National News: ಜಗತ್ಪ್ರಸಿದ್ಧ ಪುಣ್ಯಕ್ಷೇತ್ರ ಕಾಶಿಯಿಂದ ಎಲ್ಲ ಮಾಂಸದಂಗಡಿಗಳನ್ನು ನಗರಪ್ರದೇಶದ ಆಚೆಗೆ ಶಿಫ್ಟ್ ಮಾಡಬೇಕಿದೆ ಎಂದು ಆದೇಶ ಹೊರಡಿಸಲಾಗಿದೆ. ಕಾಶಿಯನ್ನು ಮಾಂಸಮುಕ್ತ ಮಾಡಲು ಈ ಯೋಜನೆ ಜಾರಿಗೆ ತರಲಾಗುತ್ತಿದೆ.
ವಾರಣಾಸಿಯಲ್ಲಿರುವ ಸಂಪೂರ್ಣ ನಗರದಲ್ಲಿ ಮೀನು, ಮಾಂಸದ ಮಾರಾಟವನ್ನು ನಿಷೇಧಿಸಿ, ನಗರದಿಂದಾಚೆಗೆ ದೊಡ್ಡ ಮಾರ್ಕೇಟ್ ಮಾಡಿ, ಅಲ್ಲಿ ಮಾಂಸ, ಮೀನನ್ನು ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ರಾಮನಗರ, ಶಿವಪುರ, ಗಣೇಶ್‌ಪುರ್, ಸುಜಾಬಾದ್, ಅವಲೇಶ್‌ಪುರ್ ಈ ಜಾಗಗಳಲ್ಲಿ ಮಾಂಸದಂಗಡಿಯನ್ನು ಶಿಫ್ಟ್ ಮಾಡಲಾಗುತ್ತದೆ.
ಶ್ರಾವಣಕ್ಕೂ ಮುನ್ನ ಈ ಕೆಲಸ ಮಾಡಲಾಗುತ್ತದೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ. ಪಾವನ ನಗರಿಯಾಗಿರುವ ಶಂಕರನ ವಾಸಸ್ಥಳ ಕಾಶಿಯನ್ನು ಸಂಪೂರ್ಣ ಶುದ್ಧ ಮಾಡುವುದಕ್ಕಾಗಿ ಈ ಯೋಜನೆ ಜಾರಿಗೆ ತರಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.




