Hubballi News:ಹುಬ್ಬಳ್ಳಿ: ದಕ್ಷಿಣ ಭಾರತದ ಮುಸ್ಲಿಂ ಧರ್ಮ ಗುರುಗಳ ಸಮಾವೇಶ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಭಾಷಣ ಮಾಡಿದ್ದು, ಇವತ್ತು ನಾಳೆ ಎರಡು ದಿನ ಸಮಾವೇಶ ನಡೀತಾ ಇದೆ. ಈ ಎರಡು ದಿನಗಳ ಸಮಾವೇಶದಲ್ಲಿ ಸಮಾಜದಲ್ಲಿ ಸಾಮರಸ್ಯ, ಸೌಹಾರ್ದತೆ ಉಂಟುಮಾಡಲು ಚರ್ಚೆ ನಡಿಯುತ್ತೆ. ಚರ್ಚೆಯಲ್ಲಿ 200 ಕ್ಕೂ ಹೆಚ್ಚು ಧರ್ಮ ಗುರುಗಳು ಇರ್ತಾರೆ. ಇಡೀ ಪ್ರಪಂಚದಲ್ಲೇ ಭಾರತ ದೇಶ ವಿಶಿಷ್ಟವಾದ ದೇಶ. ಜಗತ್ತಿನಲ್ಲೆ ಹೆಚ್ಚು ಜನಸಂಖ್ಯೆ ಇರುವ ದೇಶ ಭಾರತ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಹಲವು ಧರ್ಮಗಳ ಪಾಲನೆ ಮಾಡುವ ಜನ ದೇಶದಲ್ಲಿದ್ದಾರೆ. ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದಲ್ಲಿ ಧರ್ಮಗಳ ಪಾಲನೆ ಮಾಡಲು ಸ್ವತಂತ್ರರು ಅಂತಾ ಹೇಳಿದ್ದಾರೆ. ನನಗೆ ಸರಿ ಅನಿಸಿದ ಧರ್ಮ ಪಾಲನೆ ಮಾಡಬೇಕು. ಎಲ್ಲಾ ಧರ್ಮಗಳು ಮನುಷ್ಯತ್ವವನ್ನೇ ಪಾಲನೆ ಮಾಡುತ್ತವೆ. ಕುವೆಂಪು ಒಂದು ಮಾತು ಹೇಳಿದ್ದಾರೆ, ಸಮಾಜ ಸರ್ವ ಜನಾಂಗದ ಶಾಂತಿಯ ತೋಟ ರಸಿಕರ ಕಣ್ ಗಳ ಸೆಳೆಯುವ ನೋಟ. ಹಿಂದೂ ಮುಸ್ಲಿಂ ಪಾರಸಿಕ ಉದ್ಯಾನ. ನಮ್ಮ ಸಮಾಜದಲ್ಲಿ ವೈವಿದ್ಯತೆ ಇದೆ ಅದ್ರಲ್ಲಿ ಏಕತೆ ಕಾಣಬೇಕು. ಸಹಿಷ್ಣುತೆ, ಸಹಬಾಳ್ವೆ ಜೀವನದಲ್ಲಿ ಅಳವಡಿಸಿಕೊಂಡ್ರೆ ಬೇಧ ಭಾವ ಬರಲು ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಹುಟ್ಟವಾಗ ವಿಶ್ವ ಮಾನವರು ಸಾಯುವಾಗ ಅಲ್ಪ ಮಾನವರು ಆಗ್ತೇವೆ. ಸೂಫಿ ಭಾಷಾ ಪೀರಾ ಅವರ ಜೀವಿತ ಕಾಲದಲ್ಲಿ ಮಾಡ್ತಾ ಇದ್ರೂ. ಹಿಂದೂ ಮುಸ್ಲಿಂ ನಲ್ಲಿ ಸಾಮರಸ್ಯ ಉಂಟುಮಾಡಲು ಪ್ರಯತ್ನ ಮಾಡ್ತಾ ಇದ್ರೂ. ಅವರ ಮಗ ಸೈಯದ್ ತಾಜುದ್ದಿನ್ ಖಾದ್ರಿ ಅವರ ತಂದೆ ಹಾಗೇ ಮಾಡ್ತಾ ಇದ್ದಾರೆ. ಅವರಿಗೆ ಕೋಟಿ ಕೋಟಿ ನಮನ. ಯಾರು ಇದೆ ಧರ್ಮ ಜಾತಿಯಲ್ಲಿ ಹುಟ್ಟೋಕೆ ಅರ್ಜಿ ಹಾಕಿರಲಿಲ್ಲ. ಗೌರವ ಕೊಟ್ಟು ಬಾಳುವುದೇ ಮನುಷ್ಯತ್ವ, ಕೊಡದೆ ಹೋದ್ರೆ ದ್ರೋಹ ಮಾಡಿದಂತೆ. ರಾಜಕೀಯಕ್ಕಾಗಿ ಧರ್ಮ, ಜಾತಿಗಳ ನಡುವೆ ಒಡಕು ಅದು ಕ್ಷಣಿಕ. ವೈಚಾರಿಕತೆಯಿಂದ ಕೂಡಿದ ಶಿಕ್ಷಣ ಸಿಗಬೇಕು. ಎಷ್ಟೇ ಕಲಿತು ಮತ್ತೆ ಜಾತಿ ಮಾಡಿದರೆ ಏನು ಪ್ರಯೋಜನ..? ಎಂದು ಸಿಎಂ ಸಿದ್ದರಾಮಯ್ಯನವರು ಪ್ರಶ್ನಿಸಿದ್ದಾರೆ.
ಬಸವಣ್ಣನವರು 850 ವರ್ಷಗಳ ಹಿಂದೆಯೇ ಅವರು ವಚನ ಹೇಳಿದ್ದಾರೆ. ಎಲ್ಲಾ ಧರ್ಮ ಗುರುಗಳು ವರ್ಗ, ಜಾತಿ ರಹಿತ ಸಮಾಜ ನಿರ್ಮಾಣ ಆಗಬೇಕು ಅಂತಾ ಹೇಳಿದ್ದು. ಕರ್ನಾಟಕದ ಏಳು ಕೋಟಿ ಜನರು ಒಂದೇ ತಾಯಿ ಮಕ್ಕಳು, ನಾವೆಲ್ಲಾ ಸೋದರರು. ನನಗೆ ರಕ್ತ ಬೇಕಾದಾಗ ಜಾತಿ ಕೇಳಿ ರಕ್ತ ಕೇಳ್ತಿವಾ? ಯಾರದೇ ಇದ್ರೂ ಕೊಡಿ ಅಂತೀವಿ. ಹಾಜರಾತ್ ಅವರು ಈ ದರ್ಗಾ ಅಭಿವೃದ್ಧಿಗೆ ದುಡ್ಡು ಕೇಳಿದ್ದಾರೆ ಮುಂದಿನ ವರ್ಷ ಅನುದಾನ ಕೊಡ್ತೀನಿ. ನಾನು ಕೊಡ್ತೀನಿ ಅಂದಮೇಲೆ ಕೊಟ್ಟೆ ಕೊಡ್ತೀನಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬಡವರೆಲ್ಲಕಡೆಗಳಲ್ಲೂ ಇದ್ದಾರೆ, ನಾವು ಎಲ್ಲರಿಗೂ ಕೊಡ್ತೆವೆ. ಶಿಕ್ಷಣ ಅಂದ್ರೆ ಜ್ಞಾನ ವಿಕಾಸ ಆಗಬೇಕು. ಧರ್ಮ ಜಾತಿ ವೈರತ್ವ ಉಂಟುಮಾಡುವವರ ಬಗ್ಗೆ ಎಚ್ಚರಿಕೆ ವಹಿಸೋಣ. ಈ ವರ್ಷ 4000 ಕೋಟಿ ಅಲ್ಪಸಂಖ್ಯಾತ ಇಲಾಖೆಗೆ ಕೊಟ್ಟಿದ್ದೇವೆ. ಪ್ರತಿ ವರ್ಷ ಹೆಚ್ಚು ಮಾಡ್ತೇವೆ. ಕೊನೆಯದಾಗಿ 10 ಸಾವಿರ ಕೋಟಿ ಮಾಡಬೇಕು ಅನ್ಕೊಂಡಿದ್ದೀನಿ. ನಾನು ಹೆಚ್ಚು ಮಾಡಿದ್ದಾನೆಲ್ಲ ಕಳೆದ ಸರ್ಕಾರ ಕಡಿಮೆ ಮಾಡಿದ್ದಾರೆ. ನಾನು ಮತ್ತೆ ಅದನ್ನು ಹೆಚ್ಚು ಮಾಡ್ತೇನೆ. ನೀವು ಭಾರತೀಯರಲ್ವ?. ದೇಶದ ಸಂಪತ್ತು ನಿಮಗೂ ಸೇರಬೇಕು ನನಗೂ ಸೇರಬೇಕು. ನಿಮಗೆ ಯಾವುದೇ ಕಾರಣಕ್ಕೂ ಅನ್ಯಾಯ ಆಗೋಕೆ ಬಿಡಲ್ಲ. ರಕ್ಷಣೆ ಕೊಡ್ತೇವೆ. ಎಲ್ಲಾ ಧರ್ಮ, ಜಾತಿ ಅವರಿಗೂ ರಕ್ಷಣೆ ಕೊಡ್ತೇವೆ. ಕಾನೂನು ಎಲ್ಲರಿಗೂ ಒಂದೇ. ಸೌಹಾರ್ದತೆ ಉಂಟುಮಾಡಲು ಎಲ್ಲಾ ಪ್ರಯತ್ನ ನಮ್ಮ ಸರ್ಕಾರ ಮಾಡುತ್ತೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ರಮೇಶ್ ಜಾರಕಿಹೊಳಿ ಆಪ್ತನಿಗೆ ಚಾಕು ಇರಿತ, ಸಚಿವೆ ಹೆಬ್ಬಾಳ್ಕರ್ ಸಹೋದರನ ಆಪ್ತನ ಮೇಲೆ ಆರೋಪ!
ಮುಂಬರುವ ಲೋಕಸಭೆಯಲ್ಲಿ 350ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುತ್ತೆ: ರೇಣುಕಾಚಾರ್ಯ ಭವಿಷ್ಯ