Friday, November 22, 2024

Latest Posts

ಕಾಂಗ್ರೆಸ್ ಗೆದ್ದರೆ 1 ಲಕ್ಷ ರೂಪಾಯಿ ಬರುತ್ತದೆ ಎಂದು ಬರೀ 10 ದಿನಗಳಲ್ಲಿ 12 ಸಾವಿರ ಅಕೌಂಟ್ ಓಪೆನ್

- Advertisement -

Bengaluru News: ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ, ತಮ್ಮ ಖಾತೆಗೆ 1 ಲಕ್ಷ ರೂಪಾಯಿ ಬರುತ್ತದೆ ಎಂದು, ಕೆಲವರು ಬ್ಯಾಂಕ್‌ನಲ್ಲಿ ಅಕೌಂಟ್ ಓಪೆನ್ ಮಾಡಿದ್ದು, ಕೇವಲ 10 ದಿನಗಳಲ್ಲಿ 12 ಸಾವಿರ ಅಕೌಂಟ್ ಓಪೆನ್ ಆಗಿದೆ.

ಕೇಂದ್ರದಲ್ಲಿ ಇಂಡಿ ಒಕ್ಕೂಟ ಅಧಿಕಾರಕ್ಕೆ ಬಂದರೆ, ಪ್ರತೀ ತಿಂಗಳು ಖಾತೆಗೆ 8,500 ರೂಪಾಯಿ ಜಮೆ ಆಗುತ್ತದೆ ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿದ್ದು, ಇದೀಗ ಹಲವರು ಬ್ಯಾಂಕ್‌ನಲ್ಲಿ ಖಾತೆ ಓಪೆನ್ ಮಾಡಿದ್ದಾರೆ. 12 ಸಾವಿರ ಮಂದಿ ಅಕೌಂಟ್ ತೆರೆದಿದ್ದು, 200 ರೂಪಾಯಿ ಠೇವಣಿ ಇಟ್ಟಿದ್ದಾರೆ. ಈ ಮೂಲಕ ಬ್ಯಾಂಕ್‌ಗೆ 24 ಲಕ್ಷ ರೂಪಾಯಿ ಹರಿದು ಬಂದಿದೆ. ಅಲ್ಲದೇ ಈಗಲೂ ಹಲವರು ಪ್ರತೀ ದಿನ ಹೊಸ ಹೊಸ ಖಾತೆ ತೆಗೆಯುತ್ತಿದ್ದಾರೆ.

ವಿಶೇಷ ಅಂದ್ರೆ ಹೆಣ್ಣು ಮಕ್ಕಳೇ ಖುದ್ದಾಗಿ, ಬ್ಯಾಂಕ್‌ಗೆ ಬಂದು ಖಾತೆ ಓಪನ್ ಮಾಡಿದ್ದಾರೆ. ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಬ್ಯಾಂಕ್ ಅಕೌಂಟ್ ಓಪನ್ ಮಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬರಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

ಲೋಕಸಭಾ ಮತ ಎಣಿಕೆ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಸಿ ದಿವ್ಯಪ್ರಭು

ಮೂರು ಕ್ಷೇತ್ರ ಗೆಲ್ತಿವಿ. ನೀವೆಲ್ಲಾ ಕೋ ಆಪರೇಟ್ ಮಾಡಿದ್ದೀರಿ ಸಂತೋಷ: ಹೆಚ್.ಡಿ.ರೇವಣ್ಣ

ವಿನೋದ್ ಅಸೂಟಿ ಗೆಲ್ಲೋದು ಪಕ್ಕಾ: ಕವಡೆ ಶಾಸ್ತ್ರ ಕೇಳಿದ ಕೈ ಅಭ್ಯರ್ಥಿ ಅಭಿಮಾನಿ

- Advertisement -

Latest Posts

Don't Miss