Wednesday, June 18, 2025

Latest Posts

112 ತುರ್ತು ಸೇವೆಯ ಹೊಯ್ಸಳ ವಾಹನದ ಸಿಬ್ಬಂದಿಗಳು ಕುಡಿದ ಮತ್ತಿನಲ್ಲಿ ಫುಲ್ ಟೈಟ್

- Advertisement -

Hubli News: ಹುಬ್ಬಳ್ಳಿ: ಪೊಲೀಸ್ ಪೇದೆ ಕುಡಿದ ಮತ್ತಿನಲ್ಲಿ 112 ಹೊಯ್ಸಳ ವಾಹನ ಚಲಾಯಿಸಿ ಆಟೋ, ಬೈಕ್ ಲಾರಿ ಹಲವು ವಾಹನ ಸವಾರರಿಗೆ ಕಿರಿ ಕಿರಿ ಮಾಡಿರುವ ಘಟನೆ ವಾಣಿಜ್ಯ ನಗರಿಯ ಹೃದಯ ಭಾಗದಲ್ಲಿರುವ ಮಿಷನ್ ಕಾಂಪೌಂಡ್ ಬಳಿ ನಡೆದಿದೆ. ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯ ವಾಹನದ ಸಂಖ್ಯೆ KA25G 0652 ತುರ್ತು ಹೊಯ್ಸಳ ವಿಭಾಗದ ಪೊಲೀಸ್ ಪೇದೆ ಬಸವರಾಜ ವರ್ತನೆಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತುರ್ತು ಸೇವೆ 112 ಹೊಯ್ಸಳ ಬಂದೋಬಸ್ತ್​ ನೀಡುವ ಸಿಬ್ಬಂದಿಯೇ ಈ ರೀತಿ ಕುಡಿದು ವಾಹನ ಸವಾರರಿಗೆ ಕಿರಿ ಕಿರಿ ಎಷ್ಟರ ಮಟ್ಟಿಗೆ ಸರಿ ಎಂಬುದು ಸಾರ್ವಜನಿಕರ ಪ್ರಶ್ನೆ ಆಗಿರುವದು ಇನ್ನು ಮುಂದೆ ಆದರೂ ಖಡಕ್ ಪೊಲೀಸ್ ಕಮಿಷನರ ಎನ್ ಶಶಿಕುಮಾರ್ ಅವರು ಇಂತಹ ಸಿಬ್ಬಂದಿಗಳಿಗೆ ಪಾಠ ಕಲಿಸುತ್ತಾರೆಯೋ ಇಲ್ಲೊವೋ ಎಂಬುದನ್ನ ಕಾದು ನೋಡಬೇಕಾಗಿದೆ .

- Advertisement -

Latest Posts

Don't Miss