ್ನ ಈ ನಿಯಮಕ್ಕೆ ಸಾರ್ವಜನಿಕರಿಂದ ಸೋಷಿಯಲ್ ಮೀಡಿಯಾದಲ್ಲಿ ಆಕ್ಷೇಪ ವ್ಯಕ್ತವಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ಅಧಿಕಾರಿಗಳು, ಇದೊಂದು ಕಾನೂನುಬಾಹಿರ ಕ್ರಮ ಎಂದಿದ್ದಾರೆ. ಮಾತ್ರವಲ್ಲ, ಮನೆಯಲ್ಲಿ ನಾಯಿ ಸಾಕುವುದಕ್ಕೆ ಶುಲ್ಕ ವಿಧಿಸುವಂತಿಲ್ಲ. ಯಾವುದೇ ನಿವಾಸಿಗರ ಕಲ್ಯಾಣ ಸಂಘವೂ ಪ್ರಾಣಿಗಳ ನಿರ್ವಹಣೆ ಹೆಸರಲ್ಲಿ ಹಣ ಸಂಗ್ರಹಿಸುವಂತಿಲ್ಲ. ಬಿಬಿಎಂಪಿ ಪಶು ಆಸ್ಪತ್ರೆಗಳಲ್ಲಿ ನಾಯಿಗಳಿಗೆ ಉಚಿತವಾಗಿ ಚಿಕಿತ್ಸೆ ಸಿಗುತ್ತದೆ. ಅಲ್ಲದೆ, ನಾಯಿ ಕಚ್ಚಿದ ಪ್ರಕರಣಗಳಲ್ಲಿ ಸಂತ್ರಸ್ತರಿಗೆ 2 ಸಾವಿರ ರೂ. ಪರಿಹಾರ ಕೂಡ ನೀಡಲಾಗುತ್ತದೆ ಎಂದಿದ್ದಾರೆ.
‘ದೊಡ್ಡ ಮಟ್ಟದಲ್ಲಿ ಅನಾಹುತವಾದರೆ ನೇರವಾಗಿ ರೂರಲ್ ಪೊಲೀಸ್ ಠಾಣೆಯವರೇ ಕಾರಣರಾಗುತ್ತಾರೆ’
ಮೇಕ್ ಇನ್ ಇಂಡಿಯಾ ಯೋಜನೆಯಡಿ ಮಹಿಳೆಗೆ ಮೋಸ: 1.2 ಕೋಟಿ ರೂ. ವಂಚಿಸಿದ ಉದ್ಯಮಿ
‘ಕಾಂಗ್ರೆಸ್ ಪಕ್ಷಕ್ಕೆ ಜಯವಾಗಲಿ. ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಜಯವಾಗಲಿ’